ಆ್ಯಪ್ನಗರ

ಅಂತಾರಾಷ್ಟ್ರೀಯ ರೋಟರಿ ಜಿಲ್ಲಾ 3181ರ ವಾರ್ಷಿಕ ಪ್ರಶಸ್ತಿ ಪ್ರದಾನ

ಮಂಗಳೂರು : ಸಂತೃಪ್ತಿ 2019 - ಅಂತಾರಾಷ್ಟ್ರೀಯ ರೋಟರಿ ಜಿಲ್ಲಾ 3181 ರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಕೋರ್ಡೆಲ್‌ ಚರ್ಚ್‌ ಸಭಾಂಗಣದಲ್ಲಿ ಶನಿವಾರ ಜರುಗಿತು.

Vijaya Karnataka 18 Jun 2019, 5:00 am
ಮಂಗಳೂರು : ಸಂತೃಪ್ತಿ 2019 - ಅಂತಾರಾಷ್ಟ್ರೀಯ ರೋಟರಿ ಜಿಲ್ಲಾ 3181 ರ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಕೋರ್ಡೆಲ್‌ ಚರ್ಚ್‌ ಸಭಾಂಗಣದಲ್ಲಿ ಶನಿವಾರ ಜರುಗಿತು.
Vijaya Karnataka Web rotary central 18 award
ಅಂತಾರಾಷ್ಟ್ರೀಯ ರೋಟರಿ ಜಿಲ್ಲಾ 3181ರ ವಾರ್ಷಿಕ ಪ್ರಶಸ್ತಿ ಪ್ರದಾನ


ಮಧ್ಯಮ ಕ್ಲಬ್‌ ವಿಭಾಗದಲ್ಲಿ ರೋಟರಿ ಮಂಗಳೂರು ಸೆಂಟ್ರಲ್‌ ಸಂಸ್ಥೆಯು ಪ್ರಸ್ತುತ ವರ್ಷದಲ್ಲಿ ಸಾಧಿಸಿದ ವಿಶಿಷ್ಟ ಸಾಧನೆಯನ್ನು ಪರಿಗಣಿಸಿ 18 ದಾಖಲೆ ಪ್ರಶಸ್ತಿಗಳನ್ನು ಪಡೆಯಿತು. ರೋಟರಿ ಜಿಲ್ಲಾ ಗವರ್ನರ್‌ ರೋಹಿನಾಥ್‌ ಅವರು ಸಂಸ್ಥೆಯ ಅಧ್ಯಕ್ಷ ಸಂತೋಷ್‌ ಶೇಟ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ ಕ್ಲಬ್‌ನ ಸಾಧನೆಯನ್ನು ಅಭಿನಂದಿಸಿದರು.

ನಿಯೋಜಿತ ಗವರ್ನರ್‌ ರಂಗನಾಥ್‌ ಭಟ್‌, ಪ್ರಶಸ್ತಿ ಸಮಿತಿಯ ಅಧ್ಯಕ್ಷ ಜಯರಾಮ ಕೋಟ್ಯಾನ್‌, ಸಹಾಯಕ ಗವರ್ನರ್‌ ದಿವಕರ್‌ ಅಮೀನ್‌, ಕಿರಣ್‌ ಪ್ರಸಾದ್‌ ರೈ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ಜೋಯೆಲ್‌ ಲೋಬೊ, ಚುನಾಯಿತ ಅಧ್ಯಕ್ಷ ಡಾ. ಜಯಪ್ರಕಾಶ್‌ ಪೂಂಜ, ಮಾಜಿ ಗವರ್ನರ್‌ ಡಾ. ದೇವದಾಸ್‌ ರೈ, ನಿಯೋಜಿತ ಕಾರ್ಯದರ್ಶಿ ಕೆ.ಎಂ. ಹೆಗ್ಡೆ , ಇತರ ಪದಾಧಿಕಾರಿಗಳಾದ ರಾಮಶೇಷ ಶೆಟ್ಟಿ, ಮಂಜುನಾಥ ರೆವಣ್ಕÜರ್‌, ರವಿ ಜಲಾನ್‌, ಸಾಯಿಬಾಬಾ ರಾವ್‌, ಚಂದ್ರಹಾಸ ಅಡ್ಯಂತ್ತಾಯ, ರೇಮಂಡ್‌ ಡಿ ಕುನ್ಹಾ, ಆರತಿ ಶೇಟ್‌ ಮತ್ತು ನೀಲಂ ಜಲಾನ್‌ ಉಪಸ್ಥಿತರಿದ್ದರು.

ಪ್ರಶಸ್ತಿಗಳ ವಿವರ : ಗೃಹ ವಾರ್ತಾಪತ್ರಿಕೆ, ಅಂತರಾಷ್ಟ್ರೀಯ ಸೇವೆ, ಸಭಾ ಹಾಜರಾತಿ, ಸಂಸ್ಥೆ ಸೇವೆ, ಸಮುದಾಯ ಸೇವೆ, ವೃತ್ತಿಪರ ಸೇವೆ, ಮೂಲಭೂತ ಶಿಕ್ಷ ಣ ಮತ್ತು ಸಾಕ್ಷ ರತೆ, ವೃತ್ತಿ ಮಾರ್ಗದರ್ಶನ, ಸದಸ್ಯತ್ವ ಅಭಿವೃದ್ಧಿ, ಶಿಶು ಆರೋಗ್ಯ ಸೇವೆ, ರೋಟರಿ ಮಾಹಿತಿ, ಸ್ನೇಹ ವಿನಿಮಯ, ಸಾರ್ವಜನಿಕ ಸಂಪರ್ಕ ಮತ್ತು ಪ್ರಚಾರ, ಕ್ಲಬ್‌ನ ಸರ್ವೋತೋಮುಖ ಅಭಿವೃದ್ಧಿ, ಅತ್ಯುತ್ತಮ ಕ್ಲಬ್‌ ಪ್ರಶಸ್ತಿಗಳನ್ನು ಬಾಚಿಕೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ