ಆ್ಯಪ್ನಗರ

‌ ತುಳುವಿನಲ್ಲಿ ಗಣರಾಜ್ಯೋತ್ಸವ ಸಂದೇಶದ ವಿಡಿಯೋ ಮಾಡಿ ಮಂಗಳೂರು ಪೊಲೀಸ್‌ ಕಮಿಷನರ್ ಟ್ವೀಟ್‌!

ಪ್ರತಿ ವರ್ಷ ಜನವರಿ ಇರ್‌ವತ್ತ ಆಜೆಕ್ (26) ಲೋಕೊಡು ನಮ್ಮ ಭಾರತ ದೇಶದ ಗಣರಾಜ್ಯೋತ್ಸವನ್‌ ಬಾರೀ ಗೌಜಿಡ್‌ ಆಚರಣೆ ಮಲ್ಪುವೆರ್‌. ​​ಕುಡ್ಲದ ಮಾತಾ ಜನಕ್ಲೆಗ್‌ಲಾ ಗಣರಾಜ್ಯೋತ್ಸವದ ಉಡಲ್‌ ದಿಂಜಿನ ಸೋಲ್ಮೆಲು ಎಂದು ಮಂಗಳೂರು ಪೊಲೀಸ್‌ ಕಮೀಷನರ್‌ ಎನ್‌. ಶಶಿಕುಮಾರ್ ವಿಡಿಯೋ ಟ್ವೀಟ್‌ ಮಾಡಿದ್ದಾರೆ.

Vijaya Karnataka Web 26 Jan 2021, 7:52 am
ಮಂಗಳೂರು: ನಗರ ಪೊಲೀಸ್‌ ಕಮಿಷನರ್‌ ಆಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ ಎನ್‌. ಶಶಿಕುಮಾರ್‌ ಅವರು ತುಳು ಮತ್ತು ಕನ್ನಡದಲ್ಲಿ ಗಣರಾಜ್ಯೋತ್ಸವ ಶುಭ ಸಂದೇಶ ಟ್ವೀಟ್‌ ಮಾಡಿದ್ದಾರೆ. ತುಳುವಿನಲ್ಲೇ ವಿಡಿಯೋ ಮತ್ತು ಸಂದೇಶ ಹಾಕಿದ ಕಮಿಷನರ್‌ 'ಪ್ರತಿ ವರ್ಷ ಜನವರಿ ಇರ್‌ವತ್ತ ಆಜೆಕ್ (26) ಲೋಕೊಡು ನಮ್ಮ ಭಾರತ ದೇಶದ ಗಣರಾಜ್ಯೋತ್ಸವನ್‌ ಬಾರೀ ಗೌಜಿಡ್‌ ಆಚರಣೆ ಮಲ್ಪುವೆರ್‌.
Vijaya Karnataka Web ips shashikumar


ಕುಡ್ಲದ ಮಾತಾ ಜನಕ್ಲೆಗ್‌ಲಾ ಗಣರಾಜ್ಯೋತ್ಸವದ ಉಡಲ್‌ ದಿಂಜಿನ ಸೋಲ್ಮೆಲು (ಪ್ರತಿ ವರ್ಷ ಜನವರಿ 26 ರಂದು ವಿಶ್ವದೆಲ್ಲೆಡೆ ನಮ್ಮ ದೇಶದ ಗಣರಾಜ್ಯೋತ್ಸವವನ್ನು ಬಾರೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಂಗಳೂರು ನಗರದ ಸಮಸ್ತ ನಾಗರೀಕರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು) ಎಂದು ತುಳು ಮತ್ತು ಕನ್ನಡದಲ್ಲಿ ವಿಡಿಯೋ ಮತ್ತು ಸಂದೇಶ ಟ್ವೀಟ್‌ ಮಾಡಿದ್ದಾರೆ.


ಇದಕ್ಕೆ ನೆಟ್ಟಿಗರು ಭಾರೀ ಹರ್ಷ ವ್ಯಕ್ತಪಡಿಸಿದ್ದಾರೆ. ತುಳುವಿನಲ್ಲೇ ಅನೇಕರು ಪೊಲೀಸ್‌ ಕಮೀಷನರ್‌ಗೆ ಪ್ರತಿಕ್ರಿಯಿಸಿದ್ದಾರೆ. ತುಳು ಪ್ರೇಮ ಎಂದು ಇರಲಿ ಎಂದಿದ್ದಾರೆ. ಮಂಗಳೂರು ಕಮೀಷನರ್‌ ಶಶಿಕುಮಾರ್‌ ಒಂದಲ್ಲೊಂದು ವಿಚಾರಗಳಿಂದ ಸುದ್ದಿ ಆಗುತ್ತಲೇ ಇದ್ದಾರೆ. ಇತ್ತೀಚೆಗೆ ಹಾಡು ಹಾಡಿ ಸುದ್ದಿಯಾಗಿದ್ದರು, ನಂತರ ಮಾಸ್ಕ್‌ ಹಾಕಿ ಎಂದು ಹೇಳುತ್ತಿದ್ದ ವೃದ್ದರೊಬ್ಬರಿಗೆ ಎಳನೀರು ಕುಡಿಸಿ ಹಿರೋ ಆಗಿದ್ದರು.

ಮಂಗಳೂರು: ಸೀಮೆಎಣ್ಣೆಯಿಲ್ಲದೆ ಅಸಹಾಯಕರಾದ ಬೆಸ್ತರು, ನಾಡ ದೋಣಿಗೆ 300 ಲೀ. ಸೀಮೆಎಣ್ಣೆ ನೀಡಲು ಆಗ್ರಹ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ