ಆ್ಯಪ್ನಗರ

ಕೋಲಾರ ಬಳಿಕ ದಕ್ಷಿಣ ಕನ್ನಡದಲ್ಲಿ ಮಿಡತೆ ಹಾವಳಿ; ಸ್ಥಳೀಯರಲ್ಲಿ ಮನೆ ಮಾಡಿದ ಆತಂಕ

ಕೊರೊನಾ ಬಿಕ್ಕಟ್ಟಿನಲ್ಲಿ ದೇಶಕ್ಕೆ ಮಿಡತೆಗಳು ಸವಾಲೊಡ್ಡಿವೆ. ಅದರಂತೆ ರಾಜ್ಯದಲ್ಲೂ ಸಣ್ಣದಾಗಿ ಮಿಡತೆಗಳು ದಾಂಗುಡಿ ಇಡುತ್ತಿವೆ. ಕೆಲವು ದಿನಗಳ ಹಿಂದೆ ಕಂಡುಬಂದಿದ್ದ ಮಿಡತೆಗಳು ಈಗ ದಕ್ಷಿಣ ಕನ್ನಡದಲ್ಲೂ ಪತ್ತೆಯಾಗಿದ್ದು, ಸ್ಥಳೀಯರು ಆರಂಕಗೊಂಡಿದ್ದಾರೆ.

TIMESOFINDIA.COM 31 May 2020, 1:17 pm
ಮಂಗಳೂರು: ರಾಷ್ಟ್ರದ ರೈತ ಸಮುದಾಯದಲ್ಲಿ ಆತಂಕ ಸೃಷ್ಟಿಸಿರುವ ಮಿಡತೆಗಳು ಈಗ ದಕ್ಷಿಣ ಕನ್ನಡಕ್ಕೂ ಲಗ್ಗೆಯಿಟ್ಟಿವೆ. ಬೆಳ್ತಂಗಡಿ ತಾಲೂಕು ಶಿರಲಾಲು ಗ್ರಾಮದ ಬಳಿ ಬಹಳಷ್ಟು ಸಂಖ್ಯೆಯ ಮಿಡತೆಗಳು ಕಂಡುಬಂದಿರುವುದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
Vijaya Karnataka Web ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯ ಶಿರಲಾಲು ಗ್ರಾಮದಲ್ಲಿ ಕಂಡುಬಂದ ಮಿಡತೆಗಳು


ಇಲ್ಲಿನ ಅನೇಕ ಪ್ರದೇಶಗಳಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಮಿಡತೆಗಳನ್ನು ನೋಡಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಿದ್ದು, ಕೃಷಿ ಇಲಾಖೆಗೂ ಸಹ ಮಾಹಿತಿ ನೀಡಿದ್ದಾರೆ. ಶಿರಲಾಲು ಗ್ರಾಮಸ್ಥರೊಬ್ಬರು ಇಲ್ಲಿ ಕೀಟಗಳು ಬಹಳಷ್ಟು ಸಂಖ್ಯೆಯಲ್ಲಿದ್ದು, ಅನೇಕ ರೈತರ ಬೆಳೆಗಳನ್ನು ನಾಶಪಡಿಸಿವೆ ಎಂದು ಹೇಳಿದ್ದಾರೆ.

ಇನ್ನು, ಬೆಳ್ತಂಗಡಿ ತಾಲೂಕಿನಲ್ಲಿ ಮಿಡತೆಗಳಿರುವುದನ್ನು ಅನೇಕ ರೈತರು ಕಣ್ಣಾರೆ ಕಂಡಿದ್ದೇವೆ, ಈ ಬಗ್ಗೆ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೇವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಎಂಸಿ ಸೀತಾ, ಮಿಡತೆಗಳ ಹಾವಳಿ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ. ಈಗಾಗಲೇ ಕೀಟ ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದು, ಹೆಚ್ಚಿನ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ ಎಂದು ಹೇಳಿದ್ದಾರೆ.

ಕೋಲಾರದ ಸಮೀಪ ಮಿಡತೆಗಳ ಹಾವಳಿ: ದಿಂಬಗೇಟ್‌ ಬಳಿ ದಾಂಗುಡಿ ಇಟ್ಟ ಕೀಟಗಳು

ಶನಿವಾರ ಸಂಜೆ ನಮಗೆ ಮಿಡತೆಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ದೊರೆತಿದೆ. ನಾವು ತಕ್ಷಣ ಕೀಟ ತಜ್ಞರನ್ನು ಸಂಪರ್ಕಿಸಿ, ರೈತರು ಕಳುಹಿಸಿದ ಫೋಟೋಗಳನ್ನು ಅವರಿಗೆ ಕಳುಹಿಸಲಾಯಿತು. ಫೋಟೋಗಳನ್ನು ಪರಿಶೀಲಿಸಿದ ತಜ್ಞರು ಬೆಳ್ತಂಗಡಿಯಲ್ಲಿ ಕಂಡುಬಂದ ಕೀಟಗಳನ್ನು ಕ್ಯಾಲೀಟ್ರೋಪಿಸ್‌ ಮಿಡತೆ ಅಥವಾ ಬಣ್ಣದ ಮಿಡತೆಗಳಾಗಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ ಎಂದು ಅವರು ಹೇಳಿದರು.

ವಿಮಾನಯಾನಕ್ಕೂ ಮಿಡತೆ ಕಾಟ: ಲ್ಯಾಂಡಿಂಗ್‌, ಟೇಕಾಫ್‌ ವೇಳೆ ಅಪಾಯ!

ಇನ್ನು, ಮರುಭೂಮಿಯ ಮಿಡತೆಗಳು ಸಾಮಾನ್ಯವಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಬರುತ್ತವೆ ಎಂದು ತಜ್ಞರು ವಿಶ್ಲೇಷಿಸಿದ್ದು, ದಕ್ಷಿಣ ಕನ್ನಡದಲ್ಲಿ ಕಂಡುಬಂದ ಮಿಡತೆಗಳು ಮರುಭೂಮಿಯ ಮಿಡತೆಗಳು ಆಗಿರಲಿಕ್ಕಿಲ್ಲ. ಇಲ್ಲಿನ ಮಿಡತೆಗಳ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ಜಂಟಿ ನಿರ್ದೇಶಕಿ ಎಂಸಿ ಸೀತಾ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ