ಆ್ಯಪ್ನಗರ

ರೈತರಿಗೆ ಸವಲತ್ತು ವಿತರಿಸಲು 400 ಕೋಟಿ ರೂಪಾಯಿ ಅನುದಾನ : ಸಚಿವ ನಾರಾಯಣ ಗೌಡ

ತೋಟಗಾರಿಕಾ ಇಲಾಖೆಯಿಂದ ರೈತರಿಗೆ ನೀಡುವ ಸವಲತ್ತು ಒದಗಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದನ್ನು ಮನಗಂಡ ಸರ್ಕಾರ ನೇರವಾಗಿ ರೈತರಿಗೆ ಸವಲತ್ತು ನೀಡುವ ನಿಟ್ಟಿನಲ್ಲಿ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ತೋಟಗಾರಿಕೆ ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಹೇಳಿದರು

Vijaya Karnataka Web 26 Aug 2020, 5:59 pm
ಪುತ್ತೂರು: ಸರ್ಕಾರದ ಸವಲತ್ತುಗಳನ್ನು ನೇರವಾಗಿ ರೈತರಿಗೆ ನೀಡುವ ನಿಟ್ಟಿನಲ್ಲಿ400 ಕೋಟಿ ರೂ. ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ ಎಂದು ರಾಜ್ಯ ಪೌರಾಡಳಿತ, ರೇಷ್ಮೆ ಹಾಗೂ ತೋಟಗಾರಿಕೆ ಸಚಿವ ಡಾ. ಕೆ.ಸಿ. ನಾರಾಯಣ ಗೌಡ ಹೇಳಿದರು.
Vijaya Karnataka Web narayana gowda


ಪುತ್ತೂರಿನಲ್ಲಿ ದ್ವಿಚಕ್ರಕ್ಕೆ ಅಡ್ಡ ಬಂದ ಶ್ವಾನ..! ವಾಹನ ಪಲ್ಟಿಯಾಗಿ ಹಿಂಬದಿ ಸವಾರ ಸಾವು..!

ಪುತ್ತೂರಿನಲ್ಲಿ ಬುಧವಾರ ಮಾಧ್ಯಮದ ಜತೆ ಮಾತನಾಡಿದ ಅವರು, ತೋಟಗಾರಿಕಾ ಇಲಾಖೆಯಿಂದ ರೈತರಿಗೆ ನೀಡುವ ಸವಲತ್ತು ಒದಗಿಸುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಇದನ್ನು ಮನಗಂಡ ಸರ್ಕಾರ ನೇರವಾಗಿ ರೈತರಿಗೆ ಸವಲತ್ತು ನೀಡುವ ನಿಟ್ಟಿನಲ್ಲಿ 400 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದೆ ಎಂದರು.

ಮಹಾತ್ಮಾ ಗಾಂಧೀಜಿ ಅವರ ಪೂರ್ಣ ಆಶೀರ್ವಾದ ಮೋದಿ ಸರಕಾರದ ಮೇಲಿದೆ : ನಳಿನ್ ಕುಮಾರ್ ಕಟೀಲ್

ಸಲಕರಣೆಗಳನ್ನು ರೈತರಿಗೆ ಉತ್ಪಾದನಾ ಕಂಪನಿಗಳ ಮೂಲಕ ನೇರವಾಗಿ ತಲುಪಿಸಲು ಸರಕಾರ ನಿರ್ಧರಿಸಿದೆ ಎಂದ ಅವರು, ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ ಕೊಂಚ ವಿಳಂಬವೂ ಆಗಿದೆ. ಈಗ ಎಲ್ಲಅಡೆತಡೆ ನಿವಾರಣೆಯಾಗಿದೆ. ಪ್ರಕ್ರಿಯೆ ಪೂರ್ಣಗೊಳಿಸಿ ಸಂಪುಟದ ಒಪ್ಪಿಗೆ ನೀಡಲಾಗಿದ್ದು, ಅನುದಾನ ಮಂಜೂರಾಗಿದೆ ಎಂದು ಹೇಳಿದರು.

ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್‌ ಯೋಜನೆಯಲ್ಲಿ 150 ಕೋಟಿ ರೂ ಮಂಜೂರಾಗಿದೆ : ಕಟೀಲ್

ಇನ್ನು ಪುತ್ತೂರು ನಗರಸಭೆಯಲ್ಲಿ ಶೇ.60ಕ್ಕೂ ಅಧಿಕ ಹುದ್ದೆ ಖಾಲಿ ಇರುವ ಬಗ್ಗೆ ಗಮನ ಸೆಳೆದಾಗ ಉತ್ತರಿಸಿದ ಅವರು, ಹುದ್ದೆಗಳ ಭರ್ತಿಗೆ ಪ್ರಕ್ರಿಯೆ ಆರಂಭವಾಗಲಿದೆ. ರಾಜ್ಯದೆಲ್ಲೆಡೆ ಈ ಉಪಕ್ರಮಕ್ಕೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ