ಆ್ಯಪ್ನಗರ

'ಭಾರತ ಹಿಂದು ರಾಷ್ಟ್ರ, ಮುಸ್ಲಿಮರು ಬರಕೂಡದು' ಎಂದವನ ಮೇಲೆ ಹಲ್ಲೆ ಮಾಡಿದವರ ಬಂಧನ

ಯುವಕರು ಮಾಲ್‌ನಲ್ಲಿ ಹುಡುಗಿಯರನ್ನು ಚುಡಾಯಿಸುತ್ತಿದ್ದಾಗ ಘಟನೆ ಸಂಭವಿಸಿದ್ದು, ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

Times Now 26 Sep 2019, 12:24 pm
ಮಂಗಳೂರು: 'ಭಾರತ ಹಿಂದು ರಾಷ್ಟ್ರ' ಎಂದು ಹೇಳಿದವನ ಮೇಲೆ ಹಲ್ಲೆ ನಡೆಸಿದ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಮಾಲ್‌ ಒಂದರಲ್ಲಿ ಬುಧವಾರ ಈ ಘಟನೆ ನಡೆದಿದೆ. ವಿಮೆ ಏಜೆಂಟ್‌ ಎನ್ನಲಾದ ವ್ಯಕ್ತಿ 'ಭಾರತ ಹಿಂದು ರಾಷ್ಟ್ರ ಮತ್ತು ಮುಸ್ಲಿಮರು ಇಲ್ಲಿಗೆ ಬರಬಾರದು' ಎಂದು ಹೇಳಿದ್ದಾರೆ ಎಂದು ಆರೋಪಿಸಿದ ಯುವಕರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.
Vijaya Karnataka Web Mangaluru Youths


ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದ್ದು ಭಾರಿ ಸಂಚಲನ ಸೃಷ್ಟಿಸಿದೆ. ನಗರದ ಪಾಂಡೇಶ್ವರದಲ್ಲಿರುವ ಮಾಲ್‌ನಲ್ಲಿ ಯುವಕನ ಮೇಲೆ ವಿದ್ಯಾರ್ಥಿಗಳ ತಂಡ ಹಲ್ಲೆ ನಡೆಸಿದ್ದು, ಮೂವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.


ಬಂಟ್ವಾಳದ ಮಂಜುನಾಥ್‌ ಎಂಬವರು ಮಾಲ್‌ನಲ್ಲಿ ಇದ್ದ ಸಂದರ್ಭ ಯುವಕರ ಗುಂಪೊಂದು ಯುವತಿಯರನ್ನು ಚುಡಾಯಿಸುತ್ತಿದ್ದರು. ಇದನ್ನು ಮಂಜುನಾಥ ಪ್ರಶ್ನಿಸಿದ್ದಕ್ಕೆ ನಗರದ ಕಾಲೇಜೊಂದರ ವಿದ್ಯಾರ್ಥಿಗಳು ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪಾಂಡೇಶ್ವರ ಠಾಣೆ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಮೊಹಿಯುದ್ದೀನ್‌ ಸಫ್ವಾನ್‌, ಅಬ್ದುಲ್‌ ರಹೀಮ್‌ ಸಾದ್‌ ಹಾಗೂ ಇನ್ನೊಬ್ಬ ಕಾನೂನಿನೊಡನೆ ಸಂಘರ್ಷಕ್ಕಿಳಿದ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

ಭಾರತ ಹಿಂದೂ ರಾಷ್ಟ್ರ ಘೋಷಣೆಯಾಗಲಿ: ಉಡುಪಿ ವಕೀಲ

ಯುವತಿಯರ ಚುಡಾಯಿಸಿದ್ದಕ್ಕೆ ಸಂಬಂಧಿಸಿದಂತೆ ನಮ್ಮನ್ನು ಪ್ರಶ್ನಿಸಲು ನೀನ್ಯಾರು ಎಂದು ವಿದ್ಯಾರ್ಥಿಗಳ ಗುಂಪು ಮಂಜುನಾಥ್‌ ಅವರನ್ನು ಪ್ರಶ್ನಿಸಿ ವಾಗ್ವಾದಕ್ಕೆ ಇಳಿದಿದ್ದಾರೆ. ಆಗ ಮಂಜುನಾಥ ಇದು 'ಹಿಂದೂ ರಾಷ್ಟ್ರ' ಎಂದು ಹೇಳಿದ್ದಾರೆ. ಇದರಿಂದ ಇನ್ನಷ್ಟು ಕೆರಳಿದ ವಿದ್ಯಾರ್ಥಿಗಳು ಇನ್ನೊಮ್ಮೆ ಹೇಳುವಂತೆ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅವರಿಂದ ತಪ್ಪಿಸಿಕೊಂಡು ಮುಂದುವರಿದಾಗ ತಡೆದು ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ.

ಹಿಂದು ರಾಷ್ಟ್ರ ಕಲ್ಪನೆ ಸಂವಿಧಾನ ವಿರೋಧಿ: ತೀಸ್ತಾ ಸೇತಲ್ವಾಡ್‌

ಹಲ್ಲೆನಡೆಸಿದ್ದ ದೃಶ್ಯವನ್ನು ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಕ್ಕೂ ಆರೋಪಿಗಳು ಅಪ್‌ಲೋಡ್‌ ಮಾಡಿದ್ದು, ಅದು ಎಲ್ಲೆಡೆ ವೈರಲ್‌ ಆಗಿದೆ. ಪೊಲೀಸರು ಕಾರ್ಯಾಚರಣೆಗೆ ಇಳಿಯುತ್ತಿದ್ದಂತೆ ಗುಂಪಿನಲ್ಲಿದ್ದ ಹಲವರು ತಲೆಮರೆಸಿಕೊಂಡಿದ್ದಾರೆ. ಕೃತ್ಯದಲ್ಲಿ ಭಾಗಿಯಾದವರನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಕಠಿಣ ಕ್ರಮಕ್ಕೆ ಡಾ.ಭರತ್‌ ಶೆಟ್ಟಿ ಆಗ್ರಹ: ಮಾಲ್‌ನಲ್ಲಿಯುವಕನಿಗೆ ಹಲ್ಲೆನಡೆಸಿ ಆರೆಸ್ಸೆಸ್‌ಗೆ ನಿಂದನೆ ಮಾಡಿದ ಘಟನೆಯನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ.ವೈ.ಭರತ್‌ ಶೆಟ್ಟಿ ಖಂಡಿಸಿದ್ದಾರೆ. ಯುವಕರ ತಂಡದ ಈ ಕೃತ್ಯ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಯತ್ನವಾಗಿದೆ. ಇಂತಹ ಅನಾಗರಿಕ ಕೃತ್ಯಗಳಿಗೆ ರಾಜ್ಯದಲ್ಲಿಅವಕಾಶವಿಲ್ಲ. ಇದರಲ್ಲಿಭಾಗಿಯಾದವರ ಮೇಲೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಗುಜರಾತ್‌ನಲ್ಲಿ ಕ್ರೈಸ್ತರ ಮತಾಂತರ: 500 ಮಂದಿಯನ್ನು ಹಿಂದೂ ಧರ್ಮಕ್ಕೆ ಪರಿವರ್ತಿಸಿರುವುದಾಗಿ ವಿಎಚ್‌ಪಿ ಹೇಳಿಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ