ಆ್ಯಪ್ನಗರ

Soldier Death:ಭೋಪಾಲ್‌ನ ಸಶಸ್ತ್ರ ಸೀಮಾ ಬಲ್‌ನಲ್ಲಿ ಕರ್ತವ್ಯದಲ್ಲಿದ್ದ ಯೋಧ ಮುರಳಿಧರ್ ರೈ ಸಾವು

ಯೋಧ ಮುರಳಿಧರ್ ರೈ ಹೃದಯಾಘಾತದಿಂದಭೋಪಾಲ್‌ನಲ್ಲಿ ಮೃತಪಟ್ಟಿದ್ದಾರೆ. ಮಂಘಳೂರಿನಲ್ಲಿ ಇಂದು ಅಂತ್ಯ ಸಂಸ್ಕಾರ ನಡೆಯಿತು. ಕುಟುಂಬಸ್ಥರು ಹಾಗೂ 7 ತಿಂಗಳ ಹಸುಗೂಸನ್ನು ಬಿಟ್ಟು ತೆರಳಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

Lipi 26 Jan 2023, 2:59 pm

ಹೈಲೈಟ್ಸ್‌:

  • ಹೃದಯಾಘಾತದಿಂದ ಮೃತಪಟ್ಟ ನಗರದ ಶಕ್ತಿನಗರ ನಿವಾಸಿ ಯೋಧ ಮುರಳಿಧರ್ ರೈ (37) ಅವರ ಅಂತ್ಯಸಂಸ್ಕಾರ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.
  • ತಂದೆಯ ಅಗಲುವಿಕೆಯನ್ನು ಅರಿಯದ ಯೋಧ ಮುರಳೀಧರ ರೈ ಅವರ ಏಳು ತಿಂಗಳ ಶಿಶುವಿನ ಮುಗ್ಧ ಮುಖ ಎಂಥವರನ್ನು ಕರುಳು ಹಿಂಡುವಂತೆ ಮಾಡುತ್ತಿತ್ತು.

  • ಕಳೆದ 17 ವರ್ಷಗಳಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುರಳೀಧರ ರೈ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಂಜಯನಗರ ಆಂಜನೇಯ ಸಭಾಭವನದ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Soldier Muralidhar Rai
ಮಂಗಳೂರು:ಹೃದಯಾಘಾತದಿಂದ ಮೃತಪಟ್ಟ ನಗರದ ಶಕ್ತಿನಗರ ನಿವಾಸಿ ಯೋಧ ಮುರಳಿಧರ್ ರೈ (37) ಅವರ ಅಂತ್ಯಸಂಸ್ಕಾರ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು.
ಭೋಪಾಲ್‌ನ ಸಶಸ್ತ್ರ ಸೀಮಾ ಬಲ್‌ನಲ್ಲಿ ಕರ್ತವ್ಯದಲ್ಲಿದ್ದ ಯೋಧ ಮುರಳಿಧರ್ ರೈ ಸೋಮವಾರ ಬೆಳಿಗ್ಗೆ ಮಲಗಿದ್ದಲ್ಲೇ ಹೃದಯಾಘಾತದಿಂದ ಮೃತಪಟ್ಟಿದ್ದರು. ನಿನ್ನೆ ಮಂಗಳವಾರ ಅವರ ಪಾರ್ಥಿವ ಶರೀರ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಬುಧವಾರ ಶಕ್ತಿನಗರದ ಸಂಜಯ ನಗರದಲ್ಲಿರುವ ಮನೆಗೆ ಮೃತ ಯೋಧ ಮುರಳೀಧರ್ ರೈ ಪಾರ್ಥಿವ ಶರೀರ ಬರುತ್ತಿದ್ದಂತೆಯೇ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

Soldiers Slips Into Gorge: ಕಾಲು ಜಾರಿ ಆಳವಾದ ಪ್ರಪಾತಕ್ಕೆ ಬಿದ್ದ ಯೋಧರು: ಎಲ್‌ಒಸಿಯಲ್ಲಿ ಮೂವರು ಸಾವು

ಪತಿಯನ್ನು ಕಳೆದುಕೊಂಡ ಪತ್ನಿಯ ಆಕ್ರಂದನ ಎಲ್ಲರನ್ನೂ ಭಾವುಕರನ್ನಾಗಿಸಿತು. ತಂದೆಯ ಅಗಲುವಿಕೆಯನ್ನು ಅರಿಯದ ಯೋಧ ಮುರಳೀಧರ ರೈ ಅವರ ಏಳು ತಿಂಗಳ ಶಿಶುವಿನ ಮುಗ್ಧ ಮುಖ ಎಂಥವರನ್ನು ಕರುಳು ಹಿಂಡುವಂತೆ ಮಾಡುತ್ತಿತ್ತು.

ಕಳೆದ 17 ವರ್ಷಗಳಿಂದ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮುರಳೀಧರ ರೈ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಂಜಯನಗರ ಆಂಜನೇಯ ಸಭಾಭವನದ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿತ್ತು.

ದಕ್ಷಿಣ ಕನ್ನಡದ ಕಡಬದಲ್ಲಿ ಧ್ವಜಾರೋಹಣದ ವೇಳೆ ನಿವೃತ್ತ ಯೋಧ ನಿಧನ: ಪಾರ್ಥಿವ ಶರೀರದ ಅಂತಿಮ ಯಾತ್ರೆ
ಶಾಸಕ ವೇದವ್ಯಾಸ ಕಾಮತ್, ವಿ.ಎಚ್.ಪಿ ಮುಖಂಡ ಶರಣ್ ಪಂಪುವೆಲ್, ಜಿಲ್ಲಾಧಿಕಾರಿ ಎಂ ಆರ್ ರವಿಕುಮಾರ್, ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್ ಸೇರಿದಂತೆ ಹಲವು ಪ್ರಮುಖರು ಪಡೆದರು. ಸ್ಥಳದಲ್ಲಿ ಸ್ಥಳೀಯರು ಮುರಳೀಧರ್ ಅಮರ್ ರಹೇ ಘೋಷಣೆ ಕೂಗಿದ ಬಳಿಕ ದ.ಕ ಜಿಲ್ಲಾಡಳಿತದಿಂದ ಗೌರವ ಸಲ್ಲಿಕೆಯಾಯಿತು.

ಪೊಲೀಸ್ ಇಲಾಖೆಯಿಂದ ಮೂರು ಸುತ್ತು ಕುಶಾಲತೋಪು ಸಿಡಿಸಿ ಗೌರವ ಸಲ್ಲಿಸಲಾಯಿತು. ಬಳಿಕ ಮಹಾಕಾಳಿ ಹಿಂದೂ ರುದ್ರಭೂಮಿಯಲ್ಲಿ ಯೋಧ ಮುರಳೀಧರ್ ರೈ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ