ಆ್ಯಪ್ನಗರ

ಮಿಥುನ್‌ ರೈ ಹೇಳಿಕೆ ಜಿಲ್ಲೆಯ ಸಂಸ್ಕ್ಕೃತಿ ಅಲ್ಲ: ಭರತ್‌ ಶೆಟ್ಟಿ

ಸುರತ್ಕಲ್‌ ಟೋಲ್‌ ಗೇಟ್‌ ಯುಪಿಎ ಅವಧಿಯಲ್ಲಿ ಪ್ರಾರಂಭವಾಗಿತ್ತು. ಈ ಸತ್ಯವನ್ನು ಮರೆಮಾಚಿ ಬಿಜೆಪಿಯ ಮೇಲೆ ಸುಳ್ಳು ಆರೋಪ ಹಾಕಿ ಜನರ ದಾರಿ ತಪ್ಪಿಸುವ ವಿಫಲ ಯತ್ನ ಮಾಡುವ ಭರದಲ್ಲಿ ಮಿಥುನ್‌ ರೈ ಕೊಟ್ಟಿರುವ ಹೇಳಿಕೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ ಅಲ್ಲಎಂದು ಮಂಗಳೂರು ಉತ್ತರ ಶಾಸಕ ಡಾ. ವೈ . ಭರತ್‌ ಶೇಟ್ಟಿ ಹೇಳಿದ್ದಾರೆ.

Vijaya Karnataka 19 Jul 2019, 5:00 am
ಸುರತ್ಕಲ್‌ : ಸುರತ್ಕಲ್‌ ಟೋಲ್‌ ಗೇಟ್‌ ಯುಪಿಎ ಅವಧಿಯಲ್ಲಿ ಪ್ರಾರಂಭವಾಗಿತ್ತು. ಈ ಸತ್ಯವನ್ನು ಮರೆಮಾಚಿ ಬಿಜೆಪಿಯ ಮೇಲೆ ಸುಳ್ಳು ಆರೋಪ ಹಾಕಿ ಜನರ ದಾರಿ ತಪ್ಪಿಸುವ ವಿಫಲ ಯತ್ನ ಮಾಡುವ ಭರದಲ್ಲಿ ಮಿಥುನ್‌ ರೈ ಕೊಟ್ಟಿರುವ ಹೇಳಿಕೆ ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿ ಅಲ್ಲಎಂದು ಮಂಗಳೂರು ಉತ್ತರ ಶಾಸಕ ಡಾ. ವೈ . ಭರತ್‌ ಶೇಟ್ಟಿ ಹೇಳಿದ್ದಾರೆ.
Vijaya Karnataka Web mithun rai staement is not the culture of districtl bharath shetty
ಮಿಥುನ್‌ ರೈ ಹೇಳಿಕೆ ಜಿಲ್ಲೆಯ ಸಂಸ್ಕ್ಕೃತಿ ಅಲ್ಲ: ಭರತ್‌ ಶೆಟ್ಟಿ


ಮೂರು ಬಾರಿ ಗೆದ್ದಿರುವ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರು ಅಭಿವೃದ್ಧಿಗೆ ಸಾವಿರಾರು ಕೋಟಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅವರು ಸುರತ್ಕಲ್‌ ಟೋಲ್‌ ಗೇಟ್‌ ಬಗ್ಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಜತೆ ಮಾತನಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ರಾಜ್ಯ, ರಾಷ್ಟ್ರದಲ್ಲಿ ಸಜ್ಜನಿಕೆಯ ರಾಜಕಾರಣದ ಶ್ರೇಷ್ಠ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ. ಆದರೆ ಮಿಥುನ್‌ ರೈ ಹೇಳಿಕೆ ಅವರದ್ದೇ ಪಕ್ಷ ದ ಮುಖಂಡರೂ ಕೂಡ ತಲೆತಗ್ಗಿಸುವಂತೆ ಮಾಡಿದೆ. ಪಾಲಿಕೆಯ ವ್ಯಾಪ್ತಿಯೊಳಗೆ ಟೋಲ್‌ ಗೇಟ್‌ ಇರಬಾರದು ಎನ್ನುವ ನಿಯಮದ ಬಗ್ಗೆ ಕಾಂಗ್ರೆಸ್‌ ಮುಖಂಡರಿಗೆ ಸ್ಥಳೀಯರು ಮನವರಿಕೆ ಮಾಡಿದ್ದರು. ಆದರೆ ಸ್ಥಳೀಯರಿಗೆ ಸುಂಕ ಇರುವುದಿಲ್ಲ ಎನ್ನುವ ಭರವಸೆ ನೀಡಿ ಯುಪಿಎ ಟೋಲ್‌ ಸಂಗ್ರಹ ಮಾಡಲು ಆರಂಭಿಸಿತ್ತು ಎಂದು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ