ಆ್ಯಪ್ನಗರ

ಜಲ ಗಂಡಾಂತರ ನಿವಾರಣೆಗೆ ಇಂದು ಸುಳ್ಯದಲ್ಲಿ ’ವರುಣ ಮಹಾಯಾಗ’

ಅತಿವೃಷ್ಟಿ, ಜಲ ಪ್ರಳಯ, ಭೂಕುಸಿತ ಮುಂತಾದ ಜಲ ಗಂಡಾಂತರ ನಿವಾರಣೆಗಾಗಿ ಸುಳ್ಯದ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಆ.20ರಂದು ಬೆಳಗ್ಗೆ 9ರಿಂದ ವರುಣ ಮಹಾಯಾಗ ನಡೆಯಲಿದೆ.

Vijaya Karnataka 20 Aug 2018, 4:51 pm
ಸುಳ್ಯ: ಅತಿವೃಷ್ಟಿ, ಜಲ ಪ್ರಳಯ, ಭೂಕುಸಿತ ಮುಂತಾದ ಜಲ ಗಂಡಾಂತರ ನಿವಾರಣೆಗಾಗಿ ಸುಳ್ಯದ ಶ್ರೀ ಚೆನ್ನಕೇಶವ ದೇವಾಲಯದಲ್ಲಿ ಆ.20ರಂದು ಬೆಳಗ್ಗೆ 9ರಿಂದ ವರುಣ ಮಹಾಯಾಗ ನಡೆಯಲಿದೆ.
Vijaya Karnataka Web sulia promblem from rain varuna mhayaga
ಜಲ ಗಂಡಾಂತರ ನಿವಾರಣೆಗೆ ಇಂದು ಸುಳ್ಯದಲ್ಲಿ ’ವರುಣ ಮಹಾಯಾಗ’


ಈ ಹಿಂದೆ ಚಿಕೂನ್‌ಗುನ್ಯಾ ರೋಗದಿಂದ ಜನರು ತತ್ತರಿಸಿ ಹೋದಾಗ ಧನ್ವಂತರಿ ಮಹಾಯಾಗ, ಮಳೆ ಬಾರದಿದ್ದಾಗ ಪರ್ಜನ್ಯ ಮಹಾಯಾಗ ಮುಂತಾದ ಯಾಗಗಳನ್ನು ನಡೆಸಿ ಅದರಲ್ಲಿ ಸಫಲತೆ ಕಂಡಿರುವ ಸುಳ್ಯದ ಶ್ರೀಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಬ್ರಹ್ಮಶ್ರೀ ಪುರೋಹಿತ ನಾಗರಾಜ್‌ ಭಟ್‌ ನೇತೃತ್ವದಲ್ಲಿ ಈ ಮಹಾಯಾಗ ನಡೆಯಲಿದೆ.

ವಿಶಿಷ್ಟ ವೇದಮಂತ್ರ ಬಳಕೆ: ಸರಿಸುಮಾರು 70 ವರ್ಷ ಹಿಂದೆ ತಮಿಳುನಾಡಿನಲ್ಲಿ ಇದೇ ತರಹದ ಅತಿವೃಷ್ಟಿ ಸಂಭವಿಸಿ ಅಪಾರ ಪ್ರಮಾಣದ ಹಾನಿಯಾಗಿ ಜನಜೀವನ ತತ್ತರಿಸಿ ಹೋದಾಗ ಅಲ್ಲಿನ ಪರಮಾಚಾರ್ಯ ಜಗದ್ಗುರು ಶ್ರೀ ಚಂದ್ರಶೇಖರಾನಂದ ಸರಸ್ವತಿ ಸ್ವಾಮೀಜಿಯವರು ವೇದಮಂತ್ರಗಳನ್ನು ಆಮೂಲಾಗ್ರವಾಗಿ ಹುಡುಕಾಡಿ ವೇದದಲ್ಲಿ ಉಲ್ಲೇಖಿಸಲ್ಪಟ್ಟ ಮಂತ್ರವೊಂದನ್ನು ಜಪಿಸತೊಡಗಿದರು. ಪವಾಡವೆಂಬಂತೆ ಆ ಮಂತ್ರವನ್ನು ಜಪಿಸಿದ ಕ್ಷ ಣಾರ್ಧದಲ್ಲಿ ಮಳೆ ನಿಂತು ಹೋಗಿ ಜನಜೀವನ ಹತೋಟಿಗೆ ಬಂದಿರುವುದಾಗಿ ಇತಿಹಾಸದಲ್ಲಿ ದಾಖಲಾಗಿದೆ. ವೈಶಿಷ್ಟ್ಯವೆಂಬಂತೆ ಇದೇ ಮಂತ್ರವನ್ನು ಈ ಮಹಾಯಾಗದಲ್ಲಿಯೂ ಬಳಸಿಕೊಳ್ಳಲಾಗುತ್ತಿದೆ.

ವೇದದಲ್ಲಿ ಉಲ್ಲೇಖಿಸಲ್ಪಟ್ಟ ಹಾಗೆ ಆ ಮಂತ್ರವನ್ನು ಯಾರೆಲ್ಲ ಕೇಳುತ್ತಾರೋ, ಅಧ್ಯಯನ ಮಾಡುತ್ತಾರೋ ಅಂತಹ ಕಡೆಗಳಲ್ಲಿ ವರುಣ ದೇವರ ರೌದ್ರಾವತಾರ ಶಾಂತವಾಗುತ್ತದೆ. ಜಲ ಗಂಡಾಂತರವೂ ತಪ್ಪುತ್ತದೆ. ಸುಭಿಕ್ಷ , ಸುಕ್ಷೇಮದಿಂದ ನಾಡು ಪುನಶ್ಚೇತನಗೊಳ್ಳುತ್ತದೆ. ಹಾಗಾಗಿ ವರುಣ ದೇವರು ಶಾಂತ ರೂಪವನ್ನು ತಾಳಿ ನಾಡಿನ ಜನರನ್ನು ಜಲ ಪ್ರಳಯ, ಜಲ ಗಂಡಾಂತದಿಂದ ಪಾರು ಮಾಡಬೇಕೆನ್ನುವ ಉದ್ದೇಶದಿಂದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನವು ಈ ಮಹಾಯಾಗವನ್ನು ಕೈಗೆತ್ತಿಕೊಂಡು ಸಮಸ್ತ ಭಕ್ತ ಬಂಧುಗಳನ್ನು ಆಹ್ವಾನಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ