ಆ್ಯಪ್ನಗರ

ಏರ್‌ಪೋರ್ಟ್‌ಗೆ ಆ.1ರಿಂದ ಹೊಸ ಪಾರ್ಕಿಂಗ್‌ ದರ

ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ನೂತನ ಪಾರ್ಕಿಂಗ್‌ ನೀತಿ ಆ.1ರಿಂದ ಜಾರಿಗೆ ಬರಲಿದ್ದು, ಪರಿಷ್ಕೃತ ಪಾರ್ಕಿಂಗ್‌ ದರ ವಿಧಿಸಲಾಗಿದೆ.

Vijaya Karnataka 31 Jul 2019, 5:00 am
ಮಂಗಳೂರು: ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ನೂತನ ಪಾರ್ಕಿಂಗ್‌ ನೀತಿ ಆ.1ರಿಂದ ಜಾರಿಗೆ ಬರಲಿದ್ದು, ಪರಿಷ್ಕೃತ ಪಾರ್ಕಿಂಗ್‌ ದರ ವಿಧಿಸಲಾಗಿದೆ.
Vijaya Karnataka Web new rate for parking in airport
ಏರ್‌ಪೋರ್ಟ್‌ಗೆ ಆ.1ರಿಂದ ಹೊಸ ಪಾರ್ಕಿಂಗ್‌ ದರ


ಮೊದಲ ಅರ್ಧಗಂಟೆಗೆ ಬಸ್‌, ಟ್ರಕ್‌ಗೆ 30 ರೂ., ಕಾರ್‌ ಇತ್ಯಾದಿ ಲಘುವಾಹನಗಳಿಗೆ 20 ರೂ., ದ್ವಿಚಕ್ರ ವಾಹನಗಳಿಗೆ 10 ರೂ., ಅರ್ಧಗಂಟೆಯಿಂದ 2 ಗಂಟೆ ತನಕ ಬಸ್‌, ಟ್ರಕ್‌ಗೆ 70 ರೂ, ಟೆಂಪೊ, ಎಸ್‌ಯುವಿ, ಮಿನಿಬಸ್‌ಗೆ 60 ರೂ, ಕಾರುಗಳಿಗೆ 55 ರೂ. ದ್ವಿಚಕ್ರ ವಾಹನಗಳಿಗೆ 15 ರೂ., 2 ಗಂಟೆ ಬಳಿಕ 7 ಗಂಟೆ ತನಕವೂ ಪ್ರತಿ ಗಂಟೆಗೆ ಘನವಾಹನಗಳಿಗೆ 10 ರೂ.ನಂತೆ ಜಾಸ್ತಿ ಹಾಗೂ ದ್ವಿಚಕ್ರ ವಾಹನಗಳಿಗೆ 5 ರೂ.ನಂತೆ ಜಾಸ್ತಿಯಾಗಲಿದೆ. 7ರಿಂದ 24 ಗಂಟೆ ವರೆಗೆ 30 ನಿಮಿಷ-120 ನಿಮಿಷ ಸ್ಲಾಬ್‌ನ ಶೇ. 300ರಷ್ಟು ಹೆಚ್ಚು ದರ ವಿಧಿಸಲಾಗುವುದು.

ನಿಗದಿತ ಪಾರ್ಕಿಂಗ್‌ ಜಾಗಕ್ಕೆ ಪ್ರವೇಶಕ್ಕೆ ಮಾತ್ರ ಈ ದರಗಳು ಅನ್ವಯ, ಒಂದು ವೇಳೆ ಪ್ರವೇಶ, ನಿರ್ಗಮನ ರಸ್ತೆ ಪಕ್ಕ 3 ನಿಮಿಷಕ್ಕಿಂತ ಹೆಚ್ಚು ಕಾಲ ನಿಲ್ಲಿಸುವುದು ಕಂಡು ಬಂದಲ್ಲಿ 30 ನಿಮಿಷ-120 ನಿಮಿಷ ಸ್ಲಾಬ್‌ನ ನಾಲ್ಕು ಪಟ್ಟು ದಂಡ ವಿಧಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ