ಆ್ಯಪ್ನಗರ

ಕರಾವಳಿಯಲ್ಲಿ ಸಾಧಾರಣ ಮಳೆ: ಆರೆಂಜ್‌ ಅಲರ್ಟ್‌ ಮುಂದುವರಿಕೆ

ಕರಾವಳಿಯಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ ಆರೆಂಜ್‌ ಅಲರ್ಟ್‌ ಮುಂದುವರಿಯಲಿದೆ. ಮಳೆ ಕಡಿಮೆಯಾದರೂ ನಿರಂತರ ಸುರಿಯುವ ಸಾಧ್ಯತೆ ಇದೆ ಎನ್ನುವುದು ಹವಾಮಾನ ಇಲಾಖೆಯ ತಿಳಿಸಿದೆ.

Vijaya Karnataka Web 9 Jul 2020, 7:30 pm
ಮಂಗಳೂರು: ಕರಾವಳಿಯಲ್ಲಿ ಗುರುವಾರ ಸಾಧಾರಣ ಮಳೆಯಾಗಿದೆ. ಭಾರತೀಯ ಹವಾಮಾನ ಇಲಾಖೆ ನೀಡಿದ ಮಾಹಿತಿಯಂತೆ ಆರೆಂಜ್‌ ಅಲರ್ಟ್‌ ಮುಂದುವರಿಯಲಿದೆ.
Vijaya Karnataka Web rain


ಗುರುವಾರ ಜಿಲ್ಲೆಯ ಪುತ್ತೂರು, ಸುಳ್ಯದಲ್ಲಿ ಸಾಧಾರಣ ಮಳೆಯಾಗಿದ್ದು, ಬಂಟ್ವಾಳ, ಬೆಳ್ತಂಗಡಿಯಲ್ಲಿ ಕೊಂಚ ಜಾಸ್ತಿ ಮಳೆಯಾಗಿದೆ. ಮಂಗಳೂರಿನಲ್ಲಿ ಬೆಳಗ್ಗೆ ಕೊಂಚ ಮಳೆಯಾದ ಬಳಿಕ ಮಧ್ಯಾಹ್ನ ನಂತರ ಮಳೆರಾಯ ತನ್ನ ಆಟ ಮುಂದುವರಿಸಿದ್ದಾನೆ. ಜಿಲ್ಲೆಯಲ್ಲಿ ಆರೆಂಜ್‌ ಅಲರ್ಟ್‌ ಇರುವ ಕಾರಣ ಮಳೆ ಕಡಿಮೆಯಾದರೂ ನಿರಂತರ ಸುರಿಯುವ ಸಾಧ್ಯತೆ ಇದೆ ಎನ್ನುವುದು ಹವಾಮಾನ ಇಲಾಖೆಯ ತಿಳಿಸಿದೆ.

ಜು.9ರಿಂದ 11ರ ವರೆಗೆ ಕರಾವಳಿ ಪ್ರದೇಶಗಳಲ್ಲಿ ಆರೆಂಜ್‌ ಅಲರ್ಟ್‌ ಘೋಷಣೆಯನ್ನು ಹವಾಮಾನ ಇಲಾಖೆ ಮಾಡಿದೆ. ಈ ಮೂಲಕ ನಿರಂತರ ಮಳೆಯಾಗುವ ಸೂಚನೆ ರವಾನಿಸಿದೆ.

ಕರಾವಳಿಯಲ್ಲಿ ಭಾರೀ ಮಳೆ ನಿರೀಕ್ಷೆ: ಮೂರು ದಿನ ಆರೆಂಜ್‌ ಅಲರ್ಟ್‌!

ತೀವ್ರಗೊಂಡ ಕಡಲ್ಕೊರತೆ: ಸೋಮೇಶ್ವರ, ಪೆರಿಬೈಲು, ಸೀ ಗ್ರೌಂಡ್‌, ಕೈಕೋ, ಮುಕ್ಕಚೇರಿಯಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಮೀನುಗಾರಿಕೆಗೆ ಈಗ ಮೀನುಗಾರಿಕೆ ರಜೆ ನೀಡಲಾಗಿದ್ದರೂ ನಾಡದೋಣಿ ಮೀನುಗಾರಿಕೆಗೆ ಅವಕಾಶವಿದೆ. ಆದರೆ ಹವಾಮಾನ ಇಲಾಖೆಯ ಸೂಚನೆ ಪ್ರಕಾರ ಅಲೆಗಳ ಅಬ್ಬರ ಜಾಸ್ತಿ ಇರುವುದರಿಂದ ಮೀನುಗಾರಿಕೆಗೆ ಹೋಗುವ ಮೀನುಗಾರರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚನೆ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ