ಆ್ಯಪ್ನಗರ

ಮನಪಾ ಆರೋಗ್ಯಾಧಿಕಾರಿ ಎಂದು ಸುಳ್ಳು ಹೇಳಿ ನಗ-ನಗದು ದೋಚಿದರು!

ದಡ್ಡಲ್‌ಕಾಡ್‌ ನಿವಾಸಿ ಮೀರಾ ಪೈ ಎಂಬವರ ಮನೆಗೆ ನ.16ರಂದು ಬೆಳಗ್ಗೆ 10.30 ಗಂಟೆ ಇಬ್ಬರು ಅಪರಿಚಿತರು ಆಗಮಿಸಿ, ನಾವು ಮನಪಾ ಆರೋಗ್ಯ ಇಲಾಖೆಯ ಅಧಿಕಾರಿ, ನಿಮ್ಮ ಮನೆಯ ಸುತ್ತ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಲು ಬಂದಿದ್ದೇವೆ ಎಂದು ಹೇಳಿದ್ದಾರೆ.

Vijaya Karnataka 18 Nov 2021, 9:18 pm
ಮಂಗಳೂರು: ಮಹಾನಗರ ಪಾಲಿಕೆಯ ಆರೋಗ್ಯ ಇಲಾಖೆಯ ಅಧಿಕಾರಿಗಳು ಎಂದು ಹೇಳಿ ಸುಳ್ಳು ಹೇಳಿದ ತಂಡವೊಂದು ಮಹಿಳೆಯೊಬ್ಬರು ವಾಸ್ತವ್ಯವಿದ್ದ ಮನೆ ಪ್ರವೇಶಿಸಿ ಚಿನ್ನಾಭರಣ, ನಗದನ್ನು ಲೂಟಿ ಮಾಡಿ ಪರಾರಿಯಾದ ಘಟನೆ ಉರ್ವಾದಲ್ಲಿ ನಡೆದಿದೆ.
Vijaya Karnataka Web ಪೊಲೀಸ್‌
ಪೊಲೀಸ್‌


ಮಂಗಳೂರು ದಡ್ಡಲ್‌ಕಾಡ್‌ ನಿವಾಸಿ ಮೀರಾ ಪೈ ಎಂಬವರ ಮನೆಗೆ ನ.16ರಂದು ಬೆಳಗ್ಗೆ 10.30 ಗಂಟೆ ಇಬ್ಬರು ಅಪರಿಚಿತರು ಆಗಮಿಸಿ, ನಾವು ಮನಪಾ ಆರೋಗ್ಯ ಇಲಾಖೆಯ ಅಧಿಕಾರಿ, ನಿಮ್ಮ ಮನೆಯ ಸುತ್ತ ಸ್ವಚ್ಛತೆಯ ಬಗ್ಗೆ ಪರಿಶೀಲನೆ ನಡೆಸಲು ಬಂದಿದ್ದೇವೆ ಎಂದು ಹೇಳಿದ್ದಾರೆ. ಬಳಿಕ ನೀರಿನ ಸಂಪ್‌ ಚೆಕ್‌ ನೋಡಬೇಕೆಂದು ಹೇಳಿ ಚೆಕ್‌ ಮಾಡಿದ್ದಾರೆ. ಆ ಬಳಿಕ ಮನೆಯ ಟೆರಸಿಗೂ ತೆರಳಿ ನೀರಿನ ಟಾಂಕಿ ಪರಿಶೀಲನೆ ನಡೆಸಿದ್ದಾರೆ.

ಹೊಸ ಕಟ್ಟಡ ಪೂರ್ಣಗೊಂಡಿಲ್ಲ, ಹಳೇ ಕಟ್ಟಡಕ್ಕೆ ಕಾಲಿಡುವಂತಿಲ್ಲ..! ಅಂಗನವಾಡಿ ಮಕ್ಕಳ ತ್ರಿಶಂಕು ಸ್ಥಿತಿ..!

ಮತ್ತೊಬ್ಬ ಆರೋಪಿ ಎಂಟ್ರಿ: ಮಹಿಳೆ ಸಹಿತ ಆರೋಪಿಗಳು ಟೆರಸಿಗೆ ಹೋದಾಗ ಇನ್ನೊಬ್ಬ ಆರೋಪಿ ಆಗಮಿಸಿ ನೇರವಾಗಿ ಮನೆಗೆ ಪ್ರವೇಶಿಸಿದ್ದಾರೆ. ಕಪಾಟು ಕೀ ಅದರಲ್ಲೇ ನೇತು ಹಾಕಿದ ಕಾರಣ ಕಪಾಟು ಬಾಗಿಲು ತೆರೆದು 68 ಗ್ರಾಂ ಚಿನ್ನಾಭರಣ ಮತ್ತು 71 ಸಾವಿರ ರೂ. ನಗರ ಹಣ ದೋಚಿ ಪರಾರಿಯಾಗಿದ್ದಾನೆ.

ಆನ್‌ಲೈನ್ ಸಾಲ ವಂಚನೆ: 1.2 ಲಕ್ಷ ರೂಪಾಯಿ ಕಳೆದುಕೊಂಡ ಮಂಗಳೂರಿನ ವ್ಯಕ್ತಿ

ಸ್ಥಳೀಯರಿಗೆ ಅನುಮಾನ

ಆರೋಗ್ಯಾ ಇಲಾಖೆ ಸಿಬ್ಬಂದಿ ಎಂದು ಹೇಳಿ ಬಂದವರ ಬಗ್ಗೆ ಸ್ಥಳೀಯರಿಗೆ ಅನುಮಾನ ಬಂದಿದ್ದು, ನೀವು ಮಹಾನಗರ ಪಾಲಿಕೆ ಸಿಬ್ಬಂದಿ ಅನ್ನುವುದಕ್ಕೆ ದಾಖಲೆ ಏನಿದೆ ಎಂದು ಕೇಳಿದ್ದಾರೆ. ಅಷ್ಟರಲ್ಲಿ ಅಲ್ಲಿಂದ ಬೈಕ್‌ನಲ್ಲಿ ಇಬ್ಬರು ಕಾಲ್ಕಿತ್ತಿದ್ದಾರೆ. ಮಹಿಳೆ ಮನೆಯೊಳಗೆ ಹೋದ ಬಳಿಕ ಈ ಕಳವು ಕೃತ್ಯ ಬಯಲಾಗಿದೆ. ಘಟನೆಗೆ ಸಂಬಂಧಿಸಿ ಕೆಲವೊಂದು ದಾಖಲೆಗಳು ಸಿಸಿ ಕ್ಯಾಮೆರಾದಲ್ಲಿ ದೊರೆತ್ತಿದ್ದು, ಇದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉರ್ವ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಾಲಿಕೆಯಿಂದ ಮನೆ ಮನೆಗೆ ಲಸಿಕಾ ಮಿತ್ರ

ರಾಜ್ಯ ಸರಕಾರದ ಆದೇಶದಂತೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಮಾರ್ಗದರ್ಶನದಲ್ಲಿ ಹರ್‌ ಘರ್‌ ದಸ್ಕಕ್‌ (ಮನೆ ಮನೆಗೆ ಲಸಿಕಾ ಅಭಿಯಾನ) ಅಭಿಯಾನವನ್ನು ನ.30ರ ತನಕ ಆಯೋಜಿಸಲಾಗಿದೆ ಎಂದು ಮಂಗಳೂರು ಮಹಾನಗರ ಪಾಲಿಕ ಆಯುಕ್ತ ಅಕ್ಷಯ್ ಶ್ರೀಧರ್‌ ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಕೋವಿಡ್‌ ಲಸಿಕಾ ನೋಡಲ… ಅಧಿಕಾರಿಗಳು, ಸರ್ವೇಕ್ಷಣಾ ವೈದ್ಯಾಧಿಕಾರಿ, ಪಾಲಿಕೆ ಮೆಡಿಕಲ… ಆಫೀಸರ್‌ ಮತ್ತು ವೈದ್ಯಾಧಿಕಾರಿಗಳ ಸಮಕ್ಷಮದಲ್ಲಿನಗರ ಆರೋಗ್ಯ ಕೇಂದ್ರಗಳ ಎಲ್ಲಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳ ಜತೆ ಸಂವಹನ ನಡೆಸಿ, ನಗರದ ಎಲ್ಲಕಾಲೇಜುಗಳ ಎನ್‌ಎಸ್‌ಎಸ್‌ ವಿದ್ಯಾರ್ಥಿಗಳ ಸಹಕಾರದೊಂದಿಗೆ ಪ್ರಥಮ ಮತ್ತು ದ್ವಿತೀಯ ಲಸಿಕೆ ಪಡೆಯದವರನ್ನು ಗುರುತಿಸಿ, ಅವರಿಗೆ ಸಲಹೆ, ಸಾಂತ್ವನ ನೀಡಿ ಅಲ್ಲೇ ಲಸಿಕೆ ಕೊಡುವ ಅಭಿಯಾನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ