ಆ್ಯಪ್ನಗರ

ಕುಕ್ಕೆ ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶಾಸಕ ಎಸ್‌. ಅಂಗಾರ ನೇಮಕ

ಕುಕ್ಕೆ ದೇವಳದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶಾಸಕ ಎಸ್‌. ಅಂಗಾರ ನೇಮಕಗೊಂಡಿದ್ದಾರೆ. ದೇವಳದ ಆಡಳಿತಾತ್ಮಕ ಅಭಿವೃದ್ಧಿ, ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿಗಳ ಪರಿವೀಕ್ಷಣೆ ಹಾಗೂ ಮೇಲುಸ್ತುವಾರಿ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ.

Vijaya Karnataka Web 9 Nov 2020, 10:24 am
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾಗಿ ಶಾಸಕ ಎಸ್‌. ಅಂಗಾರ ಅವರನ್ನು ನೇಮಿಸಿ ಸರಕಾರ ಶನಿವಾರ ಆದೇಶ ಹೊರಡಿಸಿದೆ.
Vijaya Karnataka Web ಎಸ್. ಅಂಗಾರ


ಕುಕ್ಕೆ ದೇವಳ ಅಭಿವೃದ್ಧಿ ಸಮಿತಿಗೆ 6 ಸದಸ್ಯರನ್ನು ನೇಮಿಸಿ ಈ ಹಿಂದೆ ಸರಕಾರ ಆದೇಶ ನೀಡಿತ್ತು. ಆದರೆ ಈ ಹಿಂದಿನ ಆದೇಶವನ್ನು ದೇವಳದ ಆಡಳಿತ ಮತ್ತು ಸಾರ್ವಜನಿಕ ಕಾರಣಗಳಿಗಾಗಿ ಪರಿಷ್ಕರಿಸಿ ನೂತನ ಆದೇಶವನ್ನು ರಾಜ್ಯ ಮುಜರಾಯಿ ಆಯುಕ್ತರು ಹೊರಡಿಸಿದ್ದಾರೆ.
ಕುಕ್ಕೆ ಚಂಪಾ ಷಷ್ಠಿ ಜಾತ್ರೋತ್ಸವ: ವಾರಾಂತ್ಯಕ್ಕೆ ಪೂರ್ವಭಾವಿ ಸಭೆ, ಸಚಿವ ಕೋಟ

ದೇವಳದ ಆಡಳಿತಾತ್ಮಕ ಅಭಿವೃದ್ಧಿ, ಮಾಸ್ಟರ್‌ ಪ್ಲ್ಯಾನ್‌ ಕಾಮಗಾರಿಗಳ ಪರಿವೀಕ್ಷಣೆ ಹಾಗೂ ಮೇಲುಸ್ತುವಾರಿ ಅಧಿಕಾರವನ್ನು ಸಮಿತಿಗೆ ನೀಡಲಾಗಿದೆ. ದೇವಳದ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್‌. ಸಮಿತಿಯ ಕಾರ್ಯದರ್ಶಿ ಮತ್ತು ಕೋಶಾಧಿಕಾರಿಗಳಾಗಿದ್ದಾರೆ.
ಸುಳ್ಯ ವಿಧಾನಸಭಾ ಕ್ಷೇತ್ರದ 355 ಕಿಮೀ ಗ್ರಾಮೀಣ ರಸ್ತೆಗಳು ಮೇಲ್ದರ್ಜೆಗೆ: ಶಾಸಕ ಅಂಗಾರ

ಸುಳ್ಯ ತಾಲೂಕಿನ ಬಾಳಿಲ ಗ್ರಾಮದ ಪಿ.ಜಿ.ಎಸ್‌. ಪ್ರಸಾದ್‌, ಕಡಬ ತಾಲೂಕು ಕುಟ್ರುಪ್ಪಾಡಿ ಗ್ರಾಮದ ಕೃಷ್ಣ ಶೆಟ್ಟಿ ಕಡಬ, ಬೆಳ್ತಂಗಡಿ ತಾಲೂಕು ತಣ್ಣೀರುಪಂತ ಗ್ರಾಮದ ಪ್ರಸನ್ನ ದರ್ಬೆ, ಸುಳ್ಯ ತಾಲೂಕಿನ ನೆಲ್ಲೂರು ಕೆಮ್ರಾಜೆಯ ಎಸ್‌. ಮೋಹನ್‌ರಾಂ ಸುಳ್ಳಿ, ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ವನಜಾ ವಿ. ಭಟ್‌ ಸಮಿತಿಯ ಸದಸ್ಯರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ