ಆ್ಯಪ್ನಗರ

ಮಂಗಳೂರು ನಗರದಲ್ಲಿ ಪೊಲೀಸ್‌ ಕಮಿಷನರ್‌ ರೌಂಡಪ್‌

ಸಂಚಾರ ಸುವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆ ಮಾಡುವ ನಿಟ್ಟಿನಲ್ಲಿ ಶನಿವಾರ ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಕಾವೂರು ಮತ್ತು ರೈಲ್ವೆ ಸ್ಟೇಷನ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.

Vijaya Karnataka 29 Jun 2019, 5:00 am
ಮಂಗಳೂರು: ನಗರದಲ್ಲಿ ಸಂಚಾರ ಸುವ್ಯವಸ್ಥೆಯನ್ನು ಮತ್ತಷ್ಟು ಸುಧಾರಣೆ ಮಾಡುವ ನಿಟ್ಟಿನಲ್ಲಿ ಶನಿವಾರ ನಗರ ಪೊಲೀಸ್‌ ಕಮಿಷನರ್‌ ಸಂದೀಪ್‌ ಪಾಟೀಲ್‌ ಕಾವೂರು ಮತ್ತು ರೈಲ್ವೆ ಸ್ಟೇಷನ್‌ಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
Vijaya Karnataka Web 28my pareking


ಫುಟ್‌ಪಾತ್‌ನಲ್ಲಿ ವಾಹನ ನಿಲುಗಡೆ, ಬಸ್‌ಬೇನಲ್ಲಿ ಬಸ್‌ ನಿಲ್ಲಿಸದೆ ಇರುವುದು, ಜಂಕ್ಷನ್‌ಗಳಲ್ಲಿ ಸಂಚಾರಿ ಪೊಲೀಸರಿಗೆ ಕೊಡೆ ಹಾಕದಿರುವ ಬಗ್ಗೆ ಫೋನ್‌-ಇನ್‌ ಕಾರ್ಯಕ್ರಮದಲ್ಲಿ ದೂರು ಬಂದ ಹಿನ್ನೆಲೆಯಲ್ಲಿ ಶುಕ್ರವಾರವೇ ಕಮಿಷನರ್‌ ಕಾರ್ಯಾಚರಣೆಗೆ ಇಳಿದರು.

ಕಾವೂರಿಗೆ ಭೇಟಿ ನೀಡಿದ ಕಮಿಷನರ್‌ ಅವರು, ಕಡ್ಡಾಯವಾಗಿ ಬಸ್‌ಗಳನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು, ಫುಟ್‌ಪಾತ್‌ಗಳಲ್ಲಿ ನಿಲ್ಲಿಸಿದ ವಾಹನಗಳನ್ನು ತೆರವುಗೊಳಿಸುವಂತೆ, ಮುತ್ತಪ್ಪ ಗುಡಿ ರೈಲ್ವೆ ಸ್ಟೇಷನ್‌ ಬಳಿ ಟ್ರಾಫಿಕ್‌ ಅಂಬ್ರೆಲ್ಲಾ ಹಾಕುವಂತೆ ಸೂಚಿಸಿದರು.

ಸಿಟಿ ರೌಂಡಪ್‌ ವೇಳೆ ನಗರ ಸಂಚಾರ ಮತ್ತು ಅಪರಾಧ ವಿಭಾಗ ಡಿಸಿಪಿ ಲಕ್ಷ್ಮೇಗಣೇಶ್‌, ಎಸಿಪಿ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ