ಆ್ಯಪ್ನಗರ

ಸಂಸ್ಕ್ಕೃತಿಯ ಸಮಗ್ರತೆಯ ಪ್ರತೀಕ ಯಕ್ಷಗಾನ

ಸಂಸ್ಕೃತಿಯ ಸಮಗ್ರತೆಯ ರೂಪವೇ ಯಕ್ಷಗಾನ. ಕಟೀಲು ದೇವಿಗೆ ಪ್ರೀತ್ಯರ್ಥವಾದ ಯಕ್ಷಗಾನ ಸೇವೆ ನಿರಂತರ ನಡೆಯುತ್ತಿರುವುದು ಯಕ್ಷಗಾನದ ವಿಷ್ಯಕ್ಕೂ ಶ್ರೆಯಸ್ಸು ಎಂದು ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳದ ಆನುವಂಶಿಕ ಮೊಕ್ತೇಸರ ಹಾಗೂ ಅರ್ಚಕ ವಾಸುದೇವ ಆಸ್ರಣ್ಣ ಹೇಳಿದರು.

Vijaya Karnataka 17 Sep 2019, 5:00 am
ಬಜಪೆ: ಸಂಸ್ಕೃತಿಯ ಸಮಗ್ರತೆಯ ರೂಪವೇ ಯಕ್ಷಗಾನ. ಕಟೀಲು ದೇವಿಗೆ ಪ್ರೀತ್ಯರ್ಥವಾದ ಯಕ್ಷಗಾನ ಸೇವೆ ನಿರಂತರ ನಡೆಯುತ್ತಿರುವುದು ಯಕ್ಷಗಾನದ »ವಿಷ್ಯಕ್ಕೂ ಶ್ರೆಯಸ್ಸು ಎಂದು ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳದ ಆನುವಂಶಿಕ ಮೊಕ್ತೇಸರ ಹಾಗೂ ಅರ್ಚಕ ವಾಸುದೇವ ಆಸ್ರಣ್ಣ ಹೇಳಿದರು.
Vijaya Karnataka Web talamaddale saptaha inaugarated
ಸಂಸ್ಕ್ಕೃತಿಯ ಸಮಗ್ರತೆಯ ಪ್ರತೀಕ ಯಕ್ಷಗಾನ


ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಳದ ಆಶ್ರಯದಲ್ಲಿಸೆ.16 ರಿಂದ 22 ರವರೆಗೆ ನಡೆಯಲಿರುವ 15 ನೇ ವರ್ಷದ ತಾಳಮದ್ದಳೆ ಸಪ್ತಾಹ ಸಿದ್ಧ್ದಿ: ಸತ್ವೇ ಭವತಿ ಸರಣಿæಗೆ ದೇವಳದ ಸರಸ್ವತೀ ಸದನದಲ್ಲಿಚಾಲನೆ ನೀಡಿ ಶುಭ ಹಾರೈಸಿದರು.

ದೇವಳದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ಪಂಜ ವಾಸುದೇವ ಭಟ್‌,ಉದ್ಯಮಿ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಕಟೀಲು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಲೋಕಯ್ಯ ಸಾಲ್ಯಾನ್‌, ಬಂಟ್ವಾಳ ಎಲ್‌ .ಡಿ ಬ್ಯಾಂಕ್‌ನ ಅಧ್ಯಕ್ಷ ಸುದರ್ಶನ್‌ ಜೈನ್‌, ಅರಸು ಕುಂಜರಾಯ ದೈವಸ್ಥಾನ ಕೊಡೆತ್ತೂರು ಇಲ್ಲಿನ ಮುಕ್ಕಾಲ್ದಿ ಜಯರಾಮ ಶೆಟ್ಟಿ,ಕಟೀಲು ವಿಜಯ ಬ್ಯಾಂಕ್‌ ನ ಶಾಖಾ ಪ್ರಬಂಧಕ ಶ್ಯಾಮ್‌ ಸ್ವರೂಪ್‌ ಕೆ, ಯಕ್ಷ ಪ್ರಭಾ ಮಾಸ ಪತ್ರಿಕೆಯ ಸಂಪಾದಕ ಕೆ.ಎಲ್‌. ಕುಂಡಂತಾಯ ಉಪಸ್ಥಿತರಿದ್ದರು. ವಾಸುದೇವ ಶೆಣೈ ನಿರೂಪಿಸಿದರು.

ಸಪ್ತಾಹದ ಆರಂಭದಲ್ಲಿಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿಯಕ್ಷಗಾನ ಕವಿ ಶ್ರೀಧರ್‌ ಡಿ .ಎಸ್‌. ರಚಿಸಿದ ಭೃಗುಶಾಪ ಪ್ರಸಂಗದ ತಾಳಮದ್ದಳೆ ಪ್ರದರ್ಶನ ಗೊಂಡಿತು.

ಪ್ರತಿದಿನ ಸಂಜೆ 4 ರಿಂದ ತಾಳಮದ್ದಳೆ ಪ್ರಾರಂಭಗೊಳ್ಳಲಿದ್ದು ಸೆ.17 ಮಂಗಳವಾರ ಕೌಶಿಕ ಚರಿತ್ರೆ -ತ್ರಿಶಂಕು ಸ್ವರ್ಗ ,ಸೆ.18 ಅಂಬರೀಷ ಚರಿತ್ರೆ, ಸೆ.19 ಇಂದ್ರಜಿತು ಕಾಳಗ, ಸೆ.20 ಭೀಷ್ಮ ಪ್ರತಿಜ್ಞೆ, ಸೆ.21 ದೂರ್ವಾಸಾತಿಥ್ಯ, ಸೆ.22 ಭಾನುವಾರ ಬೆಳಗ್ಗೆ 9 ರಿಂದ ಆಗ್ರ ಪೂಜೆ,ಮಧ್ಯಾಹ್ನ 2 ರಿಂದ ಊರ್ವಶಿ ಶಾಪ, ಸಂಜೆ 5:30ರಿಂದ ಪಾರ್ಥ ಸಾರಥ್ಯ ಪ್ರಸಂಗಗಳ ತಾಳ ಮದ್ದಳೆ ನಡೆಯಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ