ಆ್ಯಪ್ನಗರ

ಸೌದಿಯಲ್ಲಿ ಬಂಧನದಲ್ಲಿರುವ ಶೈಲೇಶ್‌ ಕುಮಾರ್‌ ಬಿಡುಗಡೆಗೆ ಕುಟುಂಬಸ್ಥರ ಮೊರೆ

2020ರಿಂದ ವೃತ್ತಿಯಲ್ಲಿಸಮಸ್ಯೆಯಾಗಿ ತೊಂದರೆ ಒಳಗಾಗಿದ್ದ ಶೈಲೇಶ್‌ ಕುಮಾರ್‌, ತನ್ನ ದೇಶದ ಪರ ದೇಶಪ್ರೇಮ ವ್ಯಕ್ತಪಡಿಸಿದ್ದರು. ಈ ಸಂದರ್ಭ ಅನಾಮಿಕನೊಬ್ಬ ಕರೆ ಮಾಡಿ ಫೇಸ್‌ಬುಕ್‌ ಖಾತೆ ಅಳಿಸುವಂತೆ ಬೆದರಿಕೆ ಹಾಕಿದ್ದ.

Vijaya Karnataka 12 Nov 2021, 6:07 pm
ಮಂಗಳೂರು: ಯಾವುದೇ ತಪ್ಪು ಮಾಡದೆ ನಕಲಿ ಫೇಸ್‌ಬುಕ್‌ ಜಾಲದಿಂದಾಗಿ ಸೌದಿ ಅರೇಬಿಯಾದಲ್ಲಿ ಸೆರೆಮನೆಯಲ್ಲಿರುವ ಮಂಗಳೂರಿನ ಶೈಲೇಶ್‌ ಕುಮಾರ್‌ ಅವರನ್ನು ಬಿಡುಗಡೆಗೊಳಿಸಲು ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಕ್ರಮ ಕೈಗೊಳ್ಳಬೇಕು ಎಂದು ಅವರ ಕುಟುಂಬಸ್ಥರು ಮನವಿ ಮಾಡಿದ್ದಾರೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಶೈಲೇಶ್‌ ಕುಮಾರ್‌ ಪತ್ನಿ ಹಾಗೂ ಕುಟುಂಬಸ್ಥರ ಜತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಕೊಟ್ಟಾರಿ ಸಮುದಾಯದ ಪ್ರಮುಖರಾದ ಜಿತೇಂದ್ರ ಕೊಟ್ಟಾರಿ, ತನ್ನ ಡಿಪ್ಲೊಮಾ ವಿದ್ಯಾಭ್ಯಾಸ ಮುಗಿಸಿ ಕಳೆದ ಸುಮಾರು 25 ವರ್ಷಗಳಿಂದ ದೂರದ ಸೌದಿ ಅರೇಬಿಯಾದ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದ ಶೈಲೇಶ್‌ 2020ರ ಫೆಬ್ರವರಿ 23 ರಿಂದ ಸೌದಿ ಅರೇಬಿಯಾದಲ್ಲಿ ಬಂಧನದಲ್ಲಿದ್ದಾರೆ ಎಂದು ಹೇಳಿದರು.

ಬಿಟ್‌ಕಾಯಿನ್‌ ದಂಧೆಯಲ್ಲಿ ಕಾಂಗ್ರೆಸ್‌ ನೇರ ಭಾಗಿ: ಬಿಜೆಪಿ

2020ರಿಂದ ವೃತ್ತಿಯಲ್ಲಿಸಮಸ್ಯೆಯಾಗಿ ತೊಂದರೆ ಒಳಗಾಗಿದ್ದ ಮಂಗಳೂರಿನ ಶೈಲೇಶ್‌ ಕುಮಾರ್‌, ತನ್ನ ದೇಶದ ಪರ ದೇಶಪ್ರೇಮ ವ್ಯಕ್ತಪಡಿಸಿದ್ದರು. ಈ ಸಂದರ್ಭ ಅನಾಮಿಕನೊಬ್ಬ ಕರೆ ಮಾಡಿ ಫೇಸ್‌ಬುಕ್‌ ಖಾತೆ ಅಳಿಸುವಂತೆ ಬೆದರಿಕೆ ಹಾಕಿದ್ದ. ಈ ಹಿನ್ನೆಲೆಯಲ್ಲಿ ಅವರು ಫೇಸ್‌ಬುಕ್‌ ಖಾತೆ ಅಳಿಸಿದ್ದರು. ಇದಾದ ಬಳಿಕ ಶೈಲೇಶ್‌ ಹೆಸರಿನಲ್ಲಿನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಅದರಲ್ಲಿಇಸ್ಲಾಂಗೆ ವಿರುದ್ಧವಾಗಿ ಮತ್ತು ಸೌದಿ ದೊರೆಗೆ ಅವಹೇಳನ ಮಾಡುವ ಪೋಸ್ಟ್‌ಗಳನ್ನು ಯಾರೋ ಹಾಕಿದ್ದರು. ಇದು ಸೌದಿ ಅರೇಬಿಯಾದ ಪೊಲೀಸರಿಗೆ ದೊರೆಯುವಂತೆ ಮಾಡಲಾಗಿತ್ತು.

ಪುತ್ತೂರಿನಲ್ಲಿ 45 ವರ್ಷಗಳ ಹಿಂದಿನ ನೆಕ್ಲೆಸ್‌ಗೆ ಹಠಾತ್‌ ಬೇಡಿಕೆ..! ಹುಬ್ಬಳ್ಳಿ, ಚೆನ್ನೈನಿಂದ ಆಭರಣದ ಬಗ್ಗೆ ವಿಚಾರಣೆ

ಈ ವಿಚಾರ ತಿಳಿದು ಶೈಲೇಶ್‌ 2020ರ ಫೆ.23ರಂದು ತಾನು ಪ್ರಾಮಾಣಿಕ ಎಂದು ತಿಳಿಸಲು ಪೊಲೀಸ್‌ ಠಾಣೆಗೆ ತೆರಳಿದ್ದ ಸಂದರ್ಭ ಯಾವುದೇ ವಿಚಾರಣೆ ಮಾಡದೆ ಅವರನ್ನು ಬಂಧಿಸಲಾಗಿದೆ. ಈ ಬಗ್ಗೆ ಸಂಬಂಧಿಕರು ಅಂತರ್ಜಾಲದ ಮೂಲಕ ಸೌದಿ ಅರೇಬಿಯಾದಲ್ಲಿರುವ ಇಂಡಿಯನ್‌ ಕಾನ್ಸುಲೇಟ್‌ಗೆ ದೂರು ನೀಡಿದ್ದರು. ಆದರೆ ಈ ದೂರು ಪಡೆದ ರಾಯಭಾರ ಕಚೇರಿ ಯಾವುದೇ ಕಾನೂನು ಕ್ರಮ ಜರುಗಿಸಿಲ್ಲಎಂದು ಅವರು ಆರೋಪಿಸಿದರು.

ಭಾರತ ಸರಕಾರದ ವಿದೇಶಾಂಗ ಇಲಾಖೆ ಈ ಬಗ್ಗೆ ಗಮನ ಹರಿಸಿ ಶೈಲೇಶ್‌ ಕುಮಾರ್‌ರನ್ನು ಸೆರೆಮನೆಯಿಂದ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಬೇಕು. ಮಂಗಳೂರು ಪೊಲೀಸ್‌ ಆಯುಕ್ತರು ಕೂಡ ಈ ನಕಲಿ ಫೇಸ್‌ಬುಕ್‌ ಖಾತೆಯನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿ ಭಾರತದ ರಾಯಭಾರಿ ಕಚೇರಿಗೆ ಶೈಲೇಶ್‌ ಕುಮಾರ್‌ ಅವರನ್ನು ಬಿಡುಗಡೆಗೊಳಿಸಿ ಅವರಿಗೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.

ಶೈಲೇಶ್‌ ಅವರ ಪತ್ನಿ ಕವಿತಾ, ಸಂಬಂಧಿ ಅನುಷ್ಕಾ ಕೊಟ್ಟಾರಿ, ಶ್ರೇಯಸ್‌ ಸುದ್ದಿಗೋಷ್ಠಿಯಲ್ಲಿಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ