ಆ್ಯಪ್ನಗರ

ಅಮೆರಿಕದಲ್ಲಿ ಮಂಗಳೂರು ಮೂಲದ ದಂಪತಿಯ ಹತ್ಯೆ

ಅಮೆರಿಕದಲ್ಲಿ ಬಜಪೆಯ ದಂಪತಿಯನ್ನು ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.

ವಿಕ ಸುದ್ದಿಲೋಕ 6 May 2017, 1:05 pm
ಮಂಗಳೂರು: ಅಮೆರಿಕದಲ್ಲಿ ಬಜಪೆಯ ದಂಪತಿಯನ್ನು ವ್ಯಕ್ತಿಯೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಜ್ಯುನಿಪರ್ ನೆಟ್‌ವರ್ಕ್ ಕಂಪನಿಯ ಉಪಾಧ್ಯಕ್ಷ ನರೇನ್ ಪ್ರಭು ಮತ್ತು ಅವರ ಪತ್ನಿ ರೈನಾಹ್ ಹತ್ಯೆಯಾದವರು. ಮಿರ್ಝಾ ಟಾಟ್ಲಿಕ್(24) ಎಂಬಾತ ಹತ್ಯೆ ಮಾಡಿರುವ ಆರೋಪಿ.
Vijaya Karnataka Web mangaluru couple murdered in us
ಅಮೆರಿಕದಲ್ಲಿ ಮಂಗಳೂರು ಮೂಲದ ದಂಪತಿಯ ಹತ್ಯೆ


ಆರೋಪಿ ಮಿರ್ಝಾ ನರೇನ್ ದಂಪತಿಯ ಪುತ್ರಿ ರಚೇಲ್‌ನ ಮಾಜಿ ಪ್ರಿಯಕರ ಎನ್ನಲಾಗಿದೆ. ಅವರು ಪರಿಸ್ಪರ ಪ್ರೀತಿಸುತ್ತಿದ್ದು, ಒಂದು ವರ್ಷದಿಂದ ರಚೇಲ್ ಆತನನ್ನು ದೂರ ಇಟ್ಟಿದ್ದಳು ಎನ್ನಲಾಗಿದೆ. ಆಕೆ ಬೇರೆ ರಾಜ್ಯದಲ್ಲಿ ವಾಸವಿದ್ದ ಕಾರಣ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಮೃತ ರೈನಾಹ್ ಅವರು ಬಜಪೆ ಕರಂಬಾರಿನ ಲೀಲಾ ಸಿಕ್ವೇರಾ ಅವರ ಪುತ್ರಿ. ಅವರ ಕುಟುಂಬ ಮುಂಬಯಿಯ ಬಾಂದ್ರಾದಲ್ಲಿ ನೆಲೆಸಿದೆ. ಈ ದಂಪತಿ ಸ್ಯಾನ್ ಯೋಸೆಯ ಲೌರಾ ವಿಲ್ಲೆಯ ಲೇನ್‌ನ ಮನೆಯಲ್ಲಿದ್ದಾಗ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

ದಂಪತಿಯ ಮಗ ಪೊಲೀಸರಿಗೆ ಹತ್ಯೆ ಕುರಿತು ಪೊಲೀಸರಿಗೆ ಕರೆ ಮಾಡಿ ಮಿರ್ಝಾ ಟಾಟ್ಲಿಕ್ ಮೇಲೆ ಶಂಕೆ ವ್ಯಕ್ತಪಡಿಸಿದ್ದ. ಸ್ಥಳಕ್ಕೆ ಆಗಮಿಸಿದ ಸ್ಯಾನ್‌ಯೋಸೆ ಪೊಲೀಸರು ಆರೋಪಿಯನ್ನು ಸುತ್ತುವರಿದು ಶರಣಾಗುವಂತೆ ಕೇಳಿದರೂ ಆತ ಶರಣಾಗಲಿಲ್ಲ. ಒಂದು ಕ್ಷಣದಲ್ಲಿ ಆತ ಪೊಲೀಸರತ್ತ ಗುಂಡು ಹಾರಿಸಲು ಮುಂದಾದ. ಆಗ ಪೊಲೀಸರೇ ಆತನನ್ನು ಶೂಟ್‌ ಮಾಡಿದರು ಎಂದು ಅಧಿಕಾರಿ ತಿಳಿಸಿದ್ದಾರೆ.

ಆರೋಪಿಯು ಮಾನಸಿಕ ಅಸ್ವಸ್ಥತೆಯಿಂದಲೂ ಬಳಲುತ್ತಿದ್ದ ಎನ್ನಲಾಗಿದೆ. ಆತನಿಗೆ ಸಂಬಂಧಿಸಿದಂತೆ ಕೌಟುಂಬಿಕ ಹಿಂಸೆಯ ಪ್ರಕರಣಗಳಿದ್ದು, ಆತನ ವಿರುದ್ಧ ಕ್ರಿಮಿನಲ್‌ ನಿರ್ಬಂಧದ ಆದೇಶವು ಜಾರಿಯಲ್ಲಿತ್ತು ಎಂದು ಮಾಧ್ಯಮ ವರದಿ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ