ಆ್ಯಪ್ನಗರ

ಪುತ್ತೂರು ಎಪಿಎಂಸಿಗೆ ಇನ್ನು ಸೌರ ವಿದ್ಯುತ್‌ ಬೆಳಕು: 50 ಲಕ್ಷ ರೂ. ವೆಚ್ಚದಲ್ಲಿ ಯೋಜನೆ ಅನುಷ್ಠಾನ

ಪುತ್ತೂರು ಎಪಿಎಂಸಿ ಯಾರ್ಡ್‌ನಲ್ಲಿ ಬಳಸಲಾಗುವ ವಿದ್ಯುತ್‌ನ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶದಿಂದ ಯಾರ್ಡ್‌ನಲ್ಲಿ ಸೌರ ವಿದ್ಯುತ್‌ ಯೋಜನೆ ರೂಪಿಸಲು ಮುಂದಡಿ ಇಡಲಾಗಿದೆ.

Vijaya Karnataka Web 27 Nov 2020, 10:05 pm
ಪುತ್ತೂರು: ಪುತ್ತೂರು ಎಪಿಎಂಸಿ ಯಾರ್ಡ್‌ನಲ್ಲಿ ಬಳಸಲಾಗುವ ವಿದ್ಯುತ್‌ನ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುವ ಉದ್ದೇಶದಿಂದ ಯಾರ್ಡ್‌ನಲ್ಲಿ ಸೌರ ವಿದ್ಯುತ್‌ ಯೋಜನೆ ರೂಪಿಸಲು ಮುಂದಡಿ ಇಡಲಾಗಿದೆ.
Vijaya Karnataka Web solar power
Picture used for representational purpose only


ಶುಕ್ರವಾರ ಎಪಿಎಂಸಿ ಅಧ್ಯಕ್ಷ ದಿನೇಶ್‌ ಮೆದು ಅಧ್ಯಕ್ಷತೆಯಲ್ಲಿ ನಡೆದ ಎಪಿಎಂಸಿ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರು ಈ ಬಗ್ಗೆ ಮಾಹಿತಿ ನೀಡಿದರು.

ಪ್ರತೀ ತಿಂಗಳು ಎಪಿಎಂಸಿಗೆ ಅಪಾರ ಮೊತ್ತದ ವಿದ್ಯುತ್‌ ಬಿಲ್‌ ಬರುತ್ತಿದೆ. ಇದೀಗ ಅದು ಸಮಿತಿಯ ಪಾಲಿಗೆ ಹೊರೆಯಾಗುತ್ತಿದೆ. ಇತ್ತೀಚೆಗೆ ಸರಕಾರ ಎಪಿಎಂಸಿ ಕಾಯಿದೆಗೆ ತಿದ್ದುಪಡಿ ತಂದ ಬಳಿಕ ಎಪಿಎಂಸಿಗೆ ಬರುವ ಮಾರುಕಟ್ಟೆ ಶುಲ್ಕ ಗಣನೀಯವಾಗಿ ಇಳಿದಿದೆ. ಇದರಿಂದ ಆದಾಯಕ್ಕೆ ಹೊಡೆತ ಬಿದ್ದಿದೆ. ಈ ಸಂದರ್ಭದಲ್ಲಿ ಎಲ್ಲ ರೀತಿಯ ಖರ್ಚುಗಳನ್ನು ಕಡಿಮೆ ಮಾಡುವ ಅನಿವಾರ್ಯತೆ ಇದೆ ಎಂದರು.

ಗ್ರಾಪಂ ಮಟ್ಟದಲ್ಲಿ ಸೋಲಾರ್‌ ನೀತಿ ಅನುಷ್ಠಾನ ಮಾಡಬೇಕೆಂಬ ಸರಕಾರದ ಚಿಂತನೆಗೆ ಎಳ್ಳುನೀರು!

ಪ್ರಸ್ತುತ ನಮಗೆ ಒಂದು ಲಕ್ಷ ರೂ.ಗಳಷ್ಟು ವಿದ್ಯುತ್‌ ಬಿಲ್‌ ಬರುತ್ತಿದೆ. ಹೀಗಾಗಿ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ಸೌರ ವಿದ್ಯುತ್‌ ಯೋಜನೆ ರೂಪಿಸಿದಲ್ಲಿ ವಿದ್ಯುತ್‌ ಬಿಲ್‌ನ ಹೊರೆ ಇಲ್ಲವಾಗಲಿದೆ. ಸೌರ ವಿದ್ಯುತ್‌ ಯೋಜಗೆಗಾಗಿ ಈಗಾಗಲೇ ಟೆಂಡರ್‌ ಕರೆಯಲಾಗಿದೆ. 20 ದಿನಗಳಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ. ಸೋಲಾರ್‌ ಪ್ಲಾಂಟನ್ನು ಮೆಸ್ಕಾಂ ಗ್ರಿಡ್‌ಗೆ ಜೋಡಿಸಲಾಗುತ್ತದೆ. ಮುಖ್ಯ ವಾಹಿನಿಯ ಮೂಲಕವೇ ವಿದ್ಯುತ್‌ ಸಿಗಲಿದೆ. ಎಪಿಎಂಸಿ ದ್ವಾರ, ಸೆಂಟ್ರಲ್‌ ಮಾರುಕಟ್ಟೆ, ರೈತ ಭವನದಲ್ಲಿ ಹೈಮಾಸ್ಟ್‌ ದೀಪಗಳನ್ನು ಸ್ಥಾಪಿಸಲಾಗುವುದು. ವರ್ತಕರ ಅಂಗಡಿಗಳಿಗೂ ಸಂಪರ್ಕ ಕೊಡಿಸಲಾಗುವುದು ಎಂದು ಅವರು ವಿವರಿಸಿದರು.

2030ರೊಳಗೆ ಶೇ.100 ಪರಿಸರ ಸ್ನೇಹಿಯಾಗಲಿದೆ ಭಾರತೀಯ ರೈಲ್ವೆ!

ಇಂದಿನ ದಿನಮಾನಗಳಲ್ಲಿ ಅಂತರ್ಜಲ ಮಟ್ಟ ಸಂರಕ್ಷಣೆಗೆ ಆದ್ಯತೆ ನೀಡುವ ಅಗತ್ಯವಿದ್ದು, ಎಪಿಎಂಸಿ ಯಾರ್ಡ್‌ನಲ್ಲಿಈ ಯೋಜನೆ ಅನುಷ್ಠಾನ ಮಾಡುವ ಅಗತ್ಯತೆ ಇದೆ ಎಂದು ನಿರ್ದೇಶಕಿ ಪುಲಸ್ತಾಯ್‌ ರೈ ಹೇಳಿದರು. ಭವಿಷ್ಯದಲ್ಲಿಎಪಿಎಂಸಿಯ ಅಭಿವೃದ್ಧಿ ಕಾರ್ಯಗಳಿಗೆ ನಬಾರ್ಡ್‌ ನೆರವಿನ ಯೋಜನೆ ರೂಪಿಸಬೇಕಾಗಿದೆ ಎಂದು ಅಧ್ಯಕ್ಷರು ಹೇಳಿದರು.

ಉಪಾಧ್ಯಕ್ಷ ಮಂಜುನಾಥ ಎನ್‌.ಎಸ್‌, ನಿರ್ದೇಶಕರಾದ ಬಾಲಕೃಷ್ಣ ಬಾಣಜಾಲು, ತ್ರಿವೇಣಿ ಪೆರುವೋಡಿ, ಅಬ್ದುಲ್‌ ಶಕೂರು, ಮೇದಪ್ಪ, ಕಾರ್ತಿಕ್‌ ರೈ ಬೆಳ್ಳಿಪ್ಪಾಡಿ, ಕೊರಗಪ್ಪ, ತೀರ್ಥಾನಂದ ದುಗ್ಗಳ, ನಾಮನಿರ್ದೇಶಿತ ಸದಸ್ಯರಾದ ಬಾಲಕೃಷ್ಣ ಜೋಯಿಷ, ಬಾಬು, ಮೋಹನಾಂಗಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಾಮಚಂದ್ರ ಸಭಾ ನಡಾವಳಿ ನಡೆಸಿಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ