ಆ್ಯಪ್ನಗರ

ಮಂಗಳೂರು: ಬಸ್‌ನಲ್ಲಿ ವ್ಯಕ್ತಿಯಿಂದ ಮೈ ಮುಟ್ಟಿ ಕಿರುಕುಳ, ಜಾಲತಾಣದಲ್ಲಿ ಫೋಟೊ ಶೇರ್‌ ಮಾಡಿದ ಯುವತಿ

ಸದ್ಯ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯುವತಿಗೆ ನೆಟ್ಟಿಗರು ಧೈರ್ಯ ತುಂಬಿದ್ದಾರೆ. ಅಲ್ಲದೆ ಯುವತಿ ತೋರಿದ ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇನ್ನು ಘಟನೆ ಬಗ್ಗೆ ಯುವತಿ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಆರೋಪಿಯನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ.

Vijaya Karnataka Web 18 Jan 2021, 9:23 am
ಮಂಗಳೂರು: ಯುವತಿಯರು, ಮಹಿಳೆಯರು ಒಂದಲ್ಲೊಂದು ರೀತಿಯಲ್ಲಿ ಕಿರುಕುಳ ಅನುಭವಿಸುತ್ತಿರುತ್ತಾರೆ ಎನ್ನುವ ಸಮೀಕ್ಷಾ ವರದಿಗಳು ಹೊರ ಬೀಳುತ್ತಿರುವ ಮಧ್ಯೆಯೇ ಮಂಗಳೂರಿನಲ್ಲಿ ಸಾರ್ವಜನಿಕವಾಗಿ ಯುವಯತಿಯೊಬ್ಬಳಿಗೆ ಕಿರುಕುಳ ನೀಡಿರುವುದು ಬೆಳಕಿಗೆ ಬಂದಿದೆ. ಸ್ವತಃ ಯುವತಿಯೇ ತನಗಾದ ಕೆಟ್ಟ ಅನುಭವವನ್ನು ಸಾಮಾಜಿಕ ಜಾಲತಾಣದ ಮೂಲಕ ಶೇರ್ ಮಾಡಿಕೊಂಡಿದ್ದಾಳೆ.
Vijaya Karnataka Web Mangaluru girl


ಅಕ್ಕ ತಂಗಿಯಂದಿರೇ ಬೀದಿ ಕಾಮಣ್ಣರಿಂದ ಜಾಗೃತರಾಗಿರಿ ಎಂದು ಯುವತಿ ತಿಳಿಸಿದ್ದಾಳೆ. ದೇರಳಕಟ್ಟೆಯಿಂದ ಪಂಪ್‌ವೆಲ್‌ಗೆ ಬರುತ್ತಿದ್ದ ಮಹೇಶ್‌ ಎಂಬ ಹೆಸರಿನ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಬಸ್‌ನಲ್ಲಿದ್ದ ಯಾರು ಕೂಡ ತನ್ನ ಸಹಾಯಕ್ಕೆ ಬರಲಿಲ್ಲ ಎಂದು ಯುವತಿ ಇನ್‌ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ಯುವತಿ ಹೇಳಿರುವುದೇನು?
ಜ.14ರಂದು ಅಪರಾಹ್ನ 3:45ರ ಸುಮಾರಿಗೆ ನಾನು ದೇರಳಕಟ್ಟೆಯಿಂದ ಪಂಪ್‌ವೆಲ್ ಕಡೆಗೆ ಮಹೇಶ್‌ ಬಸ್‌ನಲ್ಲಿ ಬರುತ್ತಿದ್ದೆ. ಈ ಈ ವೇಳೆ ವ್ಯಕ್ತಿಯೊಬ್ಬ ಕೆಎಸ್‌ ಹೆಗ್ಡೆ ಆಸ್ಪತ್ರೆಯ ಮುಂಭಾಗದಿಂದ ಬಸ್‌ ಏರಿ ನನ್ನ ಸೀಟ್‌ನಲ್ಲಿ ಬಂದು ಕುಳಿತ. ಹೀಗೆ ಕುಳಿತವನು ಫೋನ್‌ನಲ್ಲಿ ಮಾತನಾಡುವ ನಾಟಕವಾಡುತ್ತ, ತನ್ನ ದೇಹವನ್ನು ಸ್ಪರ್ಶಿಸುತ್ತಿದ್ದ.

ಮಂಗಳೂರು: ಬಿಯರ್‌ ತುಂಬಿದ್ದ ಲಾರಿ ಪಲ್ಟಿ..! ಬಾಟಲ್‌ಗಳಿಗೆ ಮುಗಿಬಿದ್ದ ಮದ್ಯಪ್ರಿಯರು

ಇದು ಜಾಸ್ತಿಯಾಗುತ್ತಿದ್ದಂತೆ ನಾನು ಆತನನ್ನು ತರಾಟೆಗೆ ತೆಗೆದುಕೊಂಡೆ. ಹೀಗಾಗಿ ಆತ ಕ್ಷಮೆ ಕೇಳಿ ಹಿಂದಿನ ಸೀಟಿನಲ್ಲಿ ಕುಳಿತುಕೊಂಡ. ಮೂರು ಸ್ಟಾಪ್‌ ಕಳೆಯುತ್ತಿದ್ದಂತೆ ಅದೇ ವ್ಯಕ್ತಿ ಬೇರೆ ಬಸ್‌ನಿಂದ ಇಳಿದು ಮತ್ತೆ ನಾನಿರುವ ಮಹೇಶ್‌ಗೆ ಹತ್ತಿ, ಮತ್ತೆ ನನ್ನ ಬಳಿ ಬಂದು ಕುಳಿತ. ಮತ್ತೆ ಧೈರ್ಯವಾಗಿ ನನ್ನನ್ನು ಮುಟ್ಟುವ ಪ್ರಯತ್ನ ಮಾಡಿದ. ಇದರಿಂದ ಕೋಪಗೊಂಡ ನಾನು, ಬಸ್‌ ಚಲಿಸುತ್ತಿದಾಗಲೇ ಚೀರಾಡಿ ಆಕ್ರೋಶ ವ್ಯಕ್ತಪಡಿಸಿದೆ.



ನಿನ್ನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದೆ. ಆದರೆ ಆತ ಹಾಕಿದ್ದ ಮಾಸ್ಕನ್ನು ತೆಗೆದು ಹಾಕು ಎನ್ನುವಂತೆ ಪೋಸ್‌ ನೀಡಿದ. ಎಂದು ಯುವತಿ ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದಾಳೆ. ಅಲ್ಲದೆ ಬಸ್‌ನಲ್ಲಿದ್ದ ಯಾರೊಬ್ಬರು ಕೂಡ ನನ್ನ ಸಹಾಯಕ್ಕೆ ಬರಲಿಲ್ಲ. ಎಲ್ಲರೂ ಮೂಕ ಪ್ರೇಕ್ಷಕರಾಗಿ ನಿಂತಿದ್ದರು ಎಂದು ಯುವತಿ ಪೋಸ್ಟ್‌ನಲ್ಲಿ ನೋವು ತೋಡಿಕೊಂಡಿದ್ದಾಳೆ. ಸದ್ಯ ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಯುವತಿಗೆ ನೆಟ್ಟಿಗರು ಧೈರ್ಯ ತುಂಬಿದ್ದಾರೆ. ಅಲ್ಲದೆ ಯುವತಿ ತೋರಿದ ಧೈರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

ಇನ್ನು ಘಟನೆ ಬಗ್ಗೆ ಯುವತಿ ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇನ್ನು ಘಟನೆ ಬಗ್ಗೆ ಮುತುವರ್ಜಿವಹಿಸಿರುವ ಕಮೀಷನರ್‌ ಶಶಿ ಕುಮಾರ್‌, ಆರೋಪಿಯನ್ನು ಬಂಧಿಸಲು ತಂಡಗಳನ್ನು ರಚಿಸಲಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ಬಸ್‌‌ನ ಚಾಲಕ ಮತ್ತು ನಿರ್ವಾಹಕನನ್ನು ವಿಚಾರಿಸಲಾಗುವುದು. ಶೀಘ್ರವೇ ಬಸ್‌‌‌ ಸಂಘ, ಮಾಲಕರ ಸಭೆ ಕರೆಯಲಾಗುವುದು. ಮಹಿಳೆಯ, ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಲು ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ಉಡುಪಿ, ಕುಡ್ಲದ ಎನ್ನ ಮೋಕೆದ ಜನಕುಲೆ: ರವಿ ಕಟಪಾಡಿ ಜೊತೆ ಅಮಿತಾಬ್‌ ತುಳು ಮಾತಿಗೆ ಜನರು ಫಿದಾ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ