ಆ್ಯಪ್ನಗರ

ಮುಂಗಾರಿಗೆ 'ನಿಸರ್ಗ'ದ ಆವೇಗ‌: ಜೂ.8ರ ನಂತರ ಭಾರೀ ಮಳೆ ಸಂಭವ!

ಕೇರಳಕ್ಕೆ ಮುಂಗಾರು ಪ್ರವೇಶವಾಗಿ ಮೂರೇ ದಿನಗಳಲ್ಲಿ ಕರಾವಳಿ ಜತೆಗೆ ಮಲೆನಾಡು ಪ್ರದೇಶಕ್ಕೆ ಮುಂಗಾರು ಪ್ರವೇಶ ಮಾಡಿದೆ. ಆದರೆ ಹೇಳುವಂತಹ ಮಳೆ ಸುರಿದಿಲ್ಲ. ಆದರೆ, ಜೂನ್ 8ರ ನಂತರ ರಾಜ್ಯಕ್ಕೆ ಭರ್ಜರಿ ಮಳೆ ಸುರಿಯಲಿದೆ ಎಂದಿದ್ದಾರೆ ವಿಜ್ಞಾನಿಗಳು.

Vijaya Karnataka Web 7 Jun 2020, 3:51 pm
ಮಂಗಳೂರು: ಕೇರಳಕ್ಕೆ ಮುಂಗಾರು ಪ್ರವೇಶವಾಗಿ ಮೂರೇ ದಿನಗಳಲ್ಲಿ ಕರಾವಳಿ ಜತೆಗೆ ಮಲೆನಾಡು ಪ್ರದೇಶಕ್ಕೆ ಮುಂಗಾರು ಪ್ರವೇಶ ಮಾಡಿದೆ. ಆದರೆ ಹೇಳುವಂತಹ ಮಳೆ ಸುರಿದಿಲ್ಲ. ಇದಕ್ಕೆಲ್ಲ ನಿಸರ್ಗ ಚಂಡಮಾರುತದ ಪ್ರಭಾವ ಎನ್ನುತ್ತಾರೆ ವಿಜ್ಞಾನಿಗಳು.

ಕೇರಳಕ್ಕೆ ಕಳೆದ ವರ್ಷ ಜೂ.8ಕ್ಕೆ ಮುಂಗಾರು ಪ್ರವೇಶಿಸಿದ್ದರೆ, ಈ ವರ್ಷ ಜೂ.1ರಂದು ಆಗಮಿಸಿದೆ. ಅಲ್ಲಿ ಮುಂಗಾರು ಪ್ರವೇಶವಾಗಿ ಮೂರೇ ದಿನಗಳಲ್ಲಿ ಕರಾವಳಿ ಸೇರಿದಂತೆ ಮಲೆನಾಡು ಪ್ರದೇಶಕ್ಕೆ ಮುಂಗಾರು ಪ್ರವೇಶ ಪಡೆದುಕೊಂಡಿದೆ. ಆದರೆ ನಿಸರ್ಗ ಚಂಡಮಾರುತದಿಂದಾಗಿ ಮುಂಗಾರು ಕ್ಷೀಣಿಸಿದೆ.

ನಿಸರ್ಗ ಚಂಡಮಾರುತ ಇಲ್ಲಿನ ತೇವಾಂಶವನ್ನು ಹೀರಿಕೊಂಡು ಹೋದ ಪರಿಣಾಮ ಮುಂಗಾರು ತನ್ನ ಎಂದಿನ ಲಯ ಪಡೆದುಕೊಳ್ಳಲು ಇನ್ನೆರಡು ದಿನಗಳು ಬೇಕಾಗುತ್ತದೆ ಎನ್ನುವುದು ಹವಾಮಾನ ಇಲಾಖೆಯ ಅಭಿಪ್ರಾಯ.

ಉಡುಪಿ, ಯಾದಗಿರಿಯಲ್ಲಿ ಶತಕ ದಾಟಿದ ಕೊರೊನಾ ಸೋಂಕು!

ಕಳೆದ ವರ್ಷ ಕರಾವಳಿಗೆ ಜೂ.14ರ ಬಳಿಕ ಮುಂಗಾರು ಪ್ರವೇಶಿಸಿತ್ತು. ಆ ಬಳಿಕ ನಿರಂತರ ಮಳೆ ಸುರಿದಿದೆ. ಆದರೆ ಈ ಬಾರಿ ಕೊಂಚ ಬೇಗನೆ ಮುಂಗಾರು ಬಂದರೂ, ನಿಸರ್ಗದ ಪ್ರಭಾವದಿಂದ ಕ್ಷೀಣಗೊಂಡಿದೆ ಎನ್ನುತ್ತಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆಯ ಸಹಾಯಕ ವಿಜ್ಞಾನಿ ಎಸ್‌.ಎಸ್‌.ಎಂ. ಗವಾಸ್ಕರ್‌.

ಜೂ.8ರ ಮೇಲೆ ಭರ್ಜರಿ ಮಳೆ: ನಿಸರ್ಗ ಚಂಡಮಾರುತದ ಪ್ರಭಾವದಿಂದ ಕ್ಷೀಣಗೊಂಡ ಮುಂಗಾರು ತನ್ನ ನಿಜವಾದ ಶಕ್ತಿಯನ್ನು ಜೂ.8ರ ಬಳಿಕ ತೋರಿಸುವ ಸಾಧ್ಯತೆ ಇದೆ. ಈ ಸಮಯದಲ್ಲಿ ಆರಂಭವಾದ ಮಳೆ ನಾಲ್ಕೈದು ದಿನಗಳ ಕಾಲ ಭರ್ಜರಿಯಾಗಿ ಸುರಿಯಲಿದೆ ಎನ್ನುವುದು ಹವಾಮಾನ ಇಲಾಖೆಯ ಮಾಹಿತಿ.

"ಈಗಾಗಲೇ ಕರಾವಳಿಯಲ್ಲಿಮಳೆಯ ಮೋಡಗಳು ಗೋಚರವಾಗಿದೆ. ಕೆಲವು ದಿನಗಳ ಬಳಿಕ ಇದು ಮಳೆಯಾಗಿ ಬದಲಾವಣೆಯಾಗುವ ಸಾಧ್ಯತೆ ಇದೆ. ಮೀನುಗಾರಿಕೆ ಹೋಗುವ ಮೀನುಗಾರರು ಯಾವುದೇ ಕಾರಣಕ್ಕೂ ಮೀನುಗಾರಿಕೆ ಹೋಗಬಾರದು. ಕಡಲಿನಲ್ಲಿ ತೂಫಾನ್‌ ಇರುವುದರಿಂದ ಮೀನುಗಾರಿಕೆಯಲ್ಲಿರುವ ಮಂದಿಗೆ ಅಪಾಯವಿದೆ."
-ಎಸ್‌.ಎಸ್‌.ಎಂ. ಗವಾಸ್ಕರ್‌, ಸಹಾಯಕ ವಿಜ್ಞಾನಿ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಸಂಸ್ಥೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ