ಆ್ಯಪ್ನಗರ

ರಾಜ್ಯದಲ್ಲಿಮದ್ಯಂತರ ಚುನಾವಣೆ ಇಲ್ಲ: ನಳಿನ್‌

ರಾಜ್ಯದಲ್ಲಿಮುಂದಿನ ಮೂರು ವರ್ಷ ಮದ್ಯಂತರ ಚುನಾವಣೆ ಬರುವುದಿಲ್ಲ. ಬರುವ ಉಪ ಚುನಾವಣೆಯಲ್ಲಿಬಿಜೆಪಿ ಹದಿನೈದಕ್ಕೆ ಹದಿನೈದು ಸ್ಥಾನಗಳನ್ನೂ ಗೆಲ್ಲಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ150 ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ​

Vijaya Karnataka 13 Oct 2019, 9:43 pm
ಸುಳ್ಯ : ರಾಜ್ಯದಲ್ಲಿಮುಂದಿನ ಮೂರು ವರ್ಷ ಮದ್ಯಂತರ ಚುನಾವಣೆ ಬರುವುದಿಲ್ಲ. ಬರುವ ಉಪ ಚುನಾವಣೆಯಲ್ಲಿಬಿಜೆಪಿ ಹದಿನೈದಕ್ಕೆ ಹದಿನೈದು ಸ್ಥಾನಗಳನ್ನೂ ಗೆಲ್ಲಲಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ150 ಕ್ಕೂ ಅಧಿಕ ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.
Vijaya Karnataka Web NALEENKUMAR KATEEL

ಬಿಜೆಪಿ ರಾಜ್ಯಾಧ್ಯಕ್ಷರಾಗಿ ಮೊದಲ ಬಾರಿ ಸುಳ್ಯ ಬಿಜೆಪಿ ಕಚೇರಿಗೆ ಆಗಮಿಸಿದ ವೇಳೆ ಅವರು ಸೇರಿದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು. ಒಬ್ಬ ಸಾಮಾನ್ಯ ಕಾರ್ಯಕರ್ತನಿಗೂ ರಾಜ್ಯಾಧ್ಯಕ್ಷ ನಾಗುವ ಅವಕಾಶ ಇದೆ. ಇದು ಬಿಜೆಪಿಯಲ್ಲಿಮಾತ್ರ ಸಾಧ್ಯಎಂದರು. ಲೋಕಸಭೆಯಲ್ಲಿನಾನಾ ಪಕ್ಷಗಳು ವಂಶ ಪಾರಂಪರ್ಯ ಮತ್ತು ಜಾತಿಯ ಆಧಾರದಲ್ಲಿಆಯ್ಕೆ ನಡೆಸುತ್ತಿದ್ದರೆ, ಬಿಜೆಪಿಯಲ್ಲಿಮಾತ್ರ ಪ್ರಜಾಪ್ರಭುತ್ವದ ಆಧಾರದಲ್ಲಿಆಯ್ಕೆ ನಡೆಯುತ್ತದೆ ಎಂದರು. ಅಧಿಕಾರದಿಂದ ಸಂಘಟನೆ ಬೆಳೆಸುವುದಲ್ಲ. ಆದರ್ಶದಿಂದ ಸಂಘಟನೆ ಬೆಳೆಸಬೇಕು. ಈ ನಿಟ್ಟಿನಲ್ಲಿಪಕ್ಷದಲ್ಲಿಸಂಘಟನಾ ಪರ್ವ ನಡೆಯುತ್ತಿದೆ. ಬೇಡಿಕೆ, ನೋವು ಹಲವಿರಬಹುದು. ಅದೆಲ್ಲವನ್ನೂ ಮೀರಿ ಪಕ್ಷವನ್ನು ಸಂಘಟನಾತ್ಮಕವಾಗಿ ಬೆಳೆಸಿ, ಗೆಲುವಿನ ಕಡೆಗೆ ತರುವುದು ಗುರಿಯಾಗಬೇಕು. ಮುಂದಿನ ಗೆಲುವು ವಾತಾವರಣದ ಗೆಲುವವಾಗದೇ, ಕಾಂಗ್ರೆಸ್‌ ವಿರೋಧಿ ಮತಗಳ ಗೆಲುವು ಆಗದೇ ಕರ್ನಾಟಕದಲ್ಲಿಶಾಶ್ವತವಾಗಿ ನೆಲೆನಿಲ್ಲುವ ಸಂಘಟನೆಯ ಆಧಾರದ ಗೆಲುವಾಗಬೇಕು ಎಂದು ಕಟೀಲ್‌ ಹೇಳಿದರು. ಸುಳ್ಯ ಮಾದರಿ ಕ್ಷೇತ್ರ. ರಾಜ್ಯ ಬಿಜೆಪಿ ಪಾಲಿಗೆ ಆದರ್ಶ ಕ್ಷೇತ್ರ. ಕಾರ್ಯಕರ್ತರ ಪಾಲಿಗೆ ಪುಣ್ಯ ಕ್ಷೇತ್ರ. ಮತಗಟ್ಟೆ ಸಮಿತಿ ಇಲ್ಲಿಶೇ. 99 ಪೂರ್ಣಗೊಂಡು ನಾಳೆಗೆ ಶೇ.100 ಆಗಲಿದೆ ಎಂದು ಅವರು ಹೇಳಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್‌ ವಳಲಂಬೆ, ಪ್ರಧಾನ ಕಾರ್ಯದರ್ಶಿ ಸುಬೋದ್‌ ಶೆಟ್ಟಿ ಮೇನಾಲ, ಮುಖಂಡರಾದ ಎ.ವಿ.ತೀರ್ಥರಾಮ, ಹರೀಶ್‌ ಕಂಜಿಪಿಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ