ಆ್ಯಪ್ನಗರ

ಮಂಗಳೂರು: ವೃದ್ಧ ತಂದೆಯನ್ನು ರಸ್ತೆಯಲ್ಲಿ ಎಳೆದೊಯ್ದ ಪುತ್ರ ಪರಾರಿ!

ಪುತ್ರನೊಬ್ಬ ತಂದೆಯನ್ನು ತಾನು ತಂಗಿದ್ದ ಲಾಡ್ಜ್‌ನಿಂದ ಎರಡು ಕಾಲಲ್ಲಿ ಹಿಡಿದು ಎಳೆದುಕೊಂಡು ಬಂದು ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾದ ಅಮಾನವೀಯ ಘಟನೆ ಮಂಗಳೂರಿನಲ್ಲಿ ನಡೆದಿದೆ.

Vijaya Karnataka Web 30 Jun 2020, 3:27 pm
ತೊಕ್ಕೊಟ್ಟು: ಪುತ್ರನೊಬ್ಬ ತಂದೆಯನ್ನು ತಾನು ತಂಗಿದ್ದ ಲಾಡ್ಜ್‌ನಿಂದ ಎರಡು ಕಾಲಲ್ಲಿ ಹಿಡಿದು ಎಳೆದುಕೊಂಡು ಬಂದು ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾದ ಅಮಾನವೀಯ ಘಟನೆ ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ನಡೆದಿದ್ದು, ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.
Vijaya Karnataka Web hand


ಪುತ್ರ ಕಳೆದ 15 ದಿನಗಳಿಂದ ತಂದೆಗೆ ಚಿಕಿತ್ಸೆ ಕೊಡಿಸಲಾಗುತ್ತಿದ್ದ ಆಸ್ಪತ್ರೆಯ ಎದುರಿನ ಲಾಡ್ಜ್‌ನಲ್ಲಿ ತಂಗಿದ್ದ. ಸೋಮವಾರ ಲಾಡ್ಜ್‌ನಿಂದ ತಂದೆಯನ್ನು ಎಳೆದುಕೊಂಡು ಬಂದು ರಸ್ತೆಯಲ್ಲಿ ಬಿಟ್ಟು ಪರಾರಿಯಾಗಿದ್ದಾನೆ. ಹಿರಿ ವಯಸ್ಸಿನ ವ್ಯಕ್ತಿಯನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರು ಮುಂಬಯಿಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ.

ಜು.5ರವರೆಗೆ ಲೆಡಿಗೋಷನ್‌ ಸೇವೆ ಸ್ಥಗಿತ

ಮಂಗಳೂರು:ನಗರದ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಹಿನ್ನೆಲೆಯಲ್ಲಿ ಜೂ.30ರಿಂದ ಜು.5ರವರೆಗೆ ಹೊರರೋಗಿ ಹಾಗೂ ಒಳರೋಗಿಗಳ ದಾಖಲಾತಿ ಸೇವೆ ಸ್ಥಗಿತಗೊಳ್ಳಲಿದೆ.

ಆಸ್ಪತ್ರೆಯ ಹೆಚ್ಚಿನ ವೈದ್ಯರು-ಸಿಬ್ಬಂದಿ ಕ್ವಾರಂಟೈನ್‌ನಲ್ಲಿರುವುದರಿಂದ ಹಾಗೂ ಆಸ್ಪತ್ರೆಯ ಎಲ್ಲ ವಿಭಾಗಗಳನ್ನು ಫ್ಯೂಮಿಗೇಶನ್‌ ಹಾಗೂ ಸ್ಯಾನಿಟೈಸೇಶನ್‌ ಮಾಡುವ ಅಗತ್ಯವಿದೆ. ರೋಗಿಗಳ ಮುಂದಿನ ಚಿಕಿತ್ಸೆಗೆ 'ಎಕೆ-ಎಆರ್‌ಕೆ' ಯೋಜನೆಯಡಿ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಕಳುಹಿಸಲು ಶಿಫಾರಸು ಪತ್ರ ನೀಡಲು ನಿರ್ಧರಿಸಲಾಗಿದೆ.

ಜು.6ರಿಂದ ಆಸ್ಪತ್ರೆಯು ಎಂದಿನಂತೆಯೇ ಕಾರ್ಯನಿರ್ವಹಿಸಲಿದೆ. ಸಾರ್ವಜನಿಕರು ಸಹಕರಿಸಬೇಕು. ಈ ಬಗ್ಗೆ ಡಾ. ಶಕುಂತಲಾ ಎಂ. ಅವರನ್ನು ಸಂಪರ್ಕಿಸಬಹುದು. ಮಾಹಿತಿಗಾಗಿ ಹೆಲ್ಪ್ ಡೆಸ್ಕ್‌ ದೂ.ಸಂ.: 0824-2424001 ಸಂಪರ್ಕಿಸಲು ಲೇಡಿಗೋಶನ್‌ ಆಸ್ಪತ್ರೆಯ ಮೆಡಿಕಲ್‌ ಸೂಪರಿಂಟೆಂಡೆಂಟ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ