ಆ್ಯಪ್ನಗರ

ದ್ವಿತೀಯ ಹಂತದ ಪಟ್ಟಿ ಸೇರಿದ ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲು!

ರಾಜ್ಯದೊಳಗೆ ಪ್ರಯಾಣಿಕ ರೈಲು ಓಡಿಸುವ ಕುರಿತಂತೆ ನೈಋುತ್ಯ ರೈಲ್ವೆಯು ಪ್ರಕಟಿಸಿರುವ ಪ್ರಥಮ ಹಂತದ ಪಟ್ಟಿಯಲ್ಲಿ ಮಂಗಳೂರು- ಬೆಂಗಳೂರು ಮತ್ತು ಕಾರವಾರ- ಮಂಗಳೂರು- ಬೆಂಗಳೂರು ರೈಲುಗಳ ಹೆಸರಿಲ್ಲ. ಆದರೆ ದ್ವೀತಿಯ ಹಂತದ ಪಟ್ಟಿಯಲ್ಲಿವೆ.

Vijaya Karnataka Web 29 May 2020, 7:03 pm
ಮಂಗಳೂರು: ರಾಜ್ಯದೊಳಗೆ ಪ್ರಯಾಣಿಕ ರೈಲು ಓಡಿಸುವ ಕುರಿತಂತೆ ನೈಋುತ್ಯ ರೈಲ್ವೆಯು ಪ್ರಕಟಿಸಿರುವ ಪ್ರಥಮ ಹಂತದ ಪಟ್ಟಿಯಲ್ಲಿ ಮಂಗಳೂರು- ಬೆಂಗಳೂರು ಮತ್ತು ಕಾರವಾರ- ಮಂಗಳೂರು- ಬೆಂಗಳೂರು ರೈಲುಗಳ ಹೆಸರಿಲ್ಲ. ಆದರೆ ದ್ವೀತಿಯ ಹಂತದ ಪಟ್ಟಿಯಲ್ಲಿ ಉಭಯ ರೈಲುಗಳ ಓಡಾಟ ಸೇರ್ಪಡೆಗೊಳ್ಳಲಿದೆ. ಜೂನ್‌ 1ರಿಂದ ರಾಜ್ಯದ ಒಳಗಡೆ ಅಂತರ್‌ಜಿಲ್ಲಾ ಪ್ರಯಾಣಿಕ ರೈಲುಗಳ ಓಡಾಟ ಆರಂಭವಾಗಲಿದೆ.
Vijaya Karnataka Web indian railway


ಮಂಗಳೂರು-ಬೆಂಗಳೂರು ನಡುವೆ ಸಾರಿಗೆ ಬಸ್‌ಗಳ ಓಡಾಟ ಆರಂಭವಾಗಿದೆ. ಆದರೆ ಹತ್ತು ವರ್ಷದ ಕೆಳಗಿನ ಮಕ್ಕಳಿಗೆ ಹಾಗೂ 65 ವರ್ಷ ಮೀರಿದ ವೃದ್ಧರಿಗೆ ಪ್ರಯಾಣಿಸಲು ಅವಕಾಶವಿಲ್ಲ. ಆದರೆ ಪ್ರಯಾಣಿಕ ರೈಲು ಬಂಡಿಗಳಲ್ಲಿಯಾವುದೇ ವಯೋಮಾನದ ಕುರಿತಂತೆ ನಿಬಂಧನೆಗಳಿಲ್ಲ. ಈ ನಿಟ್ಟಿನಲ್ಲಿ ಹೆಚ್ಚಿನ ಜನರು ರೈಲು ಪ್ರಯಾಣವನ್ನು ಆಯ್ಕೆ ಮಾಡುವುದು ಖಚಿತ.

ಸೌಲಭ್ಯ ಮತ್ತು ಪ್ರಯಾಣ ದರದ ದೃಷ್ಟಿಯಿಂದ ರೈಲು ಪ್ರಯಾಣವು ಹೆಚ್ಚು ಆರಾಮದಾಯಕ. ಅಲ್ಲದೇ ಕಾರವಾರ-ಮಂಗಳೂರು- ಬೆಂಗಳೂರು ನಡುವಿನ ಯಾತ್ರಿಕರ ಸಂಖ್ಯೆ ಬಹಳಷ್ಟಿದೆ. ಆದ ಕಾರಣವೇ ಈ ರೈಲು ಮಾರ್ಗದಲ್ಲಿ ಹಗಲು ಮತ್ತು ರಾತ್ರಿ ವೇಳೆ ಸಂಚರಿಸುವ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚು ಇರುತ್ತದೆ.

ಬಿಜೆಪಿ ಶಾಸಕರು ನಿವೃತ್ತಿಯಾದರೂ ಕಾಂಗ್ರೆಸ್‌ಗೆ ಅಧಿಕಾರ ಸಿಗಲ್ಲ: ಅಶ್ವತ್ಥನಾರಾಯಣ

ಮೀಟರ್‌ಗೇಜ್‌ ರೈಲು ಹಳಿಗಳ ಕಾಲದಿಂದಲೇ ಮಂಗಳೂರು- ಕಬಕ ಪುತ್ತೂರು ಹಾಗೂ ಮಂಗಳೂರು- ಕಬಕ ಪುತ್ತೂರು-ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣಗಳ ನಡುವೆ ಲೋಕಲ್‌ ರೈಲು ಬಂಡಿಗಳ ಓಡಾಟವಿತ್ತು. ಕೊರೊನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಲೋಕಲ್‌ ರೈಲು ಬಂಡಿಗಳ ಓಡಾಟ ಕೂಡಾ ಸ್ಥಗಿತಗೊಂಡಿದೆ.

ಮಂಗಳೂರು- ಬೆಂಗಳೂರು ಪ್ರಯಾಣಿಕ ರೈಲು ಬಂಡಿಗಳ ಓಡಾಟ ಆರಂಭವಾದ ಬೆನ್ನಲ್ಲೇ ಮಂಗಳೂರು- ಕಬಕಪುತ್ತೂರು-ಸುಬ್ರಹ್ಮಣ್ಯರಸ್ತೆ ರೈಲು ನಿಲ್ದಾಣಗಳ ನಡುವಣಾ ಲೋಕಲ್‌ ರೈಲು ಬಂಡಿಯ ಓಡಾಟ ಆರಂಭಿಸುವಂತೆ ಕೋರಿ ಕುಕ್ಕೆ ಸುಬ್ರಹ್ಮಣ್ಯ- ಮಂಗಳೂರು ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ವೇದಿಕೆಯು ಮೈಸೂರು ವಿಭಾಗೀಯ ರೈಲ್ವೇ ಮೇನೆಜರ್‌ಗೆ ಪತ್ರ ಬರೆದಿದೆ. ಅಲ್ಲದೆ ಸಂಸದರ ಗಮನಕ್ಕೂ ತಂದಿದೆ.

ವಾರದೊಳಗೆ ರಾಜ್ಯಕ್ಕೆ ಮುಂಗಾರಿನ ಆಗಮನ! ಹವಾಮಾನ ಇಲಾಖೆ ವರದಿ

"ಮಂಗಳೂರು- ಬೆಂಗಳೂರು, ಕಾರವಾರ- ಬೆಂಗಳೂರು ನಡುವಣ ಪ್ರಯಾಣಿಕ ರೈಲುಗಳ ಆರಂಭದ ಕುರಿತಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವರ ಗಮನಕ್ಕೆ ತರಲಾಗಿದೆ. ಸಚಿವರಿಂದ ಪೂರಕ ಸ್ಪಂದನ ವ್ಯಕ್ತವಾಗಿದೆ. ರೈಲ್ವೇ ಬಳಕೆದಾರರ ಸಂಘಟನೆಗಳು ಕೂಡಾ ನನ್ನ ಗಮನಕ್ಕೆ ಪ್ರಯಾಣಿಕ ರೈಲುಗಳ ಓಡಾಟದ ಕುರಿತಂತೆ ತಂದಿವೆ. ಕೊರೊನಾ ಕಾರಣದಿಂದಾಗಿ ಏರುಪೇರಾದ ವ್ಯವಸ್ಥೆಯನ್ನು ಸರಿಪಡಿಸಲಾಗುವುದು.
- ನಳಿನ್‌ಕುಮಾರ್‌ ಕಟೀಲ್‌, ಸಂಸದ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ