ಆ್ಯಪ್ನಗರ

ಮಂಗಳೂರು: ಸೆಂಟ್ರಲ್‌ ಮಾರುಕಟ್ಟೆ ಭಾಗಶಃ ಆರಂಭ

ಮಾರುಕಟ್ಟೆಯ ಮುಖ್ಯ ದ್ವಾರದಲ್ಲಿ ಮಹಾನಗರ ಪಾಲಿಕೆಯಿಂದ ಫ್ಲೆಕ್ಸ್‌ನ ನೋಟಿಸ್‌ ಹಾಕಿ, ಪೊಲೀಸ್‌ ಕಾವಲು ಮೂಲಕ ಒಳಗಿನ ಚಿಲ್ಲರೆ ತರಕಾರಿ, ಹಣ್ಣು ವ್ಯಾಪಾರ ತೆರೆಯಲು ಅವಕಾಶ ನೀಡಿರಲಿಲ್ಲ.

Vijaya Karnataka Web 23 Sep 2020, 8:18 pm
ಮಂಗಳೂರು: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಸೆಂಟ್ರಲ್‌ ಮಾರುಕಟ್ಟೆ ಸಂಕೀರ್ಣದ ಹೊರ ಭಾಗದ ಕೆಲವು ಅಂಗಡಿಗಳು ಎರಡು ದಿನಗಳಿಂದ ತೆರೆದುಕೊಂಡು ವ್ಯಾಪಾರ ಆರಂಭಿಸಿದೆ.
Vijaya Karnataka Web ಮಂಗಳೂರು ಸೆಂಟ್ರಲ್‌ ಮಾರುಕಟ್ಟೆ
ಮಂಗಳೂರು ಸೆಂಟ್ರಲ್‌ ಮಾರುಕಟ್ಟೆ


ಮಾರುಕಟ್ಟೆಯ ಮುಖ್ಯ ದ್ವಾರದಲ್ಲಿ ಮಹಾನಗರ ಪಾಲಿಕೆಯಿಂದ ಫ್ಲೆಕ್ಸ್‌ನ ನೋಟಿಸ್‌ ಹಾಕಿ, ಪೊಲೀಸ್‌ ಕಾವಲು ಮೂಲಕ ಒಳಗಿನ ಚಿಲ್ಲರೆ ತರಕಾರಿ, ಹಣ್ಣು ವ್ಯಾಪಾರ ತೆರೆಯಲು ಅವಕಾಶ ನೀಡಿರಲಿಲ್ಲ.

ಇಲ್ಲಿ ವ್ಯಾಪಾರಕ್ಕೆ ಅನುಮತಿ ನೀಡುವಂತೆ ಹೈಕೋರ್ಟ್‌ ನೀಡಿರುವ ನಿರ್ದೇಶನದಂತೆ, ಮಾನ್ಯತೆ ಪಡೆದಿರುವ ವ್ಯಾಪಾರ ಪರವಾನಗಿ ಹೊಂದಿರುವ ವ್ಯಾಪಾರಿಗಳು ವಾಣಿಜ್ಯ ಪರವಾನಗಿ ಪತ್ರ, ಗುರುತು ಪತ್ರದ ಜತೆಗೆ ಬುಧವಾರ ಮತ್ತು ಗುರುವಾರ ಪಾಲಿಕೆ ಆಯುಕ್ತರನ್ನು ಭೇಟಿಯಾಗಲು ತಿಳಿಸಲಾಗಿತ್ತು.

ಅದರಂತೆ, ಬುಧವಾರ ವ್ಯಾಪಾರಿಗಳ ತಂಡವು ಆಯುಕ್ತರನ್ನು ಭೇಟಿಯಾಗಿ, ದಾಖಲೆಗಳನ್ನು ಮಂಡಿಸಿದೆ. ಎಲ್ಲ ದಾಖಲೆಗಳ ಪರಿಶೀಲನೆ ಬಳಿಕ ತರಕಾರಿ ಹಾಗೂ ಹಣ್ಣು ವ್ಯಾಪಾರ ಕೂಡ ಕೆಲವು ದಿನಗಳಲ್ಲಿ ಕಾನೂನುಬದ್ಧವಾಗಿ ಪುನಾರಂಭಗೊಳ್ಳಲಿದೆ. ಹೊರಭಾಗದ ಕೆಲವು ಅಂಗಡಿ ತೆರೆದಿದ್ದು, ಇನ್ನಷ್ಟು ವ್ಯಾಪಾರ ಗುರುವಾರದಿಂದ ಆರಂಭಗೊಳ್ಳಲಿದೆ ಎಂದು ಸೆಂಟ್ರಲ್‌ ಮಾರ್ಕೆಟ್‌ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಹಸನ್‌ ಕೆಮ್ಮಿಂಜೆ ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ