ಆ್ಯಪ್ನಗರ

ಅನರ್ಹರನ್ನು ಕಡೆಗಣಿಸುವ ಪ್ರಶ್ನೆ ಇಲ್ಲ, ಹಾಗಂತ ತಲೆ ಮೇಲೆ ಹೊರಲಾಗದು: ಸಿ.ಟಿ.ರವಿ

ಅನರ್ಹ ಶಾಸಕರನ್ನು ದೂರ ತಳ್ಳುವ ಪ್ರಶ್ನೆ ಇಲ್ಲ ಎಂದು ಸಿಟಿ ರವಿ ಹೇಳಿದ್ದಾರೆ.

Vijaya Karnataka Web 30 Sep 2019, 3:22 pm
ಮಂಗಳೂರು: ಹಿಂದಿನ ಸರಕಾರದಿಂದ ಹೊರಗೆ ಬಂದು ಅನರ್ಹರಾದವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಹಾಗಂತ ಅವರನ್ನು ತಲೆ ಮೇಲೆ ಹೊರಲಾಗದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಖಾತೆ ಸಚಿವ ಸಿ.ಟಿ.ರವಿ ಹೇಳಿದರು.
Vijaya Karnataka Web ct-ravi


ಯಾರನ್ನೂ ಕಡೆಗಣಿಸುವ ಮನಸ್ಥಿತಿ ಬಿಜೆಪಿಯದ್ದಲ್ಲ. ನಾವು 105 ಸ್ಥಾನ ಗೆದ್ದಿದ್ದೇವೆ. ನಮ್ಮವರಿಗೆ ಎಷ್ಟು ಮಾನ್ಯತೆ ಇದೆಯೋ ಅಷ್ಟೇ ಮಾನ್ಯತೆಯನ್ನು ಆ 17 ಮಂದಿ ಅನರ್ಹರಿಗೂ ನೀಡಿದ್ದೇವೆ. ಸುಪ್ರೀಂ ಕೋರ್ಟ್ ತೀರ್ಪು ಆಧರಿಸಿ, ಅವರ ಸೀಟು ನಿರ್ಧಾರವಾಗಲಿದೆ ಎಂದು ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಸಚಿವರು ಹೇಳಿದರು.

ತಂತಿ ಮೇಲೆ ನಡೆಯಲು ಹೋದ್ರೆ, ಬಿದ್ದು ಹೋಗ್ತೀರಿ: ಬಿಎಸ್‌ವೈಗೆ ಸಿದ್ದರಾಮಯ್ಯ ಎಚ್ಚರಿಕೆ

ಸಿಎಂ ಮಾತ್ರವಲ್ಲ, ನಾವೆಲ್ಲರೂ ತಂತಿ ಮೇಲೆಯೇ ನಡೆಯುತ್ತಿದ್ದೇವೆ. ಸಿಎಂ ಹತಾಶರಾಗಿ ಹಾಗೆ ನುಡಿದಿಲ್ಲ. ನಿರ್ದಿಷ್ಟ ಗುರಿಯೆಡೆಗೆ ಸಾಗುವ ಉದ್ದೇಶದಿಂದ ಅವರು ಹಾಗೆ ಹೇಳಿದ್ದಾರೆ. ನಾವು ಮೈ ಮರೆಯಬಾರದು ಎಂದು ಸಿಎಂ ನಮ್ಮನ್ನು ನೆನಪಿಸಿದ್ದಾರೆ ಎಂದು ಪ್ರಶ್ನೆಗೆ ಉತ್ತರವಾಗಿ ಹೇಳಿದರು.

ನನ್ನದು ತಂತಿಯ ಮೇಲಿನ ನಡಿಗೆ: ಬಿಎಸ್‌ವೈ

ಸಾರ್ವಜನಿಕ ಜೀವನವೇ ತಂತಿ ಮೇಲಿನ ನಡಿಗೆ. ದಾರಿ ತಪ್ಪಿದರೂ ನಾವು ಸರಿಯಾದ ಗುರಿ ತಲುಪಲಾಗಲ್ಲ. ಹಾಗಾಗಿ ಸರಿಯಾದ ಗುರಿ ಇಟ್ಟು ಮುನ್ನಡೆಯಬೇಕು. ತತ್ವದ ಮೇಲೆ ಕೆಲಸ ಮಾಡಿದ್ರೆ ಗುರಿ ತಪ್ಪಲ್ಲ. ನಮ್ಮದು ತತ್ವ ಸಿದ್ಧಾಂತ ಹೊಂದಿರುವ ಪಕ್ಷ ಎಂದು ಸಿ.ಟಿ.ರವಿ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ