ಆ್ಯಪ್ನಗರ

ಮಂಗಳೂರು ಹೂವಿನ ವ್ಯಾಪಾರಿಗಳ ವಿನೂತನ ಪ್ರತಿಭಟನೆ

ಶಂಕರಪುರ ಮಲ್ಲಿಗೆಗೆ ಅನಿಶ್ಚಿತತೆಯ ದರ ನಿಗದಿಯಿಂದ ಕಂಗಾಲಾದ ಮಂಗಳೂರಿನ ಹೂವಿನ ವ್ಯಾಪಾರಿಗಳು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಮಾಡಿಧಿದ್ದಾರೆ. ನಿಗದಿತ ದರಕ್ಕಿಂತ 100ರೂ. ಕಡಿಮೆ ಬೆಲೆಗೆ ಮಾರಾಟ ಮಾಡಿ ದರ ನಿಗದಿಪಡಿಸುವ ಈ ವ್ಯವಸ್ಥೆಗೆ ತಿರುಗೇಟು ನೀಡಿದ್ದಾರೆ

Vijaya Karnataka 15 Dec 2018, 5:00 am
ಮಂಗಳೂರು: ಶಂಕರಪುರ ಮಲ್ಲಿಗೆಗೆ ಅನಿಶ್ಚಿತತೆಯ ದರ ನಿಗದಿಯಿಂದ ಕಂಗಾಲಾದ ಮಂಗಳೂರಿನ ಹೂವಿನ ವ್ಯಾಪಾರಿಗಳು ವಿಶಿಷ್ಟ ರೀತಿಯಲ್ಲಿ ಪ್ರತಿಭಟನೆ ಮಾಡಿಧಿದ್ದಾರೆ. ನಿಗದಿತ ದರಕ್ಕಿಂತ 100ರೂ. ಕಡಿಮೆ ಬೆಲೆಗೆ ಮಾರಾಟ ಮಾಡಿ ದರ ನಿಗದಿಪಡಿಸುವ ಈ ವ್ಯವಸ್ಥೆಗೆ ತಿರುಗೇಟು ನೀಡಿದ್ದಾರೆ
Vijaya Karnataka Web mangalore flower vendors protest
ಮಂಗಳೂರು ಹೂವಿನ ವ್ಯಾಪಾರಿಗಳ ವಿನೂತನ ಪ್ರತಿಭಟನೆ


ಸಾಮಾನ್ಯವಾಗಿ ಮಲ್ಲಿಗೆಯ ದರವನ್ನು ನಿಗದಿಪಡಿಸುವುದು ಉಡುಪಿ ಜಿಲ್ಲೆಯ ಶಂಕರಪುರ ಕಟ್ಟೆ. ಇಲ್ಲಿ ಉಡುಪಿ ತಾಲೂಕು ಸೇರಿದಂತೆ ಉಭಯ ಜಿಲ್ಲೆಗಳ ಮಲ್ಲಿಗೆಯ ಹೂವಿನ ದರವನ್ನು ನಿಗದಿಪಡಿಸಲಾಗುತ್ತದೆ. ಇದು ಪ್ರತಿ ದಿನ ನಡೆದುಕೊಂಡು ಬಂದ ಪದ್ಧತಿ. ಇದನ್ನೇ ಮಾದರಿಯಾಗಿಟ್ಟುಕೊಂಡು ಹೂವಿನ ವರ್ತಕರು ಮಲ್ಲಿಗೆ ವ್ಯಾಪಾರ ಮಾಡುತ್ತಾರೆ. ಆದರೆ ಇತ್ತೀಚಿನ ಕೆಲವು ದಿನಗಳಿಂದ ಶಂಕರಪುರ ದರ ನಿಗದಿಯಲ್ಲಿ ಗಣನೀಯ ಏರುಪೇರು ಕಂಡುಬಂದಿದೆ. ಏಕಾಏಕಿ ದರವನ್ನು ಹೆಚ್ಚಿಸುವುದು ಮತ್ತು ಇಳಿಸುವುದು ಸಾಮಾನ್ಯ ಎಂಬಂತಾಗಿದೆ. ಈ ಅನಿಶ್ಚಿತ ದರ ನಿಗದಿಯಿಂದ ಮಂಗಳೂರಿನ ಹೂವಿನ ವ್ಯಾಪಾರಿಗಳು ಕಂಗಲಾಗಿದ್ದಾರೆ. ಇಧಿದಧಿನ್ನು ವಿಧಿರೋಧಿಧಿಧಿಸಿ ವಿನೂತನವಾಗಿ ಪ್ರತಿಭಟಿಸಿದ್ದು, ವ್ಯಾಪಾರಿಗಳು ದರ ನಿಗದಿಪಡಿಸುವ ಈ ವ್ಯವಸ್ಥೆಗೆ ತಿರುಗೇಟು ನೀಡಿದ್ದಾರೆ

ಡಿ.13ರಂದು ಶಂಕರಪುರ ಮಲ್ಲಿಗೆಯ ದರ ಒಂದು ಅಟ್ಟೆಗೆ 850 ರೂ. ನಿಗದಿಪಡಿಸಲಾಗಿತ್ತು. ಆದÃ ಆ ದಿನ ಮಂಗಳೂರಿನಲ್ಲಿ ಯಾವುದೇ ಶುಭ ಸಮಾರಂಭಗಳು ಧಾರ್ಮಿಕ ಕಾರ್ಯಕ್ರಮಗಳು ವಿರಳ ಹಾಗಾಗಿ ಹೂವಿಗೂ ಅಷ್ಟೇನೂ ಡಿಮ್ಯಾಂಡ್‌ ಇರಲಿಲ್ಲ. ಇದರಿಂದ ಕಂಗಾಲಾದ ಹೂವಿನ ವ್ಯಾಪಾರಿಗಳು ಮಂಗಳೂರಿನಲ್ಲಿ 100 ರೂ. ಕಡಿಮೆ ಅಂದರೆ 750 ರೂ.ಗೆ ಒಂದು ಅಟ್ಟೆ ಮಲ್ಲಿಗೆ ಮಾರಾಟ ಮಾಡಿ ಪ್ರತಿಭಟನೆ ಮಾಡುವ ಮೂಲಕ ಶಂಕರಪುರ ದರ ನಿಗದಿ ವ್ಯವಸ್ಥೆಗೆ ತಿರುಗೇಟು ನೀಡಿದ್ದಾರೆ.

ಇದು ಶಂಕರಪುರ ದರ ಕಟ್ಟೆಗೆ ಒಂದು ಎಚ್ಚರಿಕೆಯ ಕರೆಗಂಟೆ ಇನ್ನು ಮುಂದಾದರೂ ದರ ನಿಗದಿಯಲ್ಲಿ ವೈಜ್ಞಾನಿಕತೆ ಕಾಪಾಡಿಕೊಳ್ಳಲಿ ಎಂಬುದು ಇಲ್ಲಿನ ವ್ಯಾಪಾರಿಗಳ ಆಶಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ