ಆ್ಯಪ್ನಗರ

ಶಿವರಾತ್ರಿಗೆ ಕುದ್ರೋಳಿಯಲ್ಲಿ ಕೊಡಿಮರ ಸ್ಥಾಪನೆ

2019ರ ಫೆ.27ರಿಂದ ಮಹಾಶಿವರಾತ್ರಿ ಜಾತ್ರೆ ಆರಂಭಗೊಳ್ಳಲಿದೆ. ಮಾ.4ರಂದು ಶಿವರಾತ್ರಿ ನಡೆಯಲಿದೆ. ಇದಕ್ಕೂ ಮೊದಲು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತ ಬ್ರಹ್ಮಕಲಶ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಅವರು ಹೇಳಿದರು.

Vijaya Karnataka 26 Oct 2018, 9:48 am
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಕೊಡಿಮರ (ಧ್ವಜಸ್ತಂಭ) ವನ್ನು ಮಹಾಶಿವರಾತ್ರಿ ಸಂದರ್ಭದಲ್ಲಿ ಪ್ರತಿಷ್ಠೆ ಮಾಡಲಾಗುವುದು ಎಂದು ದೇವಸ್ಥಾನ ನವೀಕರಣದ ರೂವಾರಿ ಬಿ.ಜನಾರ್ದನ ಪೂಜಾರಿ ಹೇಳಿದರು.
Vijaya Karnataka Web kudrali


2019ರ ಫೆ.27ರಿಂದ ಮಹಾಶಿವರಾತ್ರಿ ಜಾತ್ರೆ ಆರಂಭಗೊಳ್ಳಲಿದೆ. ಮಾ.4ರಂದು ಶಿವರಾತ್ರಿ ನಡೆಯಲಿದೆ. ಇದಕ್ಕೂ ಮೊದಲು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಹಿತ ಬ್ರಹ್ಮಕಲಶ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಅವರು ಹೇಳಿದರು.

ಸುಳ್ಯ ಪಡುಮಲೆಯ ಕೋಟಿ- ಚೆನ್ನಯರು ಜನಿಸಿದ ಪುಣ್ಯಭೂಮಿಯಿಂದ 47 ಅಡಿ ಉದ್ದದ ಕೊಡಿ ಮರವನ್ನು 2017ರ ಫೆ.12ರಂದು ತಂದಿದ್ದು, ಮೇ 17ರಂದು ತೈಲದಲ್ಲಿ ಹಾಕಿಡಲಾಗಿದೆ. ಕುದ್ರೋಳಿ ಕ್ಷೇತ್ರಕ್ಕೆ ದೇಶ, ವಿದೇಶದಿಂದ ಎಲ್ಲ ಜಾತಿ, ಮತಗಳ ಭಕ್ತರು ಭೇಟಿ ನೀಡುತ್ತಿದ್ದಾರೆ. ಮಾಜಿ ಪ್ರಧಾನಿ ರಾಜೀವ ಗಾಂಧಿ, ಸೋನಿಯಾ ಗಾಂಧಿ ಬಂದಿದ್ದರು ಎಂದು ಅವರು ಹೇಳಿದರು.

ಕಣ್ಣೀರಿಟ್ಟ ಪೂಜಾರಿ: ಕುದ್ರೋಳಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿದ ಬಿ.ಜನಾರ್ದನ ಪೂಜಾರಿ, ಬಳಿಕ ವಾದ್ಯಘೋಷ ಸಹಿತ ಕೊಡಿ ಮರವನ್ನು ತೈಲದಲ್ಲಿ ಹಾಕಿಟ್ಟಿರುವ ಸ್ಥಳಕ್ಕೆ ಭೇಟಿ ನೀಡಿ, ತನ್ನಿಂದ ತಪ್ಪಾಗಿದೆ. ಕ್ಷಮಿಸು... ಶಿವಾ ಕಾಪಾಡು..... ಎಂದು ಕೈಮುಗಿದು ಕಣ್ಣೀರಿಟ್ಟರು.

'ಬುಧವಾರ ರಾತ್ರಿ ತಾನು ಮಲಗಿದ್ದೆ. ಮಧ್ಯರಾತ್ರಿ 12 ಗಂಟೆಗೆ ಯಾರೋ ಬಲವಾಗಿ ಹೊಡೆದರು. ನೀನು ನನ್ನನ್ನು ಮರೆತಿದ್ದಿಯಾ? ಅಲ್ಲಿ ಕೊಡಿ ಮರ ಹಾಗೆಯೇ ಬಿಟ್ಟಿದ್ದಾರೆ. ಕಾಣುವುದಿಲ್ಲವೇ? ಎಂದು ಇನ್ನೊಂದು ಪೆಟ್ಟು ಹೊಡೆದರು. ನಾಳೆಯೇ ಕೊಡಿ ಮರಕ್ಕೆ ಪೂಜೆ ಸಲ್ಲಿಸು. ಎಲ್ಲರನ್ನೂ ಕರೆಸು ಎಂದು ಹೊಡೆದರು. ನನ್ನ ಶರೀರ ಕಂಪಿಸಿತು. ತಡೆಯಲಾಗಲಿಲ್ಲ. ನನಗೆ ತಪ್ಪಿನ ಅರಿವಾಯಿತು. ಶಿವಾ... ನನ್ನನ್ನು ಕ್ಷಮಿಸಿ ಎಂದು ಕಾಲಿಗೆ ಬಿದ್ದೆ' ಎಂದು ಪೂಜಾರಿ ಹೇಳಿದರು.

'ಹೌದು ನಾವು ಶಿವನನ್ನು ಮರೆತಿದ್ದೇವೆ. ಕಳೆದ ವರ್ಷವೇ ಕೊಡಿ ಮರವನ್ನು ತಂದು ಇಟ್ಟಿದ್ದರೂ ಪ್ರತಿಷ್ಠಾಪನೆ ಮಾಡಿಲ್ಲ. ಶಿವರಾತ್ರಿಗೆ ಕೊಡಿಮರ ಪ್ರತಿಷ್ಠಾಪನೆ ಮಾಡುತ್ತೇವೆ. ಮಾತಿನಂತೆ ನಡೆಯುತ್ತೇವೆ. ಶಿವ ನಮಗೆ ರಕ್ಷಣೆ ಕೊಡು. ಆಶೀರ್ವಾದ ಮಾಡಿ ಕಾಪಾಡು. ಇಲ್ಲದಿದ್ದಲ್ಲಿ ಮುಂದೆ ಜನಾರ್ದನ ಪೂಜಾರಿ ಪೂಜೆ ಮಾಡುವುದಿಲ್ಲ ಎಂದು ಗದ್ಗದಿತರಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ