ಆ್ಯಪ್ನಗರ

ಮಂಗಳೂರು: ಮನೆಗಳಿಗೆ ಬೆಂಕಿ, ಲಕ್ಷಾಂತರ ರೂ. ನಷ್ಟ

ರಾತ್ರಿ 8 ಗಂಟೆ ವೇಳೆಗೆ ಘಟನೆ ಸಂಭವಿಸಿದ್ದು, ಅಗ್ನಿ ಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಿದರು. ಪಾಂಡೇಶ್ವರ ಪೊಲೀಸರು, ಶಾಸಕ ವೇದವ್ಯಾಸ ಕಾಮತ್, ಮಾಜಿ ಕಾರ್ಪೊರೇಟರ್ ದಿವಾಕರ, ಮಹಾನಗರ ಪಾಲಿಕೆಯ ಅಧಿಕಾರಿಗಳು, ತಹಸೀಲ್ದಾರ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದರು. ನಗರದ ಪಾಂಡೇಶ್ವರದ ಧೂಮಪ್ಪ ಕಂಪೌಂಡ್‌ನಲ್ಲಿ ಶನಿವಾರ ರಾತ್ರಿ ಬೆಂಕಿ ದುರಂತ ಸಂಭವಿಸಿ 6 ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾರಿಗೂ ಅಪಾಯ ಸಂಭವಿಸಿಲ್ಲ.

Vijaya Karnataka Web 24 Mar 2019, 5:15 pm
ಮಂಗಳೂರು: ನಗರದ ಪಾಂಡೇಶ್ವರದ ಧೂಮಪ್ಪ ಕಂಪೌಂಡ್‌ನಲ್ಲಿ ಶನಿವಾರ ರಾತ್ರಿ ಬೆಂಕಿ ದುರಂತ ಸಂಭವಿಸಿ 6 ಮನೆಗಳಿಗೆ ಹಾನಿಯಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ. ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾರಿಗೂ ಅಪಾಯ ಸಂಭವಿಸಿಲ್ಲ.

ಶ್ರೀನಿವಾಸ್, ಪ್ರಕಾಶ್ ಆಚಾರ್ಯ, ಕಾರ್ತಿಕೇಯನ್, ಅಶೋಕ್, ಭಾಗ್ಯಶ್ರೀ, ಗೋವಿಂದನ್ ಅವರ ಮನೆಗಳ ಛಾವಣಿ ಬಹುತೇಕ ಪೂರ್ತಿ ಸುಟ್ಟು ಹೋಗಿದೆ. ಧೂಮಪ್ಪ ಕಂಪೌಂಡ್‌ನಲ್ಲಿ ಒಂದೇ ಛಾವಣಿ ಇರುವ 9 ಮನೆಗಳಿದ್ದು, ಈ ಪೈಕಿ 6 ಮನೆಗಳು ಬೆಂಕಿಯಿಂದ ಹಾನಿಗೀಡಾಗಿವೆ.

ರಾತ್ರಿ 8 ಗಂಟೆ ವೇಳೆಗೆ ಘಟನೆ ಸಂಭವಿಸಿದ್ದು, ಅಗ್ನಿ ಶಾಮಕ ದಳದವರು ಧಾವಿಸಿ ಬೆಂಕಿ ನಂದಿಸಿದರು. ಪಾಂಡೇಶ್ವರ ಪೊಲೀಸರು, ಶಾಸಕ ವೇದವ್ಯಾಸ ಕಾಮತ್, ಮಾಜಿ ಕಾರ್ಪೊರೇಟರ್ ದಿವಾಕರ, ಮಹಾನಗರ ಪಾಲಿಕೆಯ ಅಧಿಕಾರಿಗಳು, ತಹಸೀಲ್ದಾರ್ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿದರು.

ಮನೆಗೆ ಹಾನಿ ಆಗಿರುವುದರಿಂದ ಈ ಮನೆಗಳ ದುರಸ್ತಿಗೆ ಕಾಲಾವಕಾಶ ಬೇಕಾಗಿರುವುದರಿಂದ ತಾತ್ಕಾಲಿಕವಾಗಿ ಈ ಮನೆಗಳ ಮಂದಿಗೆ ವಾಸಿಸಲು ಪರ್ಯಾಯ ವ್ಯವಸ್ಥೆ ಮಾಡುವಂತೆ ಶಾಸಕ ವೇದವ್ಯಾಸ ಕಾಮತ್ ಜಿಲ್ಲಾಧಿಕಾರಿಗಳನ್ನು ಕೋರಿದ್ದು, ಅದರಂತೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ವೀಡಿಯೋ: ಮಂಗಳೂರಿನಲ್ಲಿ ಭಾರೀ ಬೆಂಕಿ, 7 ಮನೆಗಳಿಗೆ ಹಾನಿ

ಪ್ರಾರಂಭಲ್ಲಿ ಒಂದು ಮನೆಗೆ ಬೆಂಕಿ ತಗುಲಿದ್ದು, ಬಳಿಕ ಅದು ಇತರ ಮನೆಗಳಿಗೆ ವ್ಯಾಪಿಸಿತು. ಮೊದಲು ಬೆಂಕಿ ಕಾಣಿಸಿಕೊಂಡ ಮನೆಯಲ್ಲಿ ಯಾರೂ ಇರಲಿಲ್ಲ ಎನ್ನಲಾಗಿದೆ. ಈ ಮನೆಗೆ ಬೆಂಕಿ ತಗುಲಿರುವುದನ್ನು ಪಕ್ಕದ ಮನೆಗಳ ಮಂದಿ ಗಮನಿಸಿದ್ದು, ಬಳಿಕ ಎಲ್ಲ ಮನೆಗಳ ಜನರು ಓಡಿ ಹೊರಗೆ ಬಂದರು. ಮನೆಯ ಒಳಗಿದ್ದ ಗ್ಯಾಸ್ ಸಿಲಿಂಡರ್‌ಗಳನ್ನು ಹೊರಕ್ಕೆ ಸಾಗಿಸಿ ಹೆಚ್ಚುವರಿ ಹಾನಿ ಆಗುವುದನ್ನು ತಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ