ಆ್ಯಪ್ನಗರ

ಕರಾವಳಿಯಲ್ಲಿ ಭಾರೀ ಮಳೆ: ಇನ್ನು ಎರಡು ದಿನ ಆರೆಂಜ್‌ ಅಲರ್ಟ್‌

ಕರಾವಳಿಯ ದ.ಕ, ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದೆ. ರಾತ್ರಿಯಿಡಿ ಎಡೆಬಿಡದೆ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕರಾವಳಿಯಲ್ಲಿ ಇಂದು ಮತ್ತು ನಾಳೆ ಆರೆಂಜ್‌ ಅಲರ್ಟ್‌ ಇರಲಿದೆ. ಅಕ್ಟೋಬರ್‌ ಕೊನೆಯ ತನಕವೂ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Vijaya Karnataka Web 14 Oct 2020, 6:56 am
ಮಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಕರಾವಳಿಯ ದ.ಕ, ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ಜತೆಗೆ ಹವಾಮಾನ ಇಲಾಖೆ ಕೂಡ ಎರಡು ದಿನಗಳ ಕಾಲ ಆರೆಂಜ್‌ ಅಲರ್ಟ್‌ ಘೋಷಣೆ ಮಾಡಿದೆ.
Vijaya Karnataka Web rain
ಸಾಂದರ್ಭಿಕ ಚಿತ್ರ


ಮಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಮಂಗಳವಾರ ಉತ್ತಮ ಮಳೆಯಾಗಿದೆ. ನಗರ ವ್ಯಾಪ್ತಿಯಲ್ಲೇ 84 ಮಿಮೀ ಮಳೆಯಾದರೆ ಪುತ್ತೂರಿನಲ್ಲಿ 82 ಮಿಮೀ ಮಳೆಯಾಗಿದೆ. ಸುಳ್ಯ 70 ಮಿಮೀ, ಬೆಳ್ತಂಗಡಿ 55.5 ಮಿಮೀ ಹಾಗೂ ಬಂಟ್ವಾಳದಲ್ಲಿ 66.6 ಮಿಮೀ ಮಳೆಯಾಗಿರುವ ಕುರಿತು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ವಿಶೇಷವಾಗಿ ಮಂಗಳೂರು- ಕಾಸರಗೋಡು ಗಡಿಭಾಗವಾದ ತಲಪಾಡಿಯಲ್ಲಿ 84.5ಮಿಮೀ ಮಳೆಯಾಗಿದೆ. ಪುತ್ತೂರಿನ ಬೆಳಂದೂರು 77 ಮಿಮೀ, ಬೆಳ್ತಂಗಡಿಯ ಕೊಕ್ಕಡ 55.5 ಹಾಗೂ ಬಂಟ್ವಾಳದ ಮಾಣಿಲ ಪ್ರದೇಶದಲ್ಲಿ 66 ಮಿಮೀ ಮಳೆಯಾಗಿದೆ.

ಮಂಗಳೂರಿನಲ್ಲಿ ಬೆಳಗ್ಗೆಯಿಂದಲೇ ನಿರಂತರವಾಗಿ ಮಳೆಯಾಗುತ್ತಿದ್ದು, ಸಂಜೆಯಾಗುತ್ತಿದ್ದಂತೆ ಮಳೆ ಕಡಿಮೆಯಾಗುತ್ತಾ ರಾತ್ರಿ ಮತ್ತೆ ಜೋರಾಗಿ ಸುರಿಯಲಾರಂಭಿಸಿದೆ.

ನಗರದ ಪಡೀಲ್‌ ಅಂಡರ್‌ಪಾಸ್‌, ಪಂಪ್‌ವೆಲ್‌ ಮೇಲ್ಸೇತುವೆಯ ಕೆಳಭಾಗ, ಜ್ಯೋತಿ, ನಂತೂರು- ಬಿಕರ್ನಕಟ್ಟೆ ರಸ್ತೆ, ಕೊಟ್ಟಾರದ ಬಳಿಯಲ್ಲಿ ಮಳೆ ನೀರು ಸರಾಗವಾಗಿ ಸಾಗದೇ ವಾಹನ ಸವಾರರಿಗೆ ಸೇರಿದಂತೆ ಪಾದಚಾರಿಗಳಿಗೂ ಸಾಕಷ್ಟು ಸಮಸ್ಯೆಯಾಗಿದೆ.

ಎರಡು ದಿನ ಆರೆಂಜ್‌ ಅಲರ್ಟ್‌ಕರಾವಳಿಯಲ್ಲಿ ಅಕ್ಟೋಬರ್‌ 14 ಮತ್ತು 15ರಂದು ಆರೆಂಜ್‌ ಅಲರ್ಟ್‌ ಇರಲಿದೆ. ಅಕ್ಟೋಬರ್‌ ಕೊನೆಯ ತನಕವೂ ಮಳೆ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ