ಆ್ಯಪ್ನಗರ

ಬಿಎಸ್‌ಎನ್‌ಎಲ್‌ ಪುನರುಜ್ಜೀವನಕ್ಕೆ ಪ್ರಧಾನಿಯಿಂದ ವಿನೂತನ ಯೋಜನೆ ಸಿದ್ಧ: ನಳಿನ್‌ ಕುಮಾರ್‌ ಕಟೀಲ್‌

ನಷ್ಟದಲ್ಲಿರುವ ಬಿಎಸ್‌ಎನ್‌ಎಲ್‌ ಸಂಸ್ಥೆಗೆ ಪುನರುಜ್ಜೀವನ ನೀಡಿ ಸಮಸ್ಯೆ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಪ್ರಧಾನಿಗಳು ವಿನೂತನ ಯೋಜನೆ ಸಿದ್ಧಪಡಿಸಿದ್ದಾರೆ ಎಂದು ಸಂಸದ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

Vijaya Karnataka Web 18 Aug 2020, 7:35 pm
ಸುಬ್ರಹ್ಮಣ್ಯ: ಬಿಎಸ್‌ಎನ್‌ಎಲ್‌ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಪ್ರಧಾನಿಗಳು ಸಂಸ್ಥೆಗೆ ಪುನರುಜ್ಜೀವನ ನೀಡಿ ಸಮಸ್ಯೆ ಬಗೆಹರಿಸಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಪ್ರಧಾನಿಗಳು ವಿನೂತನ ಯೋಜನೆ ಸಿದ್ಧಪಡಿಸಿದ್ದಾರೆ ಎಂದು ಸಂಸದ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.
Vijaya Karnataka Web nalin kumar kateel


ತಮ್ಮ ಆದರ್ಶ ಗ್ರಾಮ ಬಳ್ಪಕ್ಕೆ ಬೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಧಾನಿಗಳ ಮಹತ್ವಾಕಾಂಕ್ಷಿಯ ಆದರ್ಶ ಗ್ರಾಮ ಬಳ್ಪದಲ್ಲಿಅಭಿವೃದ್ಧಿ ಕಾರ್ಯಗಳು ನಡೆಯುತ್ತಿದೆ. ಇಲ್ಲಿನ ಬೋಗಾಯನ ಕೆರೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದ್ದು, ಮುಂದಿನ ವರ್ಷ ಕೆರೆ ಅಭಿವೃದ್ಧಿ ಕಾಮಗಾರಿ ಪ್ರಾರಂಭವಾಗಲಿದೆ.

ಬಳ್ಪ ಹೈಸ್ಕೂಲ್‌ ಸಭಾಂಗಣ ಕಾಮಗಾರಿ ನಡೆಯುತ್ತಿದೆ.ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಲ್ಲಿಬಳ್ಪದ ಸಮಗ್ರ ರಸ್ತೆಗಳ ಅಭಿವೃದ್ಧಿಯು 9 ಕೋಟಿ ರೂ. ಅನುದಾನದಲ್ಲಿನಡೆಯಲಿದೆ. 7 ಜನರಿಗೆ ಎನ್‌ಜಿಒ ಸಂಸ್ಥೆಗಳ ಮೂಲಕ ಮನೆ ನಿರ್ಮಾಣ ಕಾರ್ಯದ ಸಿದ್ಧತೆ ನಡೆಯುತ್ತಿದೆ. ಧ್ಯಾನ ಮಂದಿರ, ಹೈನುಗಾರಿಕೆಗೆ ಹೆಚ್ಚು ಮಹತ್ವ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಆದರ್ಶ ಗ್ರಾಮ ಯೋಜನೆಯ ಮಾಹಿತಿ ನೀಡಿದರು.

ಬೆಂಗಳೂರು ಗಲಭೆ ಹಿಂದೆ ಭಯೋತ್ಪಾದನೆ ನಂಟು? ತನಿಖೆಗೆ ನಳಿನ್‌ ಕುಮಾರ್‌ ಕಟೀಲ್‌ ಆಗ್ರಹ

ಶಾಸಕ ಅಂಗಾರ ಅವರಿಗೆ ಸಚಿವ ಸ್ಥಾನ ನೀಡಲು ನಮ್ಮ ಅಭಿಪ್ರಾಯವಿದ್ದು, ಸರಕಾರ, ಮುಖ್ಯಮಂತ್ರಿಗಳು ಮನಸ್ಸು ಮಾಡಬೇಕಿದೆ ಎಂದರು. ಈಗಾಗಲೇ ಬಿಜೆಪಿ ಸಮಿತಿ, ಅಭ್ಯಾಸವರ್ಗ ಮಾಡಲಾಗುತ್ತಿದ್ದು, ಮುಂದಿನ ಚುನಾವಣೆಯನ್ನು ಸಂಘಟನೆ ಆಧಾರದಲ್ಲಿಎದುರಿಸಿ, ಅತೀ ಹೆಚ್ಚು ಸ್ಥಾನಗಳನ್ನು ಬಿಜೆಪಿ ಗೆಲ್ಲಲಿದೆ ಎಂದರು.

ಬೆಂಗಳೂರಿನಲ್ಲಿನಡೆದದ್ದು ಪೂರ್ವಯೋಜಿತ ಕೃತ್ಯ. ತನ್ನ ಪಕ್ಷದ ಶಾಸಕರ ಮನೆಗೆ ದಾಳಿ ನಡೆಸಿದವರು ಬೆಂಕಿ ಹಾಕಿದಾಗ ಕಾಂಗ್ರೆಸ್‌ ತನ್ನ ಮತಬ್ಯಾಂಕ್‌ಗೋಸ್ಕರ ಮೌನ ವಹಿಸಿದೆ. ಬಿಜೆಪಿ ಸರಕಾರ ದಿಟ್ಟತನದಿಂದ ತಪ್ಪು ಮಾಡಿದವರ ಮೇಲೆ ಕ್ರಮಕೈಗೊಳ್ಳಲಿದೆ. ದಾಂದಲೆ ಎಬ್ಬಿಸಿದವರ ಆಸ್ತಿ, ಪಾಸ್ತಿ ಮುಟ್ಟುಗೋಲು ಹಾಕುವುದು ಮತ್ತು ಅವರ ಸರಕಾರಿ ಸೌಲತ್ತುಗಳನ್ನು ಹಿಂಪಡೆಯುವಂತೆ ನಾನು ಸರಕಾರಕ್ಕೆ ಮನವಿ ಮಾಡಿದ್ದೇನೆ. ಕಾಂಗ್ರೆಸ್‌ ಓಲೈಕೆ ರಾಜಕಾರಣದಿಂದ ಕಣ್ಣು ಮುಚ್ಚಿ ಕುಳಿತಿದೆ ಎಂದು ಕಟೀಲ್‌ ಆರೋಪಿಸಿದರು.

ಪ್ರತ್ಯೇಕ ವಾಯುಯಾನ ವ್ಯವಸ್ಥೆಗೆ 13 ರಾಷ್ಟ್ರಗಳ ಜತೆ ಮಾತುಕತೆ: ಹರ್ದೀಪ್‌ ಸಿಂಗ್‌ ಪುರಿ

ಶಾಸಕ ಎಸ್‌. ಅಂಗಾರ, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್‌ ಕಂಜಿಪಿಲಿ, ಬಿಜೆಪಿ ಜಿಲ್ಲಾಉಪಾಧ್ಯಕ್ಷ ವೆಂಕಟ್‌ ವಳಲಂಬೆ, ಜಿ.ಪಂ.ಮಾಜಿ ಅಧ್ಯಕ್ಷ ವೆಂಕಟ್‌ ದಂಬೆಕೋಡಿ, ಸಹಿತ ಪಕ್ಷದ ಪ್ರಮುಖರು ಜತೆಗಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ