ಆ್ಯಪ್ನಗರ

ಅಬ್ಬಾ ಏನು ಸೆಕೆ! ಮಂಗಳೂರಿನಲ್ಲಿ 38.4 ಡಿಗ್ರಿ ಸೆಲ್ಸಿಯಸ್‌ ತಾಪಮಾನ

ಫೆ.22ರಂದು 38.4 ಡಿಗ್ರಿ ಸೆಲ್ಸಿಯಸ್‌ ದಾಖಲೆಯಾಗಿದೆ. ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕುಗಳಲ್ಲಿ ಕೂಡ ಶುಕ್ರವಾರ ವಿಪರೀತ ಸೆಕೆ ಜನರನ್ನು ಬಾಧಿಸಿದೆ.

Vijaya Karnataka Web 23 Feb 2019, 8:27 am
ಮಂಗಳೂರು: ಕರಾವಳಿಯಲ್ಲಿ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲೇ ಬಿಸಿಲಿನ ಝಳ ತೀವ್ರಗೊಂಡಿದೆ. ಮಂಗಳೂರಿನಲ್ಲಿ ಸರಾಸರಿ 30-32 ಡಿಗ್ರಿ ಸೆಲ್ಸಿಯಸ್‌ ಆಸುಪಾಸಿನಲ್ಲಿ ಇರಬೇಕಾದ ತಾಪಮಾನ ಶುಕ್ರವಾರ 38.4 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡಿದೆ. ಬಿಸಿಲಿನ ಝಳದ ಜತೆಗೆ ವಿಪರೀತ ಸೆಕೆ ಮಂಗಳೂರಿಗರು 'ಅಬ್ಬಾ ಸೆಖೆ' ಎಂದು ಕೈ ಹಿಚುಕುವಂತೆ ಮಾಡಿದೆ.
Vijaya Karnataka Web MNG


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗುವ ಮುನ್ನವೇ ಬಿಸಿಲಿನ ಝಳ ತೀವ್ರವಾಗಿತ್ತು. ಕಳೆದ ವರ್ಷ ಮಾರ್ಚ್‌ ತಿಂಗಳ ಮೊದಲ ದಿನವೇ ದಿನದ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿ ಹೊಸ ದಾಖಲೆಯನ್ನೇ ಬರೆದಿತ್ತು. ಇದೀಗ ಫೆ.22ರಂದು 38.4 ಡಿಗ್ರಿ ಸೆಲ್ಸಿಯಸ್‌ ದಾಖಲೆಯಾಗಿದೆ. ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಹಾಗೂ ಸುಳ್ಯ ತಾಲೂಕುಗಳಲ್ಲಿ ಕೂಡ ಶುಕ್ರವಾರ ವಿಪರೀತ ಸೆಕೆ ಜನರನ್ನು ಬಾಧಿಸಿದೆ.

2017ರಲ್ಲಿ ಫೆ.16ರಂದು ಗರಿಷ್ಠ ತಾಪಮಾನ 38.7 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿತ್ತು. 2018 ಮಾ.1ರಂದು ಹಿಂದಿನ ದಾಖಲೆಗಳನ್ನು ಮುರಿದು 39 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು.

ಕರಾವಳಿ ಜಿಲ್ಲೆಗಳಲ್ಲಿ ಜನವರಿ ಅಂತ್ಯದವರೆಗೂ ಅಷ್ಟೇನು ಉಷ್ಣಾಂಶ ಏರಿಕೆಯಾಗಿರಲಿಲ್ಲ. ಫೆಬ್ರವರಿಯಲ್ಲಿ ತಾಪಮಾನ ಏರಿಕೆಯಾಗಲಾರಂಭಿಸಿತು. ಶುಕ್ರವಾರ ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪರೀತ ಸೆಕೆ ಜನರನ್ನು ಬಾಧಿಸಿದೆ. ವಿಪರೀತ ಸೆಕೆಯಿಂದ ಮನೆ, ಕಚೇರಿಗಳಲ್ಲಿ ಜನರು ಚಡಪಡಿಸಲಾರಂಭಿಸಿದ್ದಾರೆ.

ಏನು ಕಾರಣ?
ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ,
ಪಶ್ಚಿಮಘಟ್ಟ, ನದಿ ಮೂಲಕ್ಕೆ ಹಾನಿ,
ಪ್ರಾಕೃತಿಕ ಸಂಪತ್ತು ಲೂಟಿ,
ಬೃಹತ್‌ ಕೈಗಾರಿಕೆಗಳು.

ಮಂಗಳೂರು ಸಮುದ್ರ ತೀರದ ನಗರವಾಗಿರುವುದರಿಂದ ಇಲ್ಲಿ ಆದ್ರ್ರತೆ ಪ್ರಮಾಣ ಹೆಚ್ಚಾಗಿರುತ್ತದೆ. ಇದರಿಂದ ಹೆಚ್ಚಿನ ದಿನಗಳು ಇಲ್ಲಿ ಸೆಕೆಯ ವಾತಾವರಣ ಇರುತ್ತದೆ. ಇದರ ಜತೆಗೆ ಫೆಬ್ರವರಿಯಿಂದ ದಿನದ ತಾಪಮಾನದಲ್ಲಿ ಏರಿಕೆಯಾಗುವುದರಿಂದ ಕರಾವಳಿಯಲ್ಲಿ ವಿಪರೀತ ಉಷ್ಣತೆ ಇರುತ್ತದೆ.
ಪ್ರೊ. ಸಿ.ಎನ್‌. ಪ್ರಭು, ವಿಜ್ಞಾನಿ, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬೆಂಗಳೂರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ