ಆ್ಯಪ್ನಗರ

ಮಂಗಳೂರು: ಸಮೋಸ ತಿನ್ನಲು ಬಂದವರಿಂದ ಗುಂಡಿನ ದಾಳಿ; ಇಬ್ಬರಿಗೆ ಗಾಯ..!

ಸಮೋಸಾ ತಿನ್ನುವ ನೆಪದಲ್ಲಿ ಬಂದ ದುಷ್ಕರ್ಮಿಗಳು ಹೋಟೆಲ್‌ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಲ್ಲದೆ, ಪರಾರಿಯಾಗುವ ವೇಳೆ ಯುವಕರಿಬ್ಬರ ಮೇಲೆ ಶೂಟೌಟ್‌ ನಡೆಸಿದ ಘಟನೆ ಮಂಗಳೂರಿನ ನಗರದ ಫಳ್ನೀರ್‌ ಬಳಿ ಜ್ಯೂಸ್‌ ಅಂಗಡಿ ಬಳಿ ನಡೆದಿದೆ.

Vijaya Karnataka Web 31 Oct 2020, 10:16 am
ಮಂಗಳೂರು: ನಗರದ ಫಳ್ನೀರ್‌ ಬಳಿ ಜ್ಯೂಸ್‌ ಅಂಗಡಿಗೆ ಬಂದ ತಂಡ ಕ್ಷುಲ್ಲಕ ಕಾರಣಕ್ಕೆ ಹೋಟೆಲ್‌ ಸಿಬ್ಬಂದಿಗೆ ಹಲ್ಲೆ ನಡೆಸಿದ್ದಲ್ಲದೆ, ಪರಾರಿಯಾಗುವ ವೇಳೆ ಯುವಕರಿಬ್ಬರ ಮೇಲೆ ಶೂಟೌಟ್‌ ನಡೆಸಿದ ಘಟನೆ ಶುಕ್ರವಾರ ಸಂಜೆ ನಡೆದಿದೆ.
Vijaya Karnataka Web shootout


ಫಳ್ನೀರ್‌ ನಿವಾಸಿ ಸಾಹಿಲ್‌ (30) ಮತ್ತು ಸುರತ್ಕಲ್‌ ನಿವಾಸಿ ಸೈಫ್‌ (25) ಗಾಯಗೊಂಡವರು. ಸಿದ್ದೀಕ್‌ ಮತ್ತು ಹಾಝಿಲ ಎಂಬವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.

ತುಳು ಭಾಷೆಗೆ ಅಧಿಕೃತ ಮಾನ್ಯತೆ ಕೊಡಲು ಸರ್ಕಾರವನ್ನು ಒತ್ತಾಯಿಸುವಂತೆ ಡಾ.ವೀರೆಂದ್ರ

ಘಟನೆ ವಿವರ: ಫಳ್ನೀರ್‌ನ ಜ್ಯೂಸ್‌ ಅಂಗಡಿಯೊಂದಕ್ಕೆ ಸಂಜೆ 5.30ರ ಸುಮಾರಿಗೆ ತಂಡವೊಂದು ಆಗಮಿಸಿತ್ತು. ಈ ಸಂದರ್ಭ ಸಮೋಸ ತಿಂಡಿ ವಿಚಾರದಲ್ಲಿಇಬ್ಬರು ಹೋಟೆಲ್‌ ಸಿಬ್ಬಂದಿ ಜತೆ ಜಗಳವಾಡಿದ್ದಾರೆ. ಬಳಿಕ ಹೊೖ-ಕೈ ನಡೆದು ಹೋಟೆಲ್‌ನ ಕಿಟಕಿ ಗಾಜು, ಪೀಠೋಪಕರಣ ಧ್ವಂಸಗೊಳಿಸಿದ ತಂಡ ಪರಾರಿಗೆ ಯತ್ನಿಸಿದೆ.

ಕೂಡಲೇ ಹೋಟೆಲ್‌ ಸಿಬ್ಬಂದಿ ಅವರನ್ನು ಹಿಡಿಯಲು ಯತ್ನಿಸಿದಾಗ ದುಷ್ಕರ್ಮಿಗಳು ಎರಡು ಸುತ್ತು ಗುಂಡು ಹಾರಿಸಿದ್ದಾರೆ. ಇದರಿಂದ ಇಬ್ಬರು ಗಾಯಗೊಂಡಿದ್ದಾರೆ. ಹೊಡೆದಾಟದಲ್ಲೂ ಇಬ್ಬರಿಗೆ ಗಾಯವಾಗಿದೆ. ಗಾಯಾಳುಗಳ ಪೈಕಿ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಬಿಜೆಪಿ ರಾಜ್ಯಾಧ್ಯಕ್ಷರ ತವರೂರು ಕಡಲತಡಿಯಲ್ಲಿ ರಾಜ್ಯ ಕಾರ್ಯಕಾರಿಣಿಗೆ ಭರದ ಸಿದ್ಧತೆ

ಇಬ್ಬರು ಪರಾರಿ: ಸ್ಥಳೀಯರು ಸೇರಿ ಇಬ್ಬರನ್ನು ಹಿಡಿದಿದ್ದು, ಇನ್ನಿಬ್ಬರು ಆಟೋ ರಿಕ್ಷಾದಲ್ಲಿ ಪರಾರಿಯಾಗಿದ್ದಾರೆ. ಮೇಲ್ನೋಟಕ್ಕೆ ತಿಂಡಿ ವಿಚಾರಕ್ಕೆ ಗಲಾಟೆಯಾಗಿದ್ದರೂ, ಘಟನೆಗೆ ಸ್ಪಷ್ಟ ಕಾರಣವೇನೆಂದು ತಿಳಿದು ಬಂದಿಲ್ಲ. ಘಟನಾ ಸ್ಥಳಕ್ಕೆ ಪಾಂಡೇಶ್ವರ ಪೊಲೀಸರು ಭೇಟಿ ನೀಡಿದ್ದಾರೆ. ಘಟನೆಯಲ್ಲಿಏರ್‌ ಪಿಸ್ತೂಲ್‌ನಿಂದ ಗುಂಡು ಹೊಡೆದಿರುವ ಸಾಧ್ಯತೆಯಿದ್ದು, ದುಷ್ಕರ್ಮಿಗಳ ಬಳಿ ಪಿಸ್ತೂಲ್‌ ಹೇಗೆ ಬಂತು ಎನ್ನುವ ನಿಟ್ಟಿನಲ್ಲೂ ಪೊಲೀಸ್‌ ತನಿಖೆ ಮುಂದುವರಿದಿದೆ. ಈ ಕುರಿತು ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ