ಆ್ಯಪ್ನಗರ

ಸಚಿವರಾದ್ರೂ ಸರಳತೆ ಬಿಡದ ಎಸ್. ಅಂಗಾರ; ಸಣ್ಣ ಹೋಟೆಲ್ ನಲ್ಲಿ ಕಲ್ತಪ್ಪ ತಿನ್ನುತ್ತಿರುವ ಫೋಟೋ ವೈರಲ್!

ಸರಳತೆಗೆ ಮತ್ತೊಂದು ಹೆಸರೇ ಎಸ್. ಅಂಗಾರ.. ತಮ್ಮ ಸರಳ ವ್ಯಕ್ತಿತ್ವದಿಂದಲೇ ಜನಮನ ಗೆದ್ದ ನಾಯಕ ಇವ್ರು..ಜ.18ರಂದು ಮಂಗಳೂರಿನಿಂದ ಅವರು ಸುಳ್ಯಕ್ಕೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಕಾರಿನಿಂದ ಇಳಿದು ಹೋಟೆಲ್ ನಲ್ಲಿ ಚಾ ಕುಡಿದು, ಕಲ್ತಪ್ಪ ತಿಂದ ಫೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿವೆ.. ಸಚಿವರ ಈ ಸರಳತೆಗೆ ಎಲ್ಲರಿಂದಲೂ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ...

Vijaya Karnataka Web 19 Jan 2021, 8:53 pm
ಮಂಗಳೂರು: ಸರಳತೆ, ಮೃದು ಮಾತು, ನಯ-ವಿನಯದಿಂದ ಜನರ ಮೆಚ್ಚುಗೆಗೆ ಪಾತ್ರರಾದ ಎಸ್. ಅಂಗಾರರವರು ಸಚಿವರಾದ್ರೂ ಅವರ ಸರಳತೆ ಇನ್ನೂ ಹಾಗೇಯೇ ಇದೆ.. ಅವರು ತಮ್ಮ ಸರಳ ವ್ಯಕ್ತಿತ್ವದಿಂದಲೇ ಜನಮನ ಗೆದ್ದ ನಾಯಕ..
Vijaya Karnataka Web sullia mla s angara drinking tea in small hotel in mangaluru sullia
ಸಚಿವರಾದ್ರೂ ಸರಳತೆ ಬಿಡದ ಎಸ್. ಅಂಗಾರ; ಸಣ್ಣ ಹೋಟೆಲ್ ನಲ್ಲಿ ಕಲ್ತಪ್ಪ ತಿನ್ನುತ್ತಿರುವ ಫೋಟೋ ವೈರಲ್!


ಆರು ಬಾರಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿರುವ ಸುಳ್ಯ ಕ್ಷೇತ್ರದ ಶಾಸಕ ಎಸ್ ಅಂಗಾರ ಅವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಸಂಪುಟದಲ್ಲಿ ಸಚಿವರಾಗಿದ್ದಾರೆ. ಬಿಜೆಪಿಯ ಭದ್ರಕೋಟೆ ಎನಿಸಿರುವ ಸುಳ್ಯದ ಅಪ್ಪಟ ಬಂಗಾರ ಎಸ್ ಅಂಗಾರರವರು 6 ಬಾರಿ ಗೆದ್ದ ಶಾಸಕರಾದ್ರೂ ಇಷ್ಟೊಂದು ಸರಳತೆಯೇ ಅನ್ನುವ ಪ್ರಶ್ನೆಗೆ ಉತ್ತರವಾಗಿ ಬದುಕುತ್ತಿರುವವರು ಅವರು..!!
ಜ.18ರಂದು ಮಂಗಳೂರಿನಿಂದ ಅವರು ಸುಳ್ಯಕ್ಕೆ ಬರುತ್ತಿದ್ದಾಗ ಮಾರ್ಗ ಮಧ್ಯೆ ಕಾರಿನಿಂದ ಇಳಿದು ಕನಕಮಜಲಿನಿಂದ ಸ್ವಲ್ಪ ಮುಂದೆ ಅಮ್ಚಿನಡ್ಕ ಎಂಬಲ್ಲಿರುವ ಸಣ್ಣ ಹೋಟೆಲ್ ನಲ್ಲಿ ಕಲ್ತಪ್ಪ ತಿಂದು, ಟೀ ಕುಡಿದಿದ್ದಾರೆ. ಈ ಪೋಟೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ರಾರಾಜಿಸುತ್ತಿದೆ.. ಎಲ್ಲರೂ ಅಂಗಾರರ ಸರಳತೆಯನ್ನು ಮೆಚ್ಚಿ ಕೊಂಡಾಡಿದ್ದಾರೆ. ಅನೇಕರು ಅಂಗಾರ ಅವರನ್ನು ಒಡಿಸ್ಸಾದ ಬಲಸೋರ್ ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಚಂದ್ರ ಸಾರಂಗಿ ಅವರಿಗೆ ಹೋಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಮೊನ್ನೆಯಷ್ಟೇ ಅಂಗಾರರವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಬರೋಬ್ಬರಿ ಸುಮಾರು ಎರಡು ವರ್ಷಗಳ ಬಳಿಕ ರಾಜ್ಯ ಸಚಿವ ಸಂಪುಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿದೆ. ಬಿ.ಎಸ್‌ ಯಡಿಯೂರಪ್ಪನವರ ನಾಲ್ಕನೇ ಅವಧಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕ ಎಸ್‌. ಅಂಗಾರ ಅವರಿಗೆ ಸಚಿವ ಭಾಗ್ಯ ಒಲಿದು ಬಂದಿದೆ. ಮಿನಿಸ್ಟರ್ ಆದ್ರೂ ಅವ್ರ ನಯ, ವಿನಯ, ಸರಳತೆ ಹಾಗೆಯೇ ಇದ್ದು, ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ