ಆ್ಯಪ್ನಗರ

ಮಂಗಳೂರು: ಸಂಕಷ್ಟದಲ್ಲಿ ಸಿಲುಕಿದ ಹಡಗು, 15 ಮಂದಿಯ ರಕ್ಷಣೆ

ಎಂಜಿನ್‍ನ ಒಳಭಾಗದಲ್ಲಿ ಸಣ್ಣ ರಂಧ್ರ ಮೂಲಕ ನೀರು ಬರಲು ಪ್ರಾರಂಭಿಸಿದ್ದು, ಇದನ್ನು ತುರ್ತು ದುರಸ್ತಿ ಪಡಿಸುವ ಸಲುವಾಗಿ ಲಂಗರಿಗೆ ಅವಕಾಶ ಕಲ್ಪಿಸುವಂತೆ ನೌಕೆಯ ಕ್ಯಾಪ್ಟನ್ ಬಂದರು ಅಧಿಕಾರಿಗಳನ್ನು ಮಂಗಳವಾರ ಸಂಪರ್ಕಿಸಿದ್ದರು.

Vijaya Karnataka Web 21 Jun 2022, 9:46 pm
ಮಂಗಳೂರು: ಉಳ್ಳಾಲದಿಂದ 5.2 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಅಪಾಯದಲ್ಲಿ ಸಿಲುಕಿದ್ದ ಹಡಗಿನಲ್ಲಿದ್ದ 15 ಮಂದಿ ಸಿರಿಯಾ ದೇಶದವರನ್ನು ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ.
Vijaya Karnataka Web ಹಡಗು ರಕ್ಷಣೆ
ಹಡಗು ರಕ್ಷಣೆ


ದಕ್ಷಿಣ ಕನ್ನಡದ ಸುಳ್ಯ, ಕಡಬ ತಾಲ್ಲೂಕುಗಳ ರಸ್ತೆ ಅಭಿವೃದ್ಧಿಗೆ 50 ಕೋಟಿ ರೂ.: ಸಚಿವ ಅಂಗಾರ

ಪ್ರಿನ್ಸಸ್ ಮಿರಲ್ ಹೆಸರಿನ ಹಡಗು ಮಲೇಷ್ಯಾದಿಂದ ಲೆಬನಾನ್ ದೇಶಕ್ಕೆ ತೆರಳುತ್ತಿತ್ತು. ಈ ಹಡಗಿನಲ್ಲಿ ಎಂಟು ಸಾವಿರ ಟನ್ ಸ್ಟೀಲ್ ಕಾಯಿಲ್ ಸಾಗಿಸಲಾಗುತ್ತಿತ್ತು. ಎಂಜಿನ್‍ನ ಒಳಭಾಗದಲ್ಲಿ ಸಣ್ಣ ರಂಧ್ರ ಮೂಲಕ ನೀರು ಬರಲು ಪ್ರಾರಂಭಿಸಿದ್ದು, ಇದನ್ನು ತುರ್ತು ದುರಸ್ತಿ ಪಡಿಸುವ ಸಲುವಾಗಿ ಲಂಗರಿಗೆ ಅವಕಾಶ ಕಲ್ಪಿಸುವಂತೆ ನೌಕೆಯ ಕ್ಯಾಪ್ಟನ್ ಬಂದರು ಅಧಿಕಾರಿಗಳನ್ನು ಮಂಗಳವಾರ ಸಂಪರ್ಕಿಸಿದ್ದರು.

ಮಂಗಳೂರು ಹಳೆ ಬಂದರಿನಿಂದ ಉಳ್ಳಾಲ ಕಡೆಗೆ 5.2 ಮೈಲಿ ದೂರದಲ್ಲಿ ಅಪಾಯಕ್ಕೆ ಸಿಲುಕಿ ಲಂಗರು ಹಾಕಲಾಗಿತ್ತು. ಕೋಸ್ಟ್ ಗಾರ್ಡ್‍ನ ವಿಕ್ರಮ್ ಮತ್ತು ಮತ್ತೊಂದು ಹಡಗುಗಳ ಮೂಲಕ ಸಮುದ್ರ ರಭಸದ ಮಧ್ಯೆ ಕಾರ್ಯಾಚರಣೆ ನಡೆಸಿ, ಅಪಾಯದಲ್ಲಿದ್ದ ನೌಕೆಯಿಂದ ಕ್ಯಾಪ್ಟನ್ ಹಾಗೂ ಸಿಬ್ಬಂದಿ ಸೇರಿ 15 ಮಂದಿಯನ್ನು ರಕ್ಷಿಸಲಾಗಿದೆ.

ನಾಲ್ಕು ದಿನಗಳ ಕಾಲ ಉತ್ತಮ ಮಳೆ ಸಾಧ್ಯತೆ

ಮಂಗಳೂರು: ದಕ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿದೆ. ಜೂ.22ರಂದು ರೆಡ್‌ ಅಲರ್ಟ್‌ ಘೋಷಣೆ ಮಾಡುವ ಮೂಲಕ ಹವಾಮಾನ ಇಲಾಖೆ ಭರ್ಜರಿ ಮಳೆಯಾಗುವ ಸೂಚನೆ ನೀಡಿದೆ.

ಸಾಧಾರಣದಿಂದ ಉತ್ತಮ ಮಳೆ ಜಿಲ್ಲೆಯ ಎಲ್ಲೆಡೆಯಾಗುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಮಳೆ ಅಬ್ಬರದಿಂದ ಸಾಕಷ್ಟು ಕಡೆಯಲ್ಲಿಹಾನಿ ಸಂಭವಿಸಿದರೆ ನಗರ ಭಾಗದಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೇ ಬಹಳಷ್ಟು ಸಮಸ್ಯೆಯನ್ನು ಸೃಷ್ಟಿ ಮಾಡಿದೆ. ಮಂಗಳೂರಿನ ಕೆಎಸ್‌ ರಾವ್‌ ರಸ್ತೆ, ಕೊಟ್ಟಾರ ಚೌಕಿ, ಪಂಪ್‌ವೆಲ್‌, ಶರವು ದೇವಸ್ಥಾನದ ರಸ್ತೆ, ಜ್ಯೋತಿ, ಪಡೀಲ್‌ ಅಂಡರ್‌ಪಾಸ್‌ನಲ್ಲಿ ಮಳೆ ನೀರು ಸರಾಗವಾಗಿ ಸಾಗಲಾಗದೇ ರಸ್ತೆಯಲ್ಲೇ ಮಳೆ ಹರಿದಾಡುತ್ತಿತ್ತು. ಕೆಲವು ಭಾಗದಲ್ಲಿ ರಸ್ತೆ ಕಾಮಗಾರಿಗಳು ಕುಂಟುತ್ತಾ ಸಾಗುತ್ತಿರುವ ಹಿನ್ನೆಲೆಯಲ್ಲಿಮಳೆಯಿಂದಾಗಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಬೇಕಾಯಿತು.

ಆಲಂಕಾರಿನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ; ಲಂಚ ಕೇಳುವ ಅಧಿಕಾರಿಗಳನ್ನು ಮನೆಗೆ ಕಳಿಸ್ತೀನಿ ಎಂದ ಡಿಸಿ

ಬೆಳ್ತಂಗಡಿಯಲ್ಲಿ ಹೆಚ್ಚು ಮಳೆ: ಮಂಗಳವಾರ ಅತೀ ಹೆಚ್ಚು ಮಳೆ ಬೆಳ್ತಂಗಡಿಯ ತೆಕ್ಕಾರು ಪ್ರದೇಶದಲ್ಲಿ ಬಿದ್ದಿದೆ. 65 ಮಿ.ಮೀ ನಷ್ಟು ಮಳೆಯಾಗಿದೆ. ಇದರ ಜತೆಗೆ ಇಳಂತಿಲದಲ್ಲಿ44 ಮಿ.ಮೀ, ಬೆಳಾಲು ಪ್ರದೇಶದಲ್ಲಿ46 ಮಿ.ಮೀ ಮಳೆಯಾಗಿದೆ. ಬಂಟ್ವಾಳದ ವೀರಕಂಭದಲ್ಲಿ57 ಮಿ.ಮೀ ಮಳೆಯಾದರೆ ಮೇರಮಜಲಿನಲ್ಲಿ 53 ಮಿ.ಮೀ ಮಳೆಯಾಗಿದೆ. ಮಂಗಳೂರಿನ ಜೋಕಟ್ಟೆಯಲ್ಲಿ 47 ಮಿ.ಮೀ ಮಳೆಯಾಗಿದೆ. ಪುತೂರಿನ ನೆಕ್ಕಿಲಾಡಿಯಲ್ಲಿ56 ಮಿ.ಮೀ ಮಳೆಯಾದರೆ ಸುಳ್ಯದ ಆಲೆಟ್ಟಿಯಲ್ಲಿ 47. 5 ಮಿ.ಮೀ ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ