ಆ್ಯಪ್ನಗರ

ಪ್ರಾಥಮಿಕ ಶಿಕ್ಷಕರ ಕಡ್ಡಾಯ ವರ್ಗಾವಣೆ ವಿರೋಧಿಸಿ ಆನ್‌ಲೈನ್ ಕೌನ್ಸಲಿಂಗ್ ಬಹಿಷ್ಕರಿಸಿದ ಶಿಕ್ಷಕರು

ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳಿಂದ ಸುಮಾರು 85 ಮಂದಿ ಶಿಕ್ಷಕರು ಆಗಮಿಸಿದ್ದರು. ರಾಜ್ಯ ಮಟ್ಟದ ಆನ್ ಲೈನ್ ಕೌನ್ಸಿಲಿಂಗ್ ಆರಂಭವಾದರೂ ಕೇವಲ 10 ಮಂದಿ ಶಿಕ್ಷಕರು ಮಾತ್ರ ಪಾಲ್ಗೊಂಡರು.

Vijaya Karnataka Web 7 Sep 2019, 2:38 pm
ಮಂಗಳೂರು: ಪ್ರಾಥಮಿಕ ಶಿಕ್ಷಕರ ಕಡ್ಡಾಯ ವರ್ಗಾವಣೆ ವಿರೋಧಿಸಿ ಶಿಕ್ಷಕರು ಶನಿವಾರ ನಗರದಲ್ಲಿ ಆನ್‌ಲೈನ್ ಮೂಲಕ ಆರಂಭಗೊಂಡ ಕೌನ್ಸಲಿಂಗ್ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
Vijaya Karnataka Web Teacher 2


ನಗರದ ಲೇಡಿಹಿಲ್ ಸ್ಕೂಲ್ ನಲ್ಲಿ ಆಯೋಜಿಸಿದ ಎರಡು ದಿನಗಳ ಕೌನ್ಸಲಿಂಗನ್ನು ಬಹುತೇಕ ಶಿಕ್ಷಕರು ವಿರೋಧಿಸಿ ಪ್ರತಿಭಟನೆ ನಡೆಸಿದರು.

ಜಿಲ್ಲೆಯ ಮಂಗಳೂರು, ಬಂಟ್ವಾಳ, ಬೆಳ್ತಂಗಡಿ, ಪುತ್ತೂರು ಹಾಗೂ ಸುಳ್ಯ ತಾಲೂಕುಗಳಿಂದ ಸುಮಾರು 85 ಮಂದಿ ಶಿಕ್ಷಕರು ಆಗಮಿಸಿದ್ದರು. ರಾಜ್ಯ ಮಟ್ಟದ ಆನ್ ಲೈನ್ ಕೌನ್ಸಿಲಿಂಗ್ ಆರಂಭವಾದರೂ ಕೇವಲ 10 ಮಂದಿ ಶಿಕ್ಷಕರು ಮಾತ್ರ ಪಾಲ್ಗೊಂಡರು. ಮಿಕ್ಕವರು ಕಡ್ಡಾಯ ವರ್ಗಾವಣೆ ಕಾನೂನನ್ನು ವಿರೋಧಿಸಿ ಕೌನ್ಸಲಿಂಗ್ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ಕರ್ನಾಟಕ ಶಿಕ್ಷಕರ ವರ್ಗಾವಣೆ ಕಾಯಿದೆ 2016-17ರ ಪ್ರಕಾರ ಎ ವಲಯದಲ್ಲಿ 10 ವರ್ಷಕ್ಕಿಂತ ಮೇಲ್ಪಟ್ಟು ಸೇವೆ ಸಲ್ಲಿಸಿದರ ಶಿಕ್ಷಕರನ್ನು ಸಿ ವಲಯಕ್ಕೆ ವರ್ಗಾವಣೆ ಮಾಡುವುದು ಕಡ್ಡಾಯವಾಗಿದೆ. ಎ ವಲಯ ನಗರ ಪ್ರದೇಶವಾದರೆ, ಸಿ ವಲಯ ಗ್ರಾಮೀಣ ಪ್ರದೇಶವಾಗಿದೆ. ಬಿ ವಲಯವು ನಗರದಿಂದ 3 ಕಿಮೀ. ದೂರದ ಪ್ರದೇಶವಾಗಿದೆ.

ರಾಜ್ಯ ಶಿಕ್ಷಣ ಇಲಾಖೆಯು ಸೆ.7ಮತ್ತು 8ರಂದು ಕೌನ್ಸಲಿಂಗ್ ನಡೆಸಲು ನಿರ್ಧರಿಸಿದಂತೆ ಶನಿವಾರ ಇಡೀ ರಾಜ್ಯದಲ್ಲಿ ಏಕಕಾಲದಲ್ಲಿ ಆನ್ ಲೈನ್ ಕೌನ್ಸಲಿಂಗ್ ಆರಂಭಗೊಂಡಿದೆ. ಕಡ್ಡಾಯ ವರ್ಗಾವಣೆಯನ್ನು ಶಿಕ್ಷಕರು ವಿರೋಧಿಸುವ ಹಿನ್ನೆಲೆಯಲ್ಲಿ ಈ ಹಿಂದೆ 7 ಬಾರಿ ನಿಗದಿಪಡಿಸಿದ ಕೌನ್ಸಲಿಂಗ್ ರದ್ದುಗೊಂಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ