ಆ್ಯಪ್ನಗರ

ಎಲ್‌ಇಡಿ ಬೀದಿ ದೀಪಕ್ಕಾಗಿ ರಾಜ್ಯ ನೀತಿ: ಸಚಿವ ಖಾದರ್

ಜಿಲ್ಲಾ ರಸ್ತೆ ಹಾಗೂ ಒಳ ರಸ್ತೆಗಳಲ್ಲಿ ಎಷ್ಟು ವೋಲ್ಟ್‌ನ ಎಲ್‌ಇಡಿ ದೀಪ ಅಳವಡಿಸಬೇಕೆಂಬ ಬಗ್ಗೆಯೂ ನೀತಿಯಲ್ಲಿ ಅಳವಡಿಸಲಾಗಿದೆ. ಸ್ಥಳೀಯ ಸಂಸ್ಥೆಗಳು ಇನ್ನು ಮುಂದೆ ಬೀದಿ ದೀಪಗಳನ್ನು ಖರೀದಿಸುವಂತಿಲ್ಲ. ಎಲ್‌ಇಡಿ ಟೆಂಡರ್ ಮೂಲಕವೇ ಬೀದಿ ದೀಪಗಳ ನಿರ್ವಹಣೆ ನಡೆಯಲಿದೆ.

Vijaya Karnataka Web 2 Mar 2019, 5:59 pm
ಮಂಗಳೂರು: ರಾಜ್ಯದ ಮಹಾನಗರ ಪಾಲಿಕೆ ಸೇರಿದಂತೆ ಎಲ್ಲ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಎಲ್‌ಇಡಿ ದೀಪ ಮಾತ್ರ ಅಳವಡಿಸುವ ಸಮಗ್ರ ನೀತಿ ರೂಪಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ತಿಳಿಸಿದರು.
Vijaya Karnataka Web u t khader


ಬೀದಿ ದೀಪಗಳ ಸಮಸ್ಯೆ ನಿವಾರಿಸಿ, ನಿರ್ವಹಣೆಯನ್ನು ಸರಳೀಕರಿಸುವ ನಿಟ್ಟಿನಲ್ಲಿ ನೀತಿ ರೂಪಿಸಿದ್ದು, ಇದನ್ನೆಲ್ಲಾ ಮುಂದಿನ ದಿನಗಳಲ್ಲಿ ಟೆಂಡರುದಾರರು ವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಅವರು ತಿಳಿಸಿದರು.

ಜಿಲ್ಲಾ ರಸ್ತೆ ಹಾಗೂ ಒಳ ರಸ್ತೆಗಳಲ್ಲಿ ಎಷ್ಟು ವೋಲ್ಟ್‌ನ ಎಲ್‌ಇಡಿ ದೀಪ ಅಳವಡಿಸಬೇಕೆಂಬ ಬಗ್ಗೆಯೂ ನೀತಿಯಲ್ಲಿ ಅಳವಡಿಸಲಾಗಿದೆ. ಸ್ಥಳೀಯ ಸಂಸ್ಥೆಗಳು ಇನ್ನು ಮುಂದೆ ಬೀದಿ ದೀಪಗಳನ್ನು ಖರೀದಿಸುವಂತಿಲ್ಲ. ಎಲ್‌ಇಡಿ ಟೆಂಡರ್ ಮೂಲಕವೇ ಬೀದಿ ದೀಪಗಳ ನಿರ್ವಹಣೆ ನಡೆಯಲಿದೆ. ಟೆಂಡರ್ ಪಡೆದವರು ಬೀದಿ ದೀಪಗಳನ್ನು ಅಳವಡಿಸುವ ಜತೆಗೆ ಅದರ ಸಂಪೂರ್ಣ ನಿರ್ವಹಣೆ ಜವಾಬ್ದಾರಿ ವಹಿಸುತ್ತಾರೆ. ಸ್ಥಳೀಯ ಸಂಸ್ಥೆಗಳಿಂದ ವಿದ್ಯುತ್ ಬಿಲ್ ಹಾಗೂ ಪ್ರೋತ್ಸಾಹ ಧನವನ್ನು ಟೆಂಡರುದಾರರಿಗೆ ನೀಡಲಾಗುತ್ತದೆ. ಇದರಿಂದಾಗಿ ವಿದ್ಯುತ್ ಪೋಲು, ಅಧಿಕ ವಿದ್ಯುತ್ ಬಿಲ್ ಮೊದಲಾದ ಸಮಸ್ಯೆಗಳು ನಿವಾರಣೆಯಾಗಲಿದೆ ಎಂದರು.

7ರಂದು ತಾಲೂಕು ಉದ್ಘಾಟನೆ: ಸರಕಾರದಿಂದ ಈಗಾಗಲೇ ಅಧಿಸೂಚನೆಗೊಂಡು ಘೋಷಣೆಯಾಗಿರುವ ಕಡಬ ಹಾಗೂ ಮೂಡುಬಿದಿರೆ ತಾಲೂಕುಗಳ ಅಧಿಕೃತ ಉದ್ಘಾಟನೆ ಮಾ.೭ರಂದು ನಡೆಯಲಿದೆ. ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು ತಾಲೂಕುಗಳಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ ಎಂದು ಸಚಿವ ಯು.ಟಿ.ಖಾದರ್ ಹೇಳಿದರು.
ಮಂಗಳೂರು ತಾಲೂಕಿನಲ್ಲಿ ಸರಕಾರಿ ಆಡಳಿತದ ಒತ್ತಡ ತೀವ್ರವಾಗಿರುವ ಹಿನ್ನೆಲೆಯಲ್ಲಿ ಹೊಸದಾಗಿ ಮೂಲ್ಕಿ ಹಾಗೂ ಉಳ್ಳಾಲ ತಾಲೂಕು ಘೋಷಣೆ ಮಾಡಲಾಗಿದೆ. ಇದಕ್ಕಾಗಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಕಂದಾಯ ಸಚಿವ ದೇಶಪಾಂಡೆ ಅವರನ್ನು ಅಭಿನಂದಿಸುತ್ತಿದ್ದೇನೆ ಎಂದು ಸಚಿವ ಖಾದರ್ ಹೇಳಿದರು.

ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮುಹಮ್ಮದ್ ಮೋನು, ಬಿಜೆಪಿ ಮುಖಂಡ ಈಶ್ವರ್ ಉಳ್ಳಾಲ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ