ಆ್ಯಪ್ನಗರ

ಮಂಗಳೂರು: ವಿಮಾನ ಟೇಕಾಫ್ ವೇಳೆ ತಪ್ಪಿದ ದುರಂತ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಟೇಕ್ ಆಫ್ ವೇಳೆ ರನ್ ವೇನಲ್ಲಿ ಲಗೇಜ್ ಟ್ರಕ್ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಇಂದು ಬೆಳಗ್ಗೆ ನಡೆದಿದೆ.

Vijaya Karnataka Web 11 Jan 2018, 7:50 pm
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನವೊಂದು ಟೇಕ್ ಆಫ್ ವೇಳೆ ರನ್ ವೇನಲ್ಲಿ ಲಗೇಜ್ ಟ್ರಕ್ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ಇಂದು ಬೆಳಗ್ಗೆ ನಡೆದಿದೆ.
Vijaya Karnataka Web managalore airport
ಮಂಗಳೂರು: ವಿಮಾನ ಟೇಕಾಫ್ ವೇಳೆ ತಪ್ಪಿದ ದುರಂತ


ಮಂಗಳೂರು-ಮುಂಬೈ ಜೆಟ್ ಏರ್ವೇಸ್ ವಿಮಾನ ಹಾರಾಟ ಆರಂಭಿಸುವ ವೇಳೆ ಈ ಅಚಾತುರ್ಯ ಸಂಭವಿಸಿದ್ದು, ಏರ್ ಟ್ರಾಫಿಕ್ ಕಂಟ್ರೋಲರ್ ಅವರ ಸಕಾಲಿಕ ಸಮಯಪ್ರಜ್ಞೆಯಿಂದ ಭಾರೀ ದುರಂತವೊಂದು ತಪ್ಪಿದೆ.

ಮಂಗಳೂರು-ಮುಂಬೈ ಜೆಟ್ ಏರ್ವೇಸ್ ವಿಮಾನ ಟೇಕಾಫ್ ಆಗುತ್ತಿದ್ದಂತೆ ರನ್ ವೇ ಮಧ್ಯಭಾಗದಲ್ಲಿ ಲಗೇಜ್ ಟ್ರಕ್ ವೊಂದು ಕಾಣಿಸಿಕೊಂಡಿತ್ತೆನ್ನಲಾಗಿದೆ. ಇದನ್ನು ಗಮನಿಸಿದ ಏರ್ ಟ್ರಾಫಿಕ್ ಕಂಟ್ರೋಲರ್ ತಕ್ಷಣ ಸೂಚನೆ ನೀಡಿದ್ದರಿಂದ ವಿಮಾನ ಟೇಕಾಫ್ ಅನ್ನು ತಡೆಹಿಡಿಯಲಾಯಿತು. ಇದರಿಂದ ಕೆಲಕಾಲ ಆತಂಕದ ವಾತಾವರಣ ನೆಲೆಸಿತ್ತು. ಕೆಲಹೊತ್ತು ಸಂಚಾರ ಮೊಟಕುಗೊಂಡಿತು. ರನ್ವೇಯನ್ನು ಅಡಚಣೆಮುಕ್ತಗೊಳಿಸಿದ ಬಳಿಕ ವಿಮಾನ ವಿಮಾನ ಹಾರಾಟ ಮುಂದುವರಿಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ