ಆ್ಯಪ್ನಗರ

ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗೆ ಶುಲ್ಕ: ತೀವ್ರ ವಿರೋಧ

ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ಸ್ಥಳೀಯ ಖಾಸಗಿ ವಾಹನಗಳ ಸುಂಕ ವಿನಾಯಿತಿ ರದ್ದುಗೊಳಿಸಿ ಜು.16 ರಿಂದ ಕಡ್ಡಾಯ ಶುಲ್ಕ ಸಂಗ್ರಹಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿರುವುದಕ್ಕೆ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.

Vijaya Karnataka 13 Jul 2019, 5:00 am
ಮಂಗಳೂರು : ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ಸ್ಥಳೀಯ ಖಾಸಗಿ ವಾಹನಗಳ ಸುಂಕ ವಿನಾಯಿತಿ ರದ್ದುಗೊಳಿಸಿ ಜು.16 ರಿಂದ ಕಡ್ಡಾಯ ಶುಲ್ಕ ಸಂಗ್ರಹಿಸಲು ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿರುವುದಕ್ಕೆ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತಪಡಿಸಿದೆ.
Vijaya Karnataka Web surathkal toll gate
ಸುರತ್ಕಲ್‌ ಟೋಲ್‌ಗೇಟ್‌ನಲ್ಲಿ ಸ್ಥಳೀಯ ವಾಹನಗಳಿಗೆ ಶುಲ್ಕ: ತೀವ್ರ ವಿರೋಧ


ನಿಯಮದ ಪ್ರಕಾರ ಸುಂಕ ವಸೂಲಿಯೇ ಅಕ್ರಮವಾಗಿರುವ, ಸ್ವತಃ ಹೆದ್ದಾರಿ ಪ್ರಾಧಿಕಾರವೇ ಮುಚ್ಚಲು ತೀರ್ಮಾನ ಕೈಗೊಂಡಿರುವ ಟೋಲ್‌ಗೇಟ್‌ನಲ್ಲಿ ಯಾವುದೇ ಕಾರಣಕ್ಕೂ ಸ್ಥಳೀಯ ವಾಹನಗಳಿಂದ ಟೋಲ್‌ ಸಂಗ್ರಹಿಸಲು ಹೋರಾಟ ಸಮಿತಿ ಅವಕಾಶ ನೀಡುವುದಿಲ್ಲ. ಅಕ್ರಮ ವಸೂಲಿಗೆ ಪೊಲೀಸ್‌ ರಕ್ಷ ಣೆ ಒದಗಿಸುವ ಬದಲಿಗೆ ಜಿಲ್ಲಾಡಳಿತ ಅಕ್ರಮ ಟೋಲ್‌ ಗೇಟ್‌ ಮುಚ್ಚಲು ಕ್ರಮ ಕೈಗೊಳ್ಳಬೇಕು. ಮೂರು ತಿಂಗಳ ತಾತ್ಕಾಲಿಕ ಅವಧಿಗೆ ಆರಂಭಗೊಂಡ ಸುರತ್ಕಲ್‌ ಟೋಲ್‌ ಗೇಟ್‌ ಒಂಬತ್ತು ಕಿ.ಮೀ. ದೂರದ ಹೆಜಮಾಡಿ ಟೋಲ್‌ ಗೇಟ್‌ ಕಾರ್ಯಾಚರಣೆ ಆರಂಭಿಸಿದ ನಂತರವೂ ಮುಂದುವರಿಯುತ್ತಿರುವುದು ಅಕ್ರಮ. ಈ ಕುರಿತು ಜನಪರ ಸಂಘಟನೆಗಳು ಧ್ವನಿ ಎತ್ತಿದ ನಂತರ ಸುರತ್ಕಲ್‌ ಟೋಲ್‌ ಗೇಟನ್ನು ಹೆಜಮಾಡಿಯ ನವಯುಗ ಟೋಲ್‌ ಗೇಟ್‌ನೊಂದಿಗೆ ವಿಲೀನ ಗೊಳಿಸಲು ಹೆದ್ದಾರಿ ಪ್ರಾಧಿಕಾರ ತೀರ್ಮಾನ ಕೈಗೊಂಡಿದೆ. ಆದರೆ ಕೇಂದ್ರ ಹೆದ್ದಾರಿ ಸಚಿವರ ಕಾರ್ಯದರ್ಶಿ ಮಂಗಳೂರಿನಲ್ಲಿ ಸಭೆ ನಡೆಸಿ ಹೆಜಮಾಡಿ ನವಯುಗ ಟೋಲ್‌ ಫ್ಲಾಜಾದಲ್ಲಿ ಸುರತ್ಕಲ್‌ ಟೋಲ್‌ ಗೇಟ್‌ ವಿಲೀನಕ್ಕೆ ಕೆಲವು ತಾಂತ್ರಿಕ ಸಮಸ್ಯೆಗಳು ಇರುವುದರಿಂದ ಸುರತ್ಕಲ್‌ ಟೋಲ್‌ ಕೇಂದ್ರವನ್ನು ಬಂಟ್ವಾಳದ ಬ್ರಹ್ಮರ ಕೂಟ್ಲು ಟೋಲ್‌ ಕೇಂದ್ರದಲ್ಲಿ ವಿಲೀನಗೊಳಿಸಿ ಸುರತ್ಕಲ್‌ ಟೋಲ್‌ ಕೇಂದ್ರ ಮುಚ್ಚಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಸಮ್ಮುಖ ಹೇಳಿಕೆ ನೀಡಿದ್ದರು.ಆದರೆ ಆ ಪ್ರಸ್ತಾಪವನ್ನು ಜಾರಿಗೆ ತಂದಿಲ್ಲ. ಪೊಲೀಸ್‌ ಬಲದೊಂದಿಗೆ ಟೋಲ್‌ ಸಂಗ್ರಹಕ್ಕೆ ಮುಂದಾದರೆ ತೀವ್ರ ಪ್ರತಿಭಟನೆಯನ್ನು ಸ್ಥಳೀಯ ಜನಪರ ಸಂಘಟನೆಗಳ ಜತೆ ಸೇರಿ ನಡೆಸಲಾಗುವುದು ಹಾಗೂ ಟೋಲ್‌ ಸಂಗ್ರಹ ತಡೆಯಲಾಗುವುದು ಎಂದು ಸಮಿತಿ ಸಂಚಾಲಕ ಮುನೀರ್‌ ಕಾಟಿಪಳ್ಳ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ