ಆ್ಯಪ್ನಗರ

ಅಡ್ಯಾರ್‌ : ಮದುವೆಯಾದ ಮರುದಿನ ಮುಂಜಾನೆ ಹೃದಯಾಘಾತದಿಂದ ವಧು ಸಾವು, ಮನೆಯಲ್ಲಿ ಸ್ಮಶಾನ ಮೌನ

ಭಾನುವಾರ ಈ ಜೋಡಿಯ ಮದುವೆ ನಡೆದಿದ್ದು. ಅದೇ ದಿನ ರಾತ್ರಿ ಮಂಗಳೂರಿನ ಅಡ್ಯಾರ್‌ನಲ್ಲಿರುವ ಅಡ್ಯಾರ್‌ ಗಾರ್ಡನ್‌ನಲ್ಲಿ ಅದ್ಧೂರಿಯಾಗಿ ಔತಣ ಕೂಟವೂ ಏರ್ಪಟ್ಟಿತ್ತು. ಸಂತೋಷದಿಂದ ಕುಟುಂಬಸ್ಥರು ಭಾಗಿಯಾಗಿ ನವ ವಧು-ವರರನ್ನು ಹಾರೈಸಿದ್ದರು ಆದರೆ ಯಾವ ಮಾರಿ ಕಣ್ಣು ಬಿತ್ತೋ ಗೊತ್ತಿಲ್ಲ, ಸೋಮವಾರ ಮುಂಜಾನೆ ವಧು ಸಾವನಪ್ಪುವ ಮೂಲಕ ಇಡೀ ಕುಟುಂಬವೇ ಇದೀಗ ಶೋಕಸಾಗರದಲ್ಲಿ ಮುಳುಗಿದೆ.

Vijaya Karnataka 2 Mar 2021, 8:15 am

ಹೈಲೈಟ್ಸ್‌:

ಮದುವೆಯಾದ ಮರುದಿನ ಮಂಗಳೂರಿನ ವಧು ಸಾವು
ಸಂತೋಷದ ಮನೆಯಲ್ಲಿ ಈಗ ಸ್ಮಶಾನ ಮೌನ
ಭಾನುವಾರ ಮದುವೆಯಾಗಿದ್ದ ನವ ಜೋಡಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web adyar
ಮಂಗಳೂರು: ಮನೆಯಲ್ಲಿ ಮದುವೆಯ ಸಂಭ್ರಮ ಕಳೆಕಟ್ಟಿತ್ತು. ದೂರದ ಊರುಗಳಿಂದ ನೆಂಟರು ಕೂಡ ಮನೆಗೆ ಬಂದು ಸೇರಿದ್ದರು. ಇತ್ತ ನವ ವಧುಗಳು ಕೂಡ ನೂರಾರು ಕನಸುಗಳನ್ನು ಹೊತ್ತು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಆ ದೇವರಿಗೆ ಇವರಿಬ್ಬರು ಒಂದಾಗೋದು ಇಷ್ಟವಿರಲಿಲ್ಲ ಅನಿಸುತ್ತೆ. ಮದುವೆಯ ದಿನದ ರಾತ್ರಿಯೇ ಮದುಮಗಳು ಹೃದಯಾಘಾತದಿಂದ ಸಾವನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಹೌದು, ಅಡ್ಯಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್‌ ಅಧ್ಯಕ್ಷ ಕೆಎಚ್‌ಕೆ ಅಬ್ದುಲ್ಲ ಕರೀಂ ಹಾಜಿಯ ಪುತ್ರಿ ಲೈಲಾ ಆಫಿಯಾ (23) ಸೋಮವಾರ ಮುಂಜಾನೆ ಹೃದಯಾಘಾತದಿಂದ ನಿಧನರಾದರು. ಲೈಲಾ ಆಫಿಯಾ ಅವರ ವಿವಾಹವು ಕಣ್ಣೂರಿನ ಮದುಮಗ ಮುಬಾರಕ್‌ ಎಂಬವರೊಂದಿಗೆ ಭಾನುವಾರ ನಡೆದಿತ್ತು.

ಅಡ್ಯಾರ್‌ ಕಣ್ಣೂರು ಜುಮಾ ಮಸ್ಜಿದ್‌ನಲ್ಲಿ ಭಾನುವಾರ ನಿಖಾಹ್‌ ನಡೆದಿದ್ದು, ಬಳಿಕ ಅಡ್ಯಾರ್‌ ಗಾರ್ಡನ್‌ನಲ್ಲಿ ಔತಣಕೂಟ ಅದೇ ದಿನ ರಾತ್ರಿ ಏರ್ಪಡಿಸಲಾಗಿತ್ತು. ಇನ್ನು ಔತಣ ಕೂಟದ ಮುಗಿದ ಬಳಿಕ ಮದುಮಗ ಮುಬಾರಕ್‌ ಪತ್ನಿಯನ್ನು ಸಂಪ್ರಾದಾಯದಂತೆ ತನ್ನ ಮನೆಗೆ ಕರೆದುಕೊಂಡು ಬಂದಿದ್ದಾರೆ.

ಮಂಗಳೂರು: ಹಸಿರು ದಳದಿಂದ ಪರಿಸರ ಜಾಗೃತಿ; 6 ಗಂಟೆಯಲ್ಲಿ 14 ಟನ್‌ ಕಸ ಸಂಗ್ರಹ..!

ಆದರೆ ಸೋಮವಾರ ಮುಂಜಾನೆ ಸುಮಾರು 3 ಗಂಟೆಯ ವೇಳೆಗೆ ಲೈಲಾ ಆಫಿಯಾ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ಸುದ್ದಿ ಮದುವೆಯ ಸಂಭ್ರಮದಲ್ಲಿದ್ದ ಇಡೀ ಕುಟುಂಬಕ್ಕೆ ಬರಸಿಡಿಲಿನಂತೆ ಅಪ್ಪಳಿಸಿದೆ. ಮಗಳನ್ನು ಕಳೆದುಕೊಂಡ ನೋವಿನಲ್ಲಿ ಪೋಷಕರು ಕಣ್ಣೀರು ಹಾಕುತ್ತಿದ್ದರೆ. ಇತ್ತ ಕೈ ಹಿಡಿದ ಮರುದಿನವೇ ಸಾವನಪ್ಪಿರುವ ಪತ್ನಿಯ ನೆನೆದು ವರ ದುಃಖತಪ್ತನಾಗಿದ್ದಾನೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ