ಆ್ಯಪ್ನಗರ

ರಾತ್ರಿ ಮಲಗಿದ್ದ ಮಹಿಳೆಯರ ಮೈಮೇಲಿನಿಂದ ಚಿನ್ನಾಭರಣ ದೋಚಿದ ಖದೀಮರು, ಸುಳ್ಯದಲ್ಲಿ 2ನೇ ಪ್ರಕರಣ!

ಮನೆಯ ಹಿಂಬಾಗಿಲಿನ ಕಿಟಕಿಯ ಮೂಲಕ ಸಾಧನಾ ಬಳಸಿ ಬಾಗಿಲು ತೆರೆದು ಡೈನಿಂಗ್ ಹಾಲಿನಲ್ಲಿ ಮಲಗಿದ್ದ ಅಬ್ದುಲ್ಲಾರ ಮಗಳು ಸಮೀಮಾ ಎಂಬವರ ಕುತ್ತಿಗೆಯಲ್ಲಿದ್ದ 8 ಗ್ರಾಂ ಚಿನ್ನದ ಸರ ಹಾಗೂ ಅಲ್ಲೇ ಪಕ್ಕದಲ್ಲಿ ಮಲಗಿದ್ದ ಅಬ್ದುಲ್ಲಾರ ಮೊಮ್ಮಗಳು ಫಾತಿಮಾ ಸಿಮ್ರಾಳ ಕುತ್ತಿಗೆ ಯಲ್ಲಿದ್ದ 2 ಗ್ರಾಂ ಚಿನ್ನದ ಸರವನ್ನು ಕಳವು ಮಾಡಲಾಗಿದೆ. ​​ಕಳವಾದ ಚಿನ್ನಾಭರಣಗಳ ಮೌಲ್ಯ 40,000 ಎಂದು ಅಂದಾಜಿಸಲಾಗಿದೆ. ಈ ಕುರಿತು ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Vijaya Karnataka Web 25 Jan 2021, 10:23 am
ಸುಳ್ಯ/ ಸವಣೂರು: ಸವಣೂರು ಗ್ರಾಮದ ಗುಂಡಿಲ ಎಂಬಲ್ಲಿ ಮನೆಯ ಹಿಂಬಾಗಿಲಿನ ಮೂಲಕ ಮನೆಯೊಳಗೆ ಪ್ರವೇಶಿಸಿ ಮನೆಯಲ್ಲಿ ಮಲಗಿದ್ದವರ ಮೈಮೇಲಿದ್ದ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ. ಸವಣೂರು ಗ್ರಾಮದ ಗುಂಡಿಲ ಅಬ್ದುಲ್ಲಾರ ಮನೆಯಲ್ಲಿ ಈ ಘಟನೆ ನಡೆದಿದೆ.
Vijaya Karnataka Web thieft theif burglars
Representative image


ಮನೆಯ ಹಿಂಬಾಗಿಲಿನ ಕಿಟಕಿಯ ಮೂಲಕ ಸಾಧನಾ ಬಳಸಿ ಬಾಗಿಲು ತೆರೆದು ಡೈನಿಂಗ್ ಹಾಲಿನಲ್ಲಿ ಮಲಗಿದ್ದ ಅಬ್ದುಲ್ಲಾರ ಮಗಳು ಸಮೀಮಾ ಎಂಬವರ ಕುತ್ತಿಗೆಯಲ್ಲಿದ್ದ 8 ಗ್ರಾಂ ಚಿನ್ನದ ಸರ ಹಾಗೂ ಅಲ್ಲೇ ಪಕ್ಕದಲ್ಲಿ ಮಲಗಿದ್ದ ಅಬ್ದುಲ್ಲಾರ ಮೊಮ್ಮಗಳು ಫಾತಿಮಾ ಸಿಮ್ರಾಳ ಕುತ್ತಿಗೆ ಯಲ್ಲಿದ್ದ 2 ಗ್ರಾಂ ಚಿನ್ನದ ಸರವನ್ನು ಕಳವು ಮಾಡಲಾಗಿದೆ. ಕಳವಾದ ಚಿನ್ನಾಭರಣಗಳ ಮೌಲ್ಯ 40,000 ಎಂದು ಅಂದಾಜಿಸಲಾಗಿದೆ. ಈ ಕುರಿತು ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಮಲಗಿದ್ದಲ್ಲಿಂದ 2ನೇ ಕಳವು ಪ್ರಕರಣ
ಮನೆಮಂದಿ ಮಲಗಿದ್ದಲಿಂದಲೇ ಮೈಮೇಲೆ ಧರಿಸಿದ್ದ ಚಿನ್ನಾಭರಣ ಕಳವುಗೈದ ಪ್ರಕರಣ ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದೇ ವಾರದಲ್ಲಿ ನಡೆದ 2ನೇ ಪ್ರಕರಣವಾಗಿದೆ. ಕೆಲದಿನಗಳ ಹಿಂದೆ ಬೆಳಂದೂರು ಗ್ರಾಮದ ಬನಾರಿ ಯಾಕೂಬ್ ಅವರ ಪತ್ನಿ ತಾಜುನ್ನಿಸಾ ಎಂಬುವವರ ಮನೆಯ ಹಿಂಬಾಗಿಲಿನ ಚಿಲಕವನ್ನು ಪಕ್ಕದಲ್ಲಿರುವ ಕಿಟಕಿ ಮುಖಾಂತರ ಯಾವುದೋ ಸಾಧನದಿಂದ ತೆರೆದು ಮನೆಯ ಒಳಗೆ ಪ್ರವೇಶಿಸಿದ ಖದೀಮರು,

ಪತ್ನಿಯ ಕೊಲೆಗೆ ಯತ್ನ ಆರೋಪ: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತನ ಮೇಲೆ FIR

ಮಧ್ಯದ ಕೋಣೆಯಲ್ಲಿ ಮಲಗಿದ್ದ ತಾಜುನ್ನಿಸ ಅವರ ಕಾಲಿನಲ್ಲಿದ್ದ ಸುಮಾರು 12 ಗ್ರಾಂ ತೂಕದ ಚಿನ್ನದ ಕಾಲು ಚೈನು ಹಾಗೂ ಪಕ್ಕದಲ್ಲಿದ್ದ ಅವರ ಮಗು ತೋಈಬಾ ಅವಳ ಕುತ್ತಿಗೆಯಲ್ಲಿ ಸುಮಾರು 6 ಗ್ರಾಂ ತೂಕದ ಸಣ್ಣ ಪೆಂಡೆಂಟ್ ಇರುವ ಚಿನ್ನದ ಚೈನನ್ನು ಕಳವು ಮಾಡಿದ್ದರು. ಈ ಎರಡೂ ಪ್ರಕರಣ ಗಮನಿಸುವಾಗ ಯಾವುದೋ ಮತ್ತು ಬರಿಸುವ ಔಷಧ ಸಿಂಪಡನೆ ಅಥವಾ ಬೇರೆ ಏನಾದರೂ ಮಾಡಿ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ