ಆ್ಯಪ್ನಗರ

ಶಿಶಿಲ-ಭೈರಾಪುರ ರಸ್ತೆ ನಿರ್ಮಾಣಕ್ಕೆ ಬ್ರೇಕ್..! ನೆಲ್ಯಾಡಿ-ಚಿಕ್ಕಮಗಳೂರು ಪ್ಯಾಕೇಜ್ ರದ್ದು..! ಪರಿಸರವಾದಿಗಳ ಹೋರಾಟಕ್ಕೆ ಜಯ

ಶಿಶಿಲ-ಭೈರಾಪುರ ರಸ್ತೆ ಆಗಲೇಬೇಕು ಎಂಬುದು ಸ್ಥಳೀಯರು ಮತ್ತು ರಾಜಕಾರಣಿಗಳ ಅಭಿಮತವಾಗಿತ್ತು. ರಸ್ತೆಗಾಗಿ 40 ವರ್ಷಗಳಿಂದ ಹೋರಾಟವೂ ನಡೆಯುತ್ತಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಕ್ಕೆ ಈಗಾಗಲೇ ಸಾಕಷ್ಟು ರಸ್ತೆಗಳು ಇರುವುದರಿಂದ ಅತಿಸೂಕ್ಷ್ಮ ಪರಿಸರಕ್ಕೆ ಹಾನಿ ಮಾಡಿ ಮತ್ತೊಂದು ಪರ್ಯಾಯ ರಸ್ತೆ ನಿರ್ಮಿಸುವ ಅಗತ್ಯವಿಲ್ಲಎಂಬುದು ಪರಿಸರವಾದಿಗಳ ನಿಲುವಾಗಿತ್ತು.

Vijaya Karnataka Web 10 Sep 2020, 2:15 pm
ಆರಗ ರವಿ ಚಿಕ್ಕಮಗಳೂರು
Vijaya Karnataka Web Shishila byrapur

ಮಂಗಳೂರು: ಉತ್ತರ ಭಾರತದೊಂದಿಗೆ ದಕ್ಷಿಣ ಭಾರತವನ್ನು ಬೆಸೆಯುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ಯೋಜನೆಗೆ ಹಿನ್ನಡೆಯಾಗಿದ್ದು, ಚಿತ್ರದುರ್ಗದಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ಚತುಷ್ಪಥ ರಸ್ತೆಯ(ರಾ.ಹೆ. 173) ಎರಡು ಪ್ಯಾಕೇಜ್‌ಗಳನ್ನು ಕೈಬಿಡುವಂತೆ ಹೈಕೋರ್ಟ್‌ ಆದೇಶಿಸಿದೆ.

ತೀವ್ರ ಶಿಥಿಲಗೊಂಡಿರುವ ಚಾರ್ಮಾಡಿ ಘಾಟಿ ರಸ್ತೆಗೆ ಪರ್ಯಾಯ ರಸ್ತೆ ನಿರ್ಮಾಣದ ಕನಸು ಕೂಡ ಭಗ್ನವಾಗಿದ್ದು, ಚಿತ್ರದುರ್ಗದಿಂದ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯ 4 ಪ್ಯಾಕೇಜ್‌ಗಳಲ್ಲಿ 2 ಪ್ಯಾಕೇಜ್‌ಗಳನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಬಿಟ್ಟಿದೆ. ಆ ಮೂಲಕ ರಸ್ತೆ ನಿರ್ಮಾಣದ ಹೆಸರಿನಲ್ಲಿ ಪರಿಸರದ ಒಡಲಿಗೆ ಕೊಡಲಿಯೇಟು ಹಾಕಲು ನಿಂತವರಿಗೆ ಹಿನ್ನಡೆಯಾಗಿದೆ.

ಎತ್ತಿನಹೊಳೆ ಯೋಜನೆ: ಮೊದಲ ಹಂತದ ಕಾಮಗಾರಿ ಮೇ ತಿಂಗಳ ಒಳಗಾಗಿ ಪೂರ್ಣ! ರಮೇಶ್ ಜಾರಕಿಹೊಳಿ

ಎರಡೂ ಪ್ಯಾಕೇಜ್‌ಗಳಿಂದ ಒಟ್ಟು 63ಕಿ.ಮೀ ರಸ್ತೆ ನಿರ್ಮಾಣವಾಗಬೇಕಿತ್ತು. 7 ಸಾವಿರ ಕೋಟಿ ರೂ. ವೆಚ್ಚದ 233ಕಿ.ಮೀ ಚತುಷ್ಪಥ ರಸ್ತೆ ನಿರ್ಮಿಸಿ ಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸುವ ಉದ್ದೇಶವನ್ನು ಹೊಂದಲಾಗಿತ್ತು. ನಂತರ ಈ ಮಾರ್ಗವನ್ನು ಉತ್ತರ ಭಾರತದೊಂದಿಗೆ ಬೆಸೆದು ವಾಣಿಜ್ಯ ಚಟುವಟಿಕೆಗೆ ಅವಕಾಶ ಮಾಡಿಕೊಡುವ ಗುರಿ ಇತ್ತು. ಪರಿಸರಕ್ಕಾಗುವ ಅಪರಿಮಿತ ಅನ್ಯಾಯ, ಬೃಹತ್ ಮರಗಳಿಗೆ ಕೊಡಲಿಯೇಟು ಹಾಕಿ ಆ ಮೂಲಕ ಕಾಡು ಪ್ರಾಣಿಗಳ ನೆಲೆಯನ್ನು ಬಲಿಕೊಡಬೇಕಾಗುತ್ತದೆ ಎಂಬುದನ್ನು ಲೆಕ್ಕಿಸದೆ ಕೈಗೆತ್ತಿಕೊಂಡ ಯೋಜನೆಗೆ ಈಗ ಹಿನ್ನಡೆಯಾಗಿದೆ.

ವಿವಾದಿತ ಎತ್ತಿನಹೊಳೆ ಯೋಜನೆ ಚುರುಕು, ಭೂಸ್ವಾಧೀನ ಕುರಿತು ರೈತರೊಂದಿಗೆ ರಮೇಶ್ ಜಾರಕಿಹೊಳಿ‌ ಚರ್ಚೆ

ಪರಿಸರ ಹೋರಾಟಕ್ಕೆ ಜಯ: ಶಿಶಿಲ-ಭೈರಾಪುರ ರಸ್ತೆ ಆಗಲೇಬೇಕು ಎಂಬುದು ಸ್ಥಳೀಯರು ಮತ್ತು ರಾಜಕಾರಣಿಗಳ ಅಭಿಮತವಾಗಿತ್ತು. ರಸ್ತೆಗಾಗಿ 40 ವರ್ಷಗಳಿಂದ ಹೋರಾಟವೂ ನಡೆಯುತ್ತಿತ್ತು. ಆದರೆ, ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕಕ್ಕೆ ಈಗಾಗಲೇ ಸಾಕಷ್ಟು ರಸ್ತೆಗಳು ಇರುವುದರಿಂದ ಅತಿಸೂಕ್ಷ್ಮ ಪರಿಸರಕ್ಕೆ ಹಾನಿ ಮಾಡಿ ಮತ್ತೊಂದು ಪರ್ಯಾಯ ರಸ್ತೆ ನಿರ್ಮಿಸುವ ಅಗತ್ಯವಿಲ್ಲಎಂಬುದು ಪರಿಸರವಾದಿಗಳ ನಿಲುವಾಗಿತ್ತು.

ಭಾರತ್‌ ಮಾಲಾ-2ನಲ್ಲಿ ಚಿತ್ರದುರ್ಗ-ದಕ್ಷಿಣ ಕನ್ನಡ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಸರ್ವೆ ಕಾರ‍್ಯವೂ ಪೂರ್ಣಗೊಂಡಿತ್ತು. ಜನಾಭಿಪ್ರಾಯ ಸಭೆಗಳನ್ನು ನಡೆಸಿದ್ದು, ಶಿಶಿಲ-ಭೈರಾಪುರ ರಸ್ತೆ ಆಗಲೇಬೇಕು ಎಂದು ಜನ ಆಗ್ರಹಿಸಿದ್ದರು. ಇದಕ್ಕೆ ಪರಿಸರವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಒಂದು ವರ್ಷದಲ್ಲಿ ಕಡಿದು ಗುಡ್ಡೆ ಹಾಕಿದ್ದೇನು? 'ಆಪರೇಷನ್'‌ ಒಳಗಾದವರಿಗೆ ಕಾಂಗ್ರೆಸ್ ಪ್ರಶ್ನೆ

ಎತ್ತಿನಭುಜ ಪರ್ವತವನ್ನು ಒಳಗೊಂಡಿರುವ ಶಿಶಿಲ, ಆನೆ ಮತ್ತು ಹುಲಿ ಕಾರಿಡಾರ್‌ ಆಗಿದೆ. ಮೂಡಿಗೆರೆ ಮತ್ತು ನೆಲ್ಯಾಡಿ ನಡುವಿನ ಪಶ್ಚಿಮಘಟ್ಟ ಅಧಿಕ ಸಾಂದ್ರತೆಯ ಮಳೆಕಾಡು ಹೊಂದಿದೆ. ಈ ಮಾರ್ಗದಲ್ಲಿ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌ನ ಡಿ.ವಿ.ಗಿರೀಶ್‌, ವೈಲ್ಡ್‌ ಕ್ಯಾಟ್‌-ಸಿ ಸಂಘಟನೆಯ ಶ್ರೀದೇವ್‌ ಹುಲಿಕೆರೆ, ರಾಜ್ಯ ವನ್ಯಜೀವಿ ಮಂಡಳಿ ಮಾಜಿ ಸದಸ್ಯ ಸ.ಗಿರಿಜಾಶಂಕರ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿದ್ದರು.

ಅರಣ್ಯ ಇಲಾಖೆ ಮತ್ತು ರಾಜ್ಯ ವನ್ಯಜೀವಿ ಮಂಡಳಿ ವಿರೋಧದ ನಡುವೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಾಂತ್ರಿಕ, ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಪರಿಗಣನೆ ಆಧಾರದ ಮೇಲೆ ರಸ್ತೆ ಜೋಡಣೆ ನಿಗದಿಪಡಿಸಿದೆ. ಅರಣ್ಯ ಪ್ರದೇಶವನ್ನು ತಪ್ಪಿಸಲು ಯೋಜನೆ ವಿಫಲವಾಗಿದೆ ಎಂದು ಪರಿಸರವಾದಿಗಳು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಪರ್ಯಾಯ ಮಾರ್ಗ ಆಯ್ದುಕೊಳ್ಳುವುದು ಎನ್‌ಎಚ್‌ಐಎಗೆ ಅನಿವಾರ‍್ಯವಾಗಿದೆ.

ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್‌ಗೆ ಕೊರೊನಾ ಸೋಂಕು ದೃಢ

ಶಿಶಿಲ-ಭೈರಾಪುರ ಮಾರ್ಗದಲ್ಲಿ ಹೆದ್ದಾರಿ ನಿರ್ಮಾಣವಾದರೆ ಕಾಡಿನ ಸಹಜತೆಯನ್ನು ಅಸ್ತವ್ಯಸ್ತಗೊಳಿಸುತ್ತದೆ. ಪಶ್ಚಿಮಘಟ್ಟದ ಅಳಿವಿನ ಅಂಚಿನಲ್ಲಿರುವ ವನ್ಯಜೀವಿಗಳಿಗೆ ಅಪಾಯಕಾರಿಯಾಗಿದೆ. ನೇತ್ರಾವತಿ ನದಿ, ಮಳೆಕಾಡುಗಳ ಸಹಜತೆಗೆ ಧಕ್ಕೆಯಾಗುತ್ತದೆ. ಇದು ಮಾನವ ಮತ್ತು ಆನೆ ಸಂಘರ್ಷಕ್ಕೂ ಕಾರಣವಾಗುತ್ತದೆ ಎಂಬುದನ್ನು ಹೈಕೋರ್ಟ್‌ ಗಂಭೀರವಾಗಿ ಪರಿಗಣಿಸಿದೆ. ಪರಿಸರವಾದಿಗಳು ಒದಗಿಸಿದ ವೈಜ್ಞಾನಿಕ ಸಂಗತಿಗಳ ಆಧಾರದಲ್ಲಿಉದ್ದೇಶಿತ ರಸ್ತೆಯ ಎರಡು ಪ್ಯಾಕೇಜ್‌ಗಳನ್ನು ಕೈಬಿಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಆದೇಶಿಸಿದೆ. ಇದು ಕಾರ‍್ಯಸಾಧು ಯೋಜನೆಯಲ್ಲಎಂಬುದನ್ನು ಹೈಕೋರ್ಟ್‌ ಹೇಳಿದೆ.
ಪರಿಸರದ ಸೂಕ್ಷ್ಮತೆ ಹಾಳು ಮಾಡುವ, ಪರಿಸರದ ಮೇಲೆ ಉಂಟಾಗುವ ಗಂಭೀರ ಪರಿಣಾಮ ಊಹಿಸದೆ ರೂಪಿಸಿರುವ ಕಾರ‍್ಯಸಾಧುವಲ್ಲದ ಯೋಜನೆ ರದ್ದುಪಡಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಇದು ನ್ಯಾಯಾಂಗ ವ್ಯವಸ್ಥೆ ಬಗ್ಗೆ ಜನರ ಭರವಸೆ ಮತ್ತು ವಿಶ್ವಾಸವನ್ನು ಹೆಚ್ಚಿಸಿದೆ.
-ಡಿ.ವಿ. ಗಿರೀಶ್‌, ಭದ್ರಾ ವನ್ಯಜೀವಿ ಸಂರಕ್ಷಣಾ ಟ್ರಸ್ಟ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ