ಆ್ಯಪ್ನಗರ

ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ

ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಮಂಜೂರು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ರೈಲ್ವೆ ರಾಜ್ಯ ಸಚಿವರಾದ ಮನೋಜ್‌ ಸಿನ್ಹಾ ಹಾಗೂ ರಾಜೇನ್‌ ಗೊಹೈನ್‌ ಅವರನ್ನು ಆಗ್ರಹಿಸಿದ್ದಾರೆ.

Vijaya Karnataka 25 Jul 2018, 5:29 pm
ಮಂಗಳೂರು: ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಮಂಜೂರು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ರೈಲ್ವೆ ರಾಜ್ಯ ಸಚಿವರಾದ ಮನೋಜ್‌ ಸಿನ್ಹಾ ಹಾಗೂ ರಾಜೇನ್‌ ಗೊಹೈನ್‌ ಅವರನ್ನು ಆಗ್ರಹಿಸಿದ್ದಾರೆ.
Vijaya Karnataka Web mangalore in different railway block
ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ


ಹೊಸದಿಲ್ಲಿಯಲ್ಲಿ ಮಂಗಳವಾರ ಸಚಿವರನ್ನು ಭೇಟಿಯಾಗಿ ನಳಿನ್‌ ಕುಮಾರ್‌, ಮಂಗಳೂರು ಕೇಂದ್ರ ರೈಲು ನಿಲ್ದಾಣವನ್ನು ವಿಶ್ವದರ್ಜೆಯ ನಿಲ್ದಾಣವಾಗಿ ಮೇಲ್ದರ್ಜೆಗೇರಿಸುವಂತೆ ಮನವಿ ಮಾಡಿದರು.

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ 3 ಮತ್ತು 4ನೇ ಪ್ಲಾಚ್‌ಫಾರಂ ನಿರ್ಮಾಣ ಕಾಮಗಾರಿಯನ್ನು ತ್ವರಿತಗೊಳಿಸಬೇಕು, ರೈಲು ನಿಲ್ದಾಣಕ್ಕೆ ಹೊಸ ಕಟ್ಟಡ ಮಂಜೂರು ಮಾಡುವುದು ಹಾಗೂ ಇತರ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು, ಸುಬ್ರಹ್ಮಣ್ಯ-ಸಕಲೇಶಪುರ ಹಳಿ ದ್ವಿಪಥ ಕಾಮಗಾರಿಯನ್ನು ತಕ್ಷಣ ಕೈಗೆತ್ತಿಕೊಳ್ಳುವಂತೆ ಸಂಸದರು ಸಚಿವರಲ್ಲಿ ಆಗ್ರಹಿಸಿದರು.

ಪುದು- ಸುಬ್ರಹ್ಮಣ್ಯ ರೋಡ್‌ ರೈಲು ನಿಲ್ದಾಣವನ್ನು ಮೇಲ್ದರ್ಜೆಗೇರಿಸುವಂತೆ ರೈಲ್ವೆ ಸಚಿವರಲ್ಲಿ ಮನವಿ ಮಾಡಿದ ಸಂಸದರು, ಮಂಗಳೂರು-ಸುಬ್ರಹ್ಮಣ್ಯ ಮಧ್ಯೆ 8 ರೈಲ್ವೆ ಮೇಲ್ಸೇತುವೆ/ಕೆಳಸೇತುವೆ ಮಂಜೂರು ಮಾಡುವುದು, ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲನ್ನು ನಿತ್ಯ ಓಡಿಸುವುದು, ಮಂಗಳೂರು-ಮಡ್ಗಾಂ ಇಂಟರ್‌ಸಿಟಿ ರೈಲನ್ನು ಮಂಗಳೂರು-ಮುಂಬಯಿ ಮಧ್ಯೆ ಸೂಪರ್‌ ಫಾಸ್ಟ್‌ ರೈಲನ್ನಾಗಿ ಓಡಿಸುವುದು, ಚಾಮರಾಜನಗರ - ತಿರುಪತಿ ಮಧ್ಯೆ ಸಂಚರಿಸುವ (16219/20) ರೈಲನ್ನು ಹಾಸನ ಮೂಲಕ ಮಂಗಳೂರಿಗೆ ಓಡಿಸುವುದು, ಹೌರಾ-ವಾಸ್ಕೋ ಮಧ್ಯೆ ಸಂಚರಿಸುವ ಅಮರಾವತಿ ಎಕ್ಸಪ್ರೆಸ್‌ ರೈಲನ್ನು (ಮಂಗಳೂರು-ಹುಬ್ಬಳ್ಳಿ-ಧಾರವಾಡ-ಹೊಸಪೇಟೆ-ಬಳ್ಳಾರಿಯನ್ನು ಸಂಪರ್ಕಿಸಲು) ಮಂಗಳೂರಿಗೆ ವಿಸ್ತರಿಸುವಂತೆ ಸಚಿವರಲ್ಲಿ ಸಂಸದರು ಮನವಿ ಮಾಡಿದರು.

'ಮಾವೇಲಿ' ಕನ್ಯಾಕುಮಾರಿಗೆ ವಿಸ್ತರಿಸಲು ಸಂಸದರ ಮನವಿ
ಮಂಗಳೂರು-ತಿರುವನಂತಪುರಂ ಮಧ್ಯೆ ಸಂಚರಿಸುವ ಮಾವೇಲಿ ಎಕ್ಸಪ್ರೆಸ್‌ ರೈಲನ್ನು ಕನ್ಯಾಕುಮಾರಿವರೆಗೆ ವಿಸ್ತರಿಸುವಂತೆ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಒತ್ತಾಯಿಸಿದ್ದಾರೆ.
ಮಂಗಳೂರು ಹಾಸನ ಮೂಲಕ ಚೆನ್ನೈಗೆ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲನ್ನು ಮಂಜೂರು ಮಾಡುವುದು, ಗೇಜ್‌ ಪರಿವರ್ತನೆಯ ಸಂದರ್ಭದಲ್ಲಿ ರದ್ದಾಗಿದ್ದ ಮಂಗಳೂರು- ಹಾಸನ-ಅರಸೀಕೆರೆ ಮೂಲಕ ಹುಬ್ಬಳ್ಳಿ ಮೀರಜ… ಸಂಪರ್ಕಿಸುತ್ತಿದ್ದ ಮಹಾಲಕ್ಷ್ಮಿ ಎಕ್ಸಪ್ರೆಸ್‌ ರೈಲನ್ನು ಪುನರಾರಂಭಿಸುವಂತೆ ಸಚಿವರಿಗೆ ಸಂಸದರು ಮನವಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ