ಆ್ಯಪ್ನಗರ

ಉಳ್ಳಾಲ: ಗುಂಡಿನ ದಾಳಿಗೆ ಕಾರಣವಾದ ವಾಟ್ಸ್‌ಆ್ಯಪ್ ಸ್ಟೇಟಸ್

ರಾಜಕೀಯಕ್ಕೆ ಸಂಬಂಧಿಸಿದ ವಾಟ್ಸ್‌ಆ್ಯಪ್ ಸ್ಟೇಟಸ್ ತರುಣನೊಬ್ಬನ ಮೇಲೆ ಮಾರಣಾಂತಿಕ ದಾಳಿಗೆ ಕಾರಣವಾಗಿದೆ.

Vijaya Karnataka Web 23 Sep 2019, 8:02 am
ಮಂಗಳೂರು: ವಾಟ್ಸಪ್ ಸ್ಟೇಟಸ್ ಒಂದು ಮಾರಣಾಂತಿಕ ದಾಳಿಗೆ ಕಾರಣವಾದ ಘಟನೆ ದಕ್ಷಿಣ ಕನ್ನಡದಲ್ಲಿ ನಡೆದಿದೆ.
Vijaya Karnataka Web Shoot


ಉಳ್ಳಾಲದಲ್ಲಿ ಭಾನುವಾರ ರಾತ್ರಿ ಈ ಕೃತ್ಯ ನಡೆದಿದ್ದು ಕಾರಿನಲ್ಲಿ ಬಂದ ತಂಡವೊಂದು ಗುಂಡು ಹಾರಾಟ ನಡೆಸಿದ ಪರಿಣಾಮ ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾನೆ.

ಉಳ್ಳಾಲದ ಕಿಲೆಂಜೂರು ಇರ್ಷಾದ್(17) ಗಾಯಗೊಂಡವರು.

ರಾಜಕೀಯ ಪಕ್ಷದ ಮುಖಂಡ ಸೊಹೈಲ್ ಕಂದಕ್ ಮತ್ತು ತಂಡ ದಾಳಿ ನಡೆಸಿದೆ ಎಂದು ತಿಳಿದು ಬಂದಿದೆ. ರಾಜಕೀಯಕ್ಕೆ ಸಂಬಂಧಿಸಿದ ವಾಟ್ಸಪ್ ಸ್ಟೇಟಸ್ ವಿಚಾರದಲ್ಲಿ ಮಾತುಕತೆಗಾಗಿ ಕಂದಕ್ ಸೇರಿದಂತೆ 7ಮಂದಿಯ ತಂಡ ಕಿಲೇರಿಯಾ ಯುವಕರ ಬಳಿ ಮಾತುಕತೆಗೆ ತೆರಳಿತ್ತು. ಈ ಸಂದರ್ಭ ತಂಡಗಳ ಮಧ್ಯೆ ವಾಗ್ವಾದ ನಡೆದಿದ್ದು, ಬಳಿಕ ಗುಂಡು ಹಾರಾಟ ನಡೆಯಿತೆಂದು ತಿಳಿದು ಬಂದಿದೆ. ಇದರ ಪರಿಣಾಮ ಇರ್ಷಾದ್ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ‌.

ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗೆ ಶೋಧ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ