ಆ್ಯಪ್ನಗರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಲಾದುನ್ನಬಿ ಆಚರಣೆ

ಪ್ರವಾದಿ ಮುಹಮ್ಮದ್‌ ಅವರ 1494ನೇ ಜನ್ಮದಿನವಾದ ಈದ್‌ ಮಿಲಾದ್‌ ಆಚರಣೆಯು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಭಾನುವಾರ ನಡೆಯಿತು.

Vijaya Karnataka 11 Nov 2019, 5:00 am
ಮಂಗಳೂರು: ಪ್ರವಾದಿ ಮುಹಮ್ಮದ್‌ ಅವರ 1494ನೇ ಜನ್ಮದಿನವಾದ ಈದ್‌ ಮಿಲಾದ್‌ ಆಚರಣೆಯು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಭಾನುವಾರ ನಡೆಯಿತು.
Vijaya Karnataka Web miladunnabi celebrated in dk
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಿಲಾದುನ್ನಬಿ ಆಚರಣೆ

ಜಿಲ್ಲೆಯ ಹೆಚ್ಚಿನ ಮಸೀದಿ, ಮದ್ರಸಗಳ ವತಿಯಿಂದ ಬೆಳಗ್ಗೆ ವಿದ್ಯಾರ್ಥಿಗಳಿಂದ ಪ್ರವಾದಿ ಸಂದೇಶ ಸಾರುವ ಗೀತೆಗಳ ಸಹಿತ ಮೆರವಣಿಗೆ, ವಾಹನ ರಾರ‍ಯಲಿ ಇತ್ಯಾದಿ ನಡೆಯಿತು. ಸಿಹಿತಿಂಡಿ, ತಂಪು ಪಾನೀಯ ವಿತರಣೆ, ಮಧ್ಯಾಹ್ನ ಮಸೀದಿಗಳಲ್ಲಿಊಟದ ವ್ಯವಸ್ಥೆ ಮಾಡಲಾಗಿತ್ತು. ಮಸೀದಿ ಹಾಗೂ ಆವರಣವನ್ನು ಅಲಂಕರಿಸಲಾಗಿದ್ದು, ಬೆಳಗ್ಗಿನಿಂದಲೇ ವಿದ್ಯಾರ್ಥಿಗಳಿಂದ ಮಸೀದಿ-ಮದ್ರಸಗಳ ವಠಾರದಲ್ಲಿಪ್ರವಾದಿಯ ಮದ್‌ಹ್‌ ಗೀತೆಗಳು, ಮೆರವಣಿಗೆ, ವಾಹನ ರಾರ‍ಯಲಿ, ಮೌಲಿದ್‌ ಮಜ್ಲಿಸ್‌, ಕೂಟು ಝಿಯಾ ರತ್‌ ಇತ್ಯಾದಿ ನಡೆಯಿತು.
ಮದ್ರಸದ ಪ್ರಾಥಮಿಕ ಮತ್ತು ಪ್ರೌಢ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಿಸಲಾಯಿತು. ಮಸೀದಿ-ಮದ್ರಸಗಳ ಸುತ್ತಮುತ್ತ ಶುಭ ಕೋರುವ ಬ್ಯಾನರ್‌, ಬಂಟಿಂಗ್ಸ್‌ ಇತ್ಯಾದಿ ರಾರಾಜಿಸುತ್ತಿತ್ತು. ಅಲ್ಲಲ್ಲಿಸಿಹಿ ತಿಂಡಿ, ತಂಪು ಪಾನೀಯ ವಿತರಿಸಿ ಸಂಭ್ರ ಮಿಸಿದರು. ಹೆಚ್ಚಿನೆಡೆ ಹಿಂದು- ಕ್ರೈಸ್ತ ಬಾಂಧವರು ಮಕ್ಕಳಿಗೆ ಸಿಹಿತಿಂಡಿ- ಪಾನೀಯ ವಿತರಿಸಿ ಸೌಹಾರ್ದಕ್ಕೆ ಮಾದರಿಯಾದರು. ನಗರದ ಬಂದರ್‌ ಪ್ರದೇಶದಲ್ಲಿಅಲ… ಅಝ್ಹರಿಯಾ, ಕಂಡತ್‌ ಪಳ್ಳಿ, ಮದೀನಾ ಮಸೀದಿ, ಮೊಯ್ದಿನ್‌ ಪಳ್ಳಿ, ನಡುಪಳ್ಳಿ ವ್ಯಾಪ್ತಿಯ ಮದ್ರಸಗಳ ಮಕ್ಕಳು ಮೀಲಾದ್‌ ಮೆರವಣಿಗೆ ನಡೆಸಿದರು. ಸೌಹಾರ್ದಕ್ಕೆ ಸಾಕ್ಷಿ: ಬಂದರ್‌ ಕಂದುಕ ಪ್ರದೇಶದಲ್ಲಿಮಿಲಾದ್‌ ಮೆರವಣಿಗೆ ಸಂದರ್ಭ ತುಳುನಾಡ ಸಂಜೀವಿನಿ ಸಂಸ್ಥೆ ಹಾಗೂ ಯುವಶಕ್ತಿ ಫ್ರೆಂಡ್ಸ್‌ ವತಿಯಿಂದ ಸಿಹಿತಿಂಡಿ ಹಾಗೂ ತಂಪು ಪಾನೀಯಗಳನ್ನು ವಿತರಿಸಿ ಸೌಹಾರ್ದಕ್ಕೆ ಸಾಕ್ಷಿಯಾದರು. ಸಂಸ್ಥೆಗಳ ಪದಾಧಿಕಾರಿಗಳಾದ ರೋಹಿತ್‌ ಕುಮಾರ್‌, ಸದಾಶಿವ ಶೆಟ್ಟಿ, ಮಹೇಂದ್ರ ಕಾಶಿಪಟ್ನ, ರಾಹುಲ… ದೇವಿಪ್ರಸಾದ್‌, ಮಹೇಶ್‌ ಉಪ್ಪಿನಂಗಡಿ ಉಪಸ್ಥಿತರಿದ್ದರು. ಮಂಗಳೂರಿನ ಬಂದರ್‌, ಕಂದುಕ, ಕುದ್ರೋಳಿ, ಬೆಂಗರೆ, ತಣ್ಣೀರುಬಾವಿ, ಜೆಪ್ಪು, ಬೋಳಾರ, ಕಂಕನಾಡಿ, ಅಡ್ಯಾರ್‌ ಕಣ್ಣೂರು, ಮಾರಿಪಳ್ಳ, ಸುರತ್ಕಲ್‌, ಕಾಟಿಪಳ್ಳ, ಕೃಷ್ಣಾಪುರ, ತೊಕ್ಕೊಟ್ಟು, ಉಳ್ಳಾಲ, ತಲಪಾಡಿ, ಕೆ.ಸಿ.ರೋಡ್‌, ಸೋಮೇಶ್ವರ, ಕೋಟೆಕಾರ್‌, ದೇರಳಕಟ್ಟೆ, ಕುತ್ತಾರ್‌, ಕೊಣಾಜೆ, ಪಾವೂರು, ಹರೇಕಳ, ಅಂಬ್ಲಮೊಗರು, ಬೆಳ್ಮ, ನಾಟೆಕಲ್‌, ಕಿನ್ಯ, ಮಂಜನಾಡಿ, ಮುಡಿಪು ಮತ್ತಿತರ ಕಡೆ ಸಂಭ್ರಮದ ಮಿಲಾದುನ್ನಬಿ ಆಚರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ