ಆ್ಯಪ್ನಗರ

ಕಾಡಿದ ಅಮ್ಮನ ನೆನಪು: ಜನ್ಮದಿನದಂದೇ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ತಾಯಿಯನ್ನು ಕಳೆದುಕೊಂಡು ಮಾನಸಿಕವಾಗಿ ಒತ್ತಡದಲ್ಲಿದ್ದ ವಿದ್ಯಾರ್ಥಿಯೊಬ್ಬ ಹಾಸ್ಟೆಲ್‌ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣ ಸೋಮವಾರ ರಾತ್ರಿ ನಡೆದಿದೆ.

Vijaya Karnataka Web 10 Jan 2018, 8:23 am

ಮೂಡುಬಿದಿರೆ: ತಾಯಿಯನ್ನು ಕಳೆದುಕೊಂಡು ಮಾನಸಿಕವಾಗಿ ಒತ್ತಡದಲ್ಲಿದ್ದ ವಿದ್ಯಾರ್ಥಿಯೊಬ್ಬ ಹಾಸ್ಟೆಲ್‌ ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೈದ ಪ್ರಕರಣ ಸೋಮವಾರ ರಾತ್ರಿ ನಡೆದಿದೆ.

ಆಳ್ವಾಸ್‌ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ಬೆಂಗಳೂರು ಎಲ್ಲಪ್ಪ ಸರ್ಕಲ್‌ ನಿವಾಸಿ ಜಿ. ನಾಗರಾಜ್‌ ಎಂಬವರ ಮೊದಲ ಪತ್ನಿಯ ಪುತ್ರ ತೇಜಸ್‌(16)ಆತ್ಮಹತ್ಯೆ ಮಾಡಿಕೊಂಡವ.

ಸೋಮವಾರ ರಾತ್ರಿ ಹಾಸ್ಟೆಲ್‌ನ ಸಹಪಾಠಿ ವಿದ್ಯಾರ್ಥಿಗಳು ಊಟಕ್ಕೆ ಕರೆದಿದ್ದು ತಾನು ಸ್ವಲ್ಪ ವ್ಯಾಯಾಮ ಮಾಡಿ ಬರುತ್ತೇನೆ. ನೀವು ಹೊರಗಿನಿಂದ ಬೀಗ ಹಾಕಿ ಕೀಯನ್ನು ಸಂದಿಯಲ್ಲಿ ಇಟ್ಟು ತೆರಳಲು ಹೇಳಿದ್ದ. ಅದರಂತೆ ಸಹಪಾಠಿಗಳು ಹೊರಗಿನಿಂದ ಬೀಗ ಹಾಕಿ ಊಟಕ್ಕೆ ತೆರಳಿ ವಾಪಸ್‌ ಬಂದು ಕರೆದಾಗ ಬಾಗಿಲು ತೆರೆಯಲಿಲ್ಲ. ಸಂಶಯಗೊಂಡು ವಾರ್ಡನ್‌ಗೆ ಮಾಹಿತಿ ನೀಡಿದ್ದು ಅವರು ಬಂದು ನೋಡಿದಾಗ ಆತ್ಮಹತ್ಯೆಗೈದ ಸ್ಥಿತಿಯಲ್ಲಿದ್ದು ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದು ಈ ವೇಳೆ ಆಗಲೇ ವಿದ್ಯಾರ್ಥಿ ಮೃತಪಟ್ಟಿದ್ದ.

ಸೋಮವಾರವಷ್ಟೇ ತೇಜಸ್‌ನ ಹುಟ್ಟು ಹಬ್ಬವಿದ್ದು ತಂದೆ ಹಾಗೂ ಮನೆಯವರು ಮೂಡುಬಿದಿರೆಗೆ ಬಂದು ತೇಜಸ್‌ನನ್ನು ಸ್ಥಳೀಯ ಮಾರಿಗುಡಿಗೆ ಕರೆದೊಯ್ದು ಬಳಿಕ ಹೊಟೇಲ್‌ನಲ್ಲಿ ಊಟ ಮಾಡಿಸಿ ಹಾಸ್ಟೆಲ್‌ನಲ್ಲಿ ಬಿಟ್ಟು ಬೆಂಗಳೂರಿಗೆ ತೆರಳಿದ್ದರು. ಆತ್ಮಹತ್ಯೆಯ ಸುದ್ದಿ ತಿಳಿಯುತ್ತಿದ್ದಂತೆ ಅರ್ಧ ದಾರಿಯಿಂದಲೇ ವಾಪಸ್‌ ಬಂದಿದ್ದರು. ನಿರ್ಲಕ್ಷ್ಯ ತೋರಿದ ವಾರ್ಡನ್‌ ವಿರುದ್ಧ ಪೊಲೀಸ್‌ ಪ್ರಕರಣ ದಾಖಲಿಸಿದರು.

ಡೆತ್‌ನೋಟ್‌ನಲ್ಲೇನಿದೆ ?

ಆತ ಮಲಗುವ ಮಂಚದಲ್ಲೇ ಫೈಲ್‌ ಇಟ್ಟಿದ್ದು ಅದರಲ್ಲಿ ಡೆತ್‌ನೋಟ್‌ ಇತ್ತು. ಅದರಲ್ಲಿ 'ನನ್ನ ಸ್ವ ಇಚ್ಛೆಯಿಂದ ಆಳ್ವಾಸ್‌ ಕಾಲೇಜಿಗೆ ಸೇರಿದ್ದು ತಂದೆ ಚೆನ್ನಾಗಿ ನೋಡಿಕೊಂಡಿದ್ದಾರೆ. ನನ್ನ ತಾಯಿಯ ಆತ್ಮದ ಬಳಿ ನನ್ನ ಕಷ್ಟವನ್ನು ಹೇಳಿಕೊಳ್ಳಲು ಹೋಗುತ್ತಿದ್ದೇನೆ'ಎಂದು ಸ್ವಂತ ಹಸ್ತಾಕ್ಷ ರದಲ್ಲಿ ಬರೆದಿದ್ದ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ