ಆ್ಯಪ್ನಗರ

ಟಾರ್ಗೆಟ್ ಗ್ರೂಪ್‌ನ ನಟೋರಿಯಸ್ ರೌಡಿ ಇಲಿಯಾಸ್ ಮರ್ಡರ್

ಒಂದೇ ಕೋಮಿನ ಗ್ಯಾಂಗ್ ವಾರ್‌ನಲ್ಲಿ ಟಾರ್ಗೆಟ್ ಗ್ರೂಪ್‌ನ ನಟೋರಿಯಸ್ ರೌಡಿ ಇಲಿಯಾಸ್‌ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈಯಲಾಗಿದೆ.

Vijaya Karnataka Web 13 Jan 2018, 11:41 am
ಮಂಗಳೂರು: ಒಂದೇ ಕೋಮಿನ ಗ್ಯಾಂಗ್ ವಾರ್‌ನಲ್ಲಿ ಟಾರ್ಗೆಟ್ ಗ್ರೂಪ್‌ನ ನಟೋರಿಯಸ್ ರೌಡಿ ಇಲಿಯಾಸ್‌ನನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈಯಲಾಗಿದೆ.
Vijaya Karnataka Web notorious rowdy iliyas murder
ಟಾರ್ಗೆಟ್ ಗ್ರೂಪ್‌ನ ನಟೋರಿಯಸ್ ರೌಡಿ ಇಲಿಯಾಸ್ ಮರ್ಡರ್


ಇತ್ತೀಚಿಗಷ್ಟೇ ಇಲಿಯಾಸ್ ಬೆಲ್ ಮೇಲೆ ಬಿಡುಗಡೆಯಾಗಿದ್ದ. ಶನಿವಾರ ಮುಂಜಾನೆ 9 ಗಂಟೆ ಸುಮಾರಿಗೆ ಕುಡುಪಾಡಿಯ ಮಸೀದಿ ಬಳಿಯ ಅಪಾರ್ಟ್‌ಮೆಂಟ್‌ಗೆ ನುಗಿದ್ದ ಇಬ್ಬರು ದುಷ್ಕರ್ಮಿಗಳು, ಇಲಿಯಾಸ್ ವಾಸ್ತವ್ಯವಿದ್ದ ಕೊಠಡಿ ಪ್ರವೇಶಿಸಿ ಹರಿತವಾದ ಆಯುಧದಿಂದ ಹತ್ಯೆ ಮಾಡಿದ್ದಾರೆ. ಸಫ್ವಾಲ್, ದಾವೂದ್ ಗ್ಯಾಂಗ್‌ನಿಂದ ಕೊಲೆಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಉಳ್ಳಾಲ ಯೂತ್ ಕಾಂಗ್ರೆಸ್ ಉಪಾಧ್ಯಕ್ಷನಾಗಿದ್ದ ಇಲಿಯಾಸ್, ಕೊಲೆ, ಸುಲಿಗೆ, ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಮಂಗಳೂರಿನಲ್ಲಿ ಕುಖ್ಯಾತನಾಗಿರುವ ಟಾರ್ಗೆಟ್‌ ಗ್ಯಾಂಗ್‌ ಸದಸ್ಯ ಇಲ್ಯಾಸ್‌, ಆಹಾರ ಸಚಿವ ಯು.ಟಿ.ಖಾದರ್‌ ಅವರ ಜತೆ ಊಟ ಮಾಡುತ್ತಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಕಾಟಿಪಳ್ಳದಲ್ಲಿ ಬಿಜೆಪಿ ಕಾರ್ಯಕರ್ತ ದೀಪಕ್‌ ರಾವ್‌ ಕೊಲೆ ನಡೆದ ಬಳಿಕ ನಡೆದ ವಿದ್ಯಾಮಾನಗಳ ನಡುವೆ ಕೆಲವರು ಈ ಫೋಟೊವನ್ನು ತೇಲಿ ಬಿಟ್ಟಿದ್ದರು. ಅಷ್ಟೇ ಅಲ್ಲದೆ, ಶಾಸಕ ಮೊಯ್ದಿನ್ ಬಾಬಾ ಅವರ ಜೊತೆಯಲ್ಲಿ ನಿಂತು ಫೋಟೋಗೆ ಫೋಸ್ ಕೊಟ್ಟಿದ್ದು ವಿವಾದಕ್ಕೆ ಕಾರಣವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ