ಆ್ಯಪ್ನಗರ

ಸ್ಮಾರ್ಟ್‌ಸಿಟಿ ಎಂಡಿ ನಾರಾಯಣಪ್ಪ ವರ್ಗಾವಣೆ

ಮಂಗಳೂರು ಸ್ಮಾರ್ಟ್‌ಸಿಟಿ ಕಂಪನಿ ಲಿಮಿಟೆಡ್‌ ಆಡಳಿತ ನಿರ್ದೇಶಕ ಬಿ.ಎಚ್‌. ನಾರಾಯಣಪ್ಪ ಅವರಿಗೆ ತಕ್ಷಣದಿಂದ ಜಾರಿಯಾಗುವಂತೆ ವರ್ಗಾವಣೆ ಆದೇಶ ಬಂದಿದೆ.

Vijaya Karnataka 20 Aug 2019, 5:00 am
ಮಂಗಳೂರು: ಮಂಗಳೂರು ಸ್ಮಾರ್ಟ್‌ಸಿಟಿ ಕಂಪನಿ ಲಿಮಿಟೆಡ್‌ ಆಡಳಿತ ನಿರ್ದೇಶಕ ಬಿ.ಎಚ್‌. ನಾರಾಯಣಪ್ಪ ಅವರಿಗೆ ತಕ್ಷಣದಿಂದ ಜಾರಿಯಾಗುವಂತೆ ವರ್ಗಾವಣೆ ಆದೇಶ ಬಂದಿದೆ.
Vijaya Karnataka Web smart city md transferred
ಸ್ಮಾರ್ಟ್‌ಸಿಟಿ ಎಂಡಿ ನಾರಾಯಣಪ್ಪ ವರ್ಗಾವಣೆ


ನಾರಾಯಣಪ್ಪ ಅವರನ್ನು ಬೆಂಗಳೂರಿನ ಪೌರಾಡಳಿತ ನಿರ್ದೇಶನಾಲಯ (ಡಿಎಂಎ) ಜಂಟಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಇನ್ನೆರಡು ದಿನಗಳಲ್ಲಿ ನಾರಾಯಣಪ್ಪ ಅವರು ನೂತನ ಅಧಿಕಾರ ಸ್ವೀಕರಿಸುವ ಸಾಧ್ಯತೆಗಳಿವೆ. ಮಂಗಳೂರು ಮಹಾನಗರಪಾಲಿಕೆ ಕಮಿಷನರ್‌ ಮಹಮ್ಮದ್‌ ನಜೀರ್‌ ಸ್ಮಾರ್ಟ್‌ಸಿಟಿಯ ಪ್ರಭಾರ ಆಡಳಿತ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ.

ಸ್ಮಾರ್ಟ್‌ಸಿಟಿ ಆಡಳಿತ ನಿರ್ದೇಶಕರಾಗಿ ನಾರಾಯಣಪ್ಪ ಇತ್ತೀಚೆಗಷ್ಟೇ ಅಧಿಕಾರ ಸ್ವೀಕರಿಸಿದ್ದರು. ಸಂಸತ್‌ ಚುನಾವಣೆಯ ವೇಳೆ ಅವರು ಮಂಗಳೂರು ಮಹಾನಗರಪಾಲಿಕೆಯ ಪ್ರಭಾರ ಕಮಿಷನರ್‌ ಆಗಿ ಕಾರ್ಯನಿರ್ವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ