ಆ್ಯಪ್ನಗರ

ಮಂಗಳೂರು - ದುಬೈ ವಿಮಾನದಲ್ಲಿ ಬ್ಯಾಗ್‌ಗಳ ಲಾಕ್‌ ಒಡೆದು ಕಳವು: ವಿಮಾನ ಪ್ರಯಾಣಿಕರ ಆತಂಕ

ಹೊರ ದೇಶಗಳಿಗೆ ಪ್ರಯಾಣ ಹೋಗುವಾಗ ವಿಮಾನಗಳನ್ನು ಬಳಸುವುದು ಸಾಮಾನ್ಯ. ಈ ವೇಳೆ ಲಗೇಜ್‌ಗಳನ್ನು ಸಹ ಹೊತ್ತೊಯ್ಯಬೇಕಾಗುತ್ತದೆ. ಆದರೆ, ಈ ರೀತಿ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋಗುವಾಗ ಅದರ ಸುರಕ್ಷತೆ ಬಗ್ಗೆಯೂ ಪ್ರಶ್ನೆ ಏಳುತ್ತದೆ. ಇದೇ ರೀತಿ, ದುಬೈಗೆ ತೆರಳಿದ ವಿಮಾನದಲ್ಲಿ ಬ್ಯಾಗ್‌ಗಳ ಲಾಕ್‌ ಒಡೆದು ಕಳವು ಮಾಡಲಾಗಿದೆ.

Vijaya Karnataka 13 Sep 2019, 11:19 am
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ದುಬೈಗೆ ತೆರಳಿದ ವಿಮಾನವೊಂದರಲ್ಲಿ ಬ್ಯಾಗ್‌ನ ಲಾಕ್‌ ಒಡೆದು ಕಳವು ನಡೆಸಿದ ಆತಂಕಕಾರಿ ಘಟನೆ ಬುಧವಾರ ಮಧ್ಯಾಹ್ನ ಬೆಳಕಿಗೆ ಬಂದಿದೆ.
Vijaya Karnataka Web dubai mangalore flight 1


ದುಬೈ ತಲುಪಿದ ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರಿಗೆ ಕಳವು ಘಟನೆ ತಿಳಿದುಬಂದಿದೆ. ಆತಂಕಕ್ಕೊಳಗಾದ ಪ್ರಯಾಣಿಕರು ದುಬೈನಲ್ಲಿನ ವಿಮಾನ ಸಂಸ್ಥೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಂದ ಮಂಗಳೂರು ಹಾಗೂ ಬೆಂಗಳೂರಿನ ಕಚೇರಿಗಳಿಗೆ ಕಳವು ಘಟನೆ ಮಾಹಿತಿ ಇ-ಮೇಲ್‌ ಮೂಲಕ ರವಾನಿಸಿದ್ದಾರೆ.

ಏರ್‌ ಇಂಡಿಯಾ ವಿಮಾನದಲ್ಲಿ ಕಳವು


ಘಟನೆ ವಿವರ: ಸೆ.11ರಂದು ಬೆಳಗ್ಗೆ 9:30ಕ್ಕೆ ದುಬೈಗೆ ತೆರಳುವ ನಿರೀಕ್ಷೆಯಲ್ಲಿದ್ದ ಪ್ರಯಾಣಿಕರು ಬೆಳಗ್ಗೆ 8:30ಕ್ಕೆ ಲಗೇಜ್‌ಗಳ ತಪಾಸಣೆ ನಡೆಸಿದ್ದರು. ನಿಗದಿತ ಸಮಯಕ್ಕಿಂತ ಮೂರು ಗಂಟೆ ತಡವಾಗಿ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯಿತು. ಬೆಳಗ್ಗೆ 11:45ಕ್ಕೆ ಪ್ರಯಾಣಿಕರು ಪಾಸ್‌ಪೋರ್ಟ್‌ ತಪಾಸಣೆ, ಬೋರ್ಡಿಂಗ್‌ ಪಾಸ್‌ ಪಡೆದುಕೊಂಡರು. ಆನಂತರ ವಿಮಾನವು 12:30ಕ್ಕೆ ಮಂಗಳೂರಿನಿಂದ ದುಬೈಗೆ ನಿರ್ಗಮಿಸಿತು ಎಂದು ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ.

ಏರ್‌ ಇಂಡಿಯಾ ವಿಮಾನದಲ್ಲಿ ಕಳವು


ಅಂದು ಮಧ್ಯಾಹ್ನ 2 ಗಂಟೆಗೆ (ಭಾರತೀಯ ಕಾಲಮಾನ 3:30) ವಿಮಾನ ದುಬೈ ತಲುಪಿತು. ವಿಮಾನದಿಂದ ಇಳಿದ ಬಳಿಕ ಬ್ಯಾಗ್‌ ಇರುವ ವಿಭಾಗಕ್ಕೆ ತೆರಳಿದಾಗ ಬ್ಯಾಗ್‌ ನೋಡಿ ಪ್ರಯಾಣಿಕರಿಗೆ ಶಾಕ್‌ ಆಗಿತ್ತು. ನನ್ನ ಎರಡು ಬ್ಯಾಗ್‌ಗಳ ಲಾಕ್‌ ತುಂಡು ತುಂಡು ಮಾಡಲಾಗಿತ್ತು. ನನ್ನ ಬ್ಯಾಗ್‌ನಲ್ಲಿ ಏನೂ ಕಳವಾಗಿರಲಿಲ್ಲ. ಆದರೆ ಕೇರಳದವರ ಬ್ಯಾಗ್‌ನಿಂದ ಎರಡು ಮೊಬೈಲ್‌ಗಳು ಹಾಗೂ ಭಟ್ಕಳದವರ ಬ್ಯಾಗ್‌ನಿಂದ ವಾಚ್‌ ಸೇರಿದಂತೆ ನಾನಾ ವಸ್ತುಗಳು ಕಾಣೆಯಾಗಿದ್ದವು ಎಂದು ಮಂಗಳೂರಿನ ಪ್ರಯಾಣಿಕ ಸಂತ್ರಸ್ತ ಆಬಿದ್‌ ಹುಸೈನ್‌ ಅಳಲು ತೋಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ