ಆ್ಯಪ್ನಗರ

ಮಹಿಳೆಯರಿಗೆ ಜೈ ಎಂದ ಮಂಗಳೂರು ದಸರಾ: ಹುಲಿವೇಷದಲ್ಲಿ ಮಿಂಚಿದ ಯುವತಿಯರು

ಸಂಜೆ 4 ಗಂಟೆಗೆ ಗಣಪತಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು.

Vijaya Karnataka 20 Oct 2018, 11:10 am
ಮಂಗಳೂರು: ಮಂಗಳೂರು ದಸರಾ ನವರಾತ್ರಿ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಶೋಭಾಯಾತ್ರೆ ಶುಕ್ರವಾರ ಕುದ್ರೋಳಿ ಶ್ರೀಗೋಕರ್ಣನಾಥ ಕ್ಷೇತ್ರದಲ್ಲಿ ವೈಭವದಿಂದ ನಡೆಯಿತು. ಜಾತಿ, ಮತ, ಧರ್ಮಗಳ ಭೇದ ಭಾವವಿಲ್ಲದೇ ಸಾವಿರಾರು ಸಂಖ್ಯೆಯ ಭಕ್ತರು ಶೋಭಾಯಾತ್ರೆಯಲ್ಲಿ ಭಾಗವಹಿಸುವ ಮೂಲಕ ನಾವೆಲ್ಲರೂ ಒಂದೇ ಎನ್ನುವ ಸಂದೇಶ ಸಾರಿದರು.
Vijaya Karnataka Web Mangalore Dasara


ಸಂಜೆ 4 ಗಂಟೆಗೆ ಗಣಪತಿ ದೇವರಿಗೆ ಪೂಜೆ ಸಲ್ಲಿಸುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಾಯಿತು. ಸಂಜೆ 6.30ಕ್ಕೆ ಶಾರದಾ ಮಾತೆಯನ್ನು ಕುದ್ರೋಳಿ ಕ್ಷೇತ್ರದಿಂದ ಹೊರಗೆ ತರುವ ಮೂಲಕ ಶೋಭಾಯಾತ್ರೆಗೆ ಅಣಿಗೊಳಿಸಲಾಯಿತು. ಶಾರದಾ ಮಂಟಪದಿಂದ ಶಾರದಾ ಮಾತೆಯನ್ನು ಹೊತ್ತುಕೊಂಡು ಬರುವಾಗ ಜನಾರ್ದನ ಪೂಜಾರಿ ಅವರು ಸಾಥ್‌ ನೀಡಿದರು. ಶಾರದಾ ಮಾತೆಯ ವಿಗ್ರಹದ ಜತೆಯಲ್ಲಿ ಬಣ್ಣಬಣ್ಣದ ಕೊಡೆಗಳ ಸಾಲು ನೋಡುಗರಿಗೆ ಖುಷಿಕೊಟ್ಟಿತು. ಕುದ್ರೋಳಿ ಕ್ಷೇತ್ರದ ಮುಂಭಾಗದಲ್ಲಿ ಬಂದ ಶಾರದಾ ಮಾತೆಯ ವಿಗ್ರಹಕ್ಕೆ ಪೂಜೆ ಸಲ್ಲಿಸಿದ ಬಳಿಕ ಶೋಭಾಯಾತ್ರೆ ಆರಂಭವಾಯಿತು.

ದೇವಸ್ಥಾನ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಮಾತನಾಡಿ, ಶಾರದಾ ಮಾತೆ ವಿದ್ಯಾದೇವಿ. ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಅವರಿಂದ ಸ್ಥಾಪನೆಯಾದ ಶ್ರೀಕ್ಷೇತ್ರ ಗೋಕರ್ಣನಾಥ ದೇವಳದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ಥಾನಮಾನ ಸಿಗಬೇಕು. ಸಮಾಜದಲ್ಲಿ ಮಹಿಳೆಯರನ್ನು ಗೌರವಿಸುವುದು ಅಗತ್ಯ. ಮಹಿಳೆಯರನ್ನು ತಾಯಿ ಸ್ಥಾನದಲ್ಲಿ ನಿಂತು ನೋಡಬೇಕು. ಯಾವುದೇ ಸಮುದಾಯದ ಮಹಿಳೆಯರು ಇರಲಿ, ಅವರಿಗೆ ನೋವು, ಅವಮಾನ ಮಾಡುವುದು ಸರಿಯಲ್ಲ, ಎಂದರು.

ಜಗತ್ತು ಮಹಿಳೆಯರ ದಿನಾಚರಣೆಯನ್ನು ಮಾಡುತ್ತಿದೆ. ಕುದ್ರೋಳಿ ದೇವಳದಲ್ಲಿಮಹಿಳೆಯರನ್ನು ಅತ್ಯಂತ ಗೌರವ, ಸ್ಥಾನಮಾನದಿಂದ ನೋಡಲಾಗುತ್ತಿದೆ. ಮುಂದೆ ಕೂಡ ಇದೇ ರೀತಿಯಲ್ಲಿ ನೋಡಲಾಗುತ್ತದೆ. ದೇವಳದಲ್ಲಿಮಹಿಳೆಯರು ದೇವರ ಸೇವೆ ಮಾಡುತ್ತಿದ್ದಾರೆ. ದೇವಳದಿಂದ ಏನಾದರೂ ಮನಸ್ಸಿಗೆ ನೋವಾಗುವ ಘಟನೆಗಳು ನಡೆದರೆ ದೇವಸ್ಥಾನದ ಪರವಾಗಿ ಕ್ಷಮೆ ಕೇಳುತ್ತೇನೆ ಎಂದರು. ಕುದ್ರೋಳಿ ಕ್ಷೇತ್ರಕ್ಕೆ ದಾನ ಹಾಗೂ ಸೇವೆ ನೀಡಿದವರು ಹಾಗೂ ಗಣ್ಯರಿಗೆ ಪ್ರಸಾದ ನೀಡುವ ಮೂಲಕ ಜನಾರ್ದನ ಪೂಜಾರಿ ಅವರು ಗೌರವಿಸಿದರು.

ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯು ಶ್ರೀಕ್ಷೇತ್ರದಿಂದ ಹೊರಟು ಕಂಬ್ಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್‌ ಸರ್ಕಲ್‌, ಲಾಲ್‌ಭಾಗ್‌, ಬಲ್ಲಾಳ್‌ಭಾಗ್‌, ಪಿವಿಎಸ್‌ ಸರ್ಕಲ್‌, ನವಭಾರತ ಸರ್ಕಲ್‌, ಕೆ.ಎಸ್‌. ರಾವ್‌ ರಸ್ತೆ, ಹಂಪನಕಟ್ಟೆ, ವಿವಿ ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ, ಗಣಪತಿ ಹೈಸ್ಕೂಲ್‌ ಮಾರ್ಗವಾಗಿ ಶ್ರೀವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟಿ್ರೕಟ್‌, ಚಿತ್ರಾ ಟಾಕೀಸ್‌, ಅಳಕೆಯಾಗಿ ಶ್ರೀಕ್ಷೇತ್ರಕ್ಕೆ ತೆರಳಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ