ಆ್ಯಪ್ನಗರ

ಅಕ್ರಮವೆಂದು ಸಕ್ರಮ ಮರಳು ಲಾರಿ ತಡೆದ ಗ್ರಾಮಸ್ಥರು

ಕಡಬ: ಕೊಡಿಂಬಾಳದಲ್ಲಿ ಸಾರ್ವಜನಿಕರು ಅಕ್ರಮ ಎಂದು ತಡೆದ ಮರಳು ತುಂಬಿದ ಲಾರಿ ಪರಿಶೀಲನೆ ಬಳಕ ಸಕ್ರಮ ಎಂದು ತಿಳಿದು ಬಂದಿದೆ.

Vijaya Karnataka 7 Jun 2019, 5:00 am
ಕಡಬ: ಕೊಡಿಂಬಾಳದಲ್ಲಿ ಸಾರ್ವಜನಿಕರು ಅಕ್ರಮ ಎಂದು ತಡೆದ ಮರಳು ತುಂಬಿದ ಲಾರಿ ಪರಿಶೀಲನೆ ಬಳಕ ಸಕ್ರಮ ಎಂದು ತಿಳಿದು ಬಂದಿದೆ.
Vijaya Karnataka Web sand mining
ಅಕ್ರಮವೆಂದು ಸಕ್ರಮ ಮರಳು ಲಾರಿ ತಡೆದ ಗ್ರಾಮಸ್ಥರು


ಘಟನೆ ಹಿನ್ನೆಲೆ: ಕೋಡಿಂಬಾಳ ಗ್ರಾಮದ ಉಂಡಿಲ ಎಂಬಲ್ಲಿ ಸೇರಿದ ಇಪ್ಪತ್ತೈದಕ್ಕೂ ಹೆಚ್ಚು ನಾಗರಿಕರು ಕುಮಾರಧಾರ ನದಿಯಿಂದ ಬಳ್ಪ ಗ್ರಾಮದ ಕೇನ್ಯ ಎಂಬಲ್ಲಿ ಮರಳು ಸಾಗಾಟ ಮಾಡುತ್ತಿದ್ದ ನಾಲ್ಕು ಲಾರಿಗಳನ್ನು ತಡೆದು ಅಕ್ರಮ ಮರಳು ಸಾಗಾಟ ಮಾಡಲಾಗುತ್ತಿದ್ದು, ಇದರ ವಿರುದ್ಧ ಕ್ರಮ ಜರಗಿಸಬೇಕು ಎಂದು ಪಟ್ಟು ಹಿಡಿದರು.

ಸ್ಥಳಕ್ಕೆ ತಹಸೀಲ್ದಾರ್‌ ಜಾನ್‌ ಪ್ರಕಾಶ್‌ ರೋಡ್ರಿಗಸ್‌ ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ನಾಗರಿಕರಲ್ಲಿ ಮನವಿ ಮಾಡಿದರೂ, ಒಪ್ಪದೇ ಹೋದಾಗ ಗಣಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕಾಯಿತು.

ಗಣಿ ಇಲಾಖಾಧಿಕಾರಿ ಸುಷ್ಮಾ ಅವರು ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರು ತಡೆದ ನಿಲ್ಲಿಸಿರುವ ಮರಳು ಲಾರಿಗಳನ್ನು ತಪಾಸಣೆ ನಡೆಸಿದಾಗ ಅವುಗಳು ಲೋಕೋಪಯೋಗಿ ಇಲಾಖೆಯಿಂದ ಅನುಮತಿ ಪಡೆದು ಮರಳು ತೆಗೆದು ಸಾಗಾಟ ಮಾಡುವ ಲಾರಿಗಳು ಎಂದು ತಿಳಿದು ಬಂತು. ಆದರೆ ಲಾರಿ ಚಾಲಕರಲ್ಲಿ ಲೋಕೋಪಯೋಗಿ ಇಲಾಖೆ ನೀಡಿರುವ ಸಾಗಾಟ ಅನುಮತಿ ಚೀಟಿ ಇರಲಿಲ್ಲ. ಈ ಕಾರಣಕ್ಕಾಗಿ ನಾಲ್ಕು ಲಾರಿಗಳ ಪೈಕಿ ಒಂದು ಲಾರಿ ಖಾಲಿ ಇದ್ದುದರಿಂದ ಅದನ್ನು ಬಿಟ್ಟು ಉಳಿದ ಮೂರು ಲಾರಿಗಳನ್ನು ತಹಸೀಲ್ದಾರ್‌ ಅವರಿಗೆ ಒಪ್ಪಿಸಿ ಸಾಗಾಟ ಅನುಮತಿ ಚೀಟಿ ತೋರಿಸಿ ಲಾರಿಗಳನ್ನು ಪಡೆಯಬಹುದು ಎಂದು ಸುಷ್ಮಾ ಸೂಚಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ