ಆ್ಯಪ್ನಗರ

ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿಯೇ ತಿರುತ್ತೇವೆ: ಸಿಎಂ ಸಿದ್ದರಾಮಯ್ಯ

ರಾಜ್ಯ ಸರಕಾರದಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿಯೇ ಸಿದ್ಧ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Vijaya Karnataka Web 22 Oct 2017, 2:13 pm
ಮಂಗಳೂರು: ರಾಜ್ಯ ಸರಕಾರದಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿಯೇ ಸಿದ್ಧ. ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು‌ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Vijaya Karnataka Web tippu sultan jayanti cm siddaramaiah
ಟಿಪ್ಪು ಸುಲ್ತಾನ್ ಜಯಂತಿ ಆಚರಿಸಿಯೇ ತಿರುತ್ತೇವೆ: ಸಿಎಂ ಸಿದ್ದರಾಮಯ್ಯ


ಬಂಟ್ವಾಳದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆಗೆ ಆಗಮಿಸಿರುವ ಅವರು, ಭಾನುವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರವಾಗಿ ಮಾತನಾಡಿದರು.

ಸರಕಾರಿ‌ ಕಾರ್ಯಕ್ರಮ ನಡೆಸಲು ಯಾರದ್ದೇ ಅನುಮತಿಯ ಅಗತ್ಯ ಇಲ್ಲ. ಇದೇ ಯಡಿಯೂರಪ್ಪ ಅವರು ಟಿಪ್ಪು ವೇಷ ಧರಿಸಿ, ಖಡ್ಗ ಹಿಡಿದು ಟಿಪ್ಪು ಜಯಂತಿ ಆಚರಿಸಿಲ್ವಾ? ಅದನ್ನೇಕೆ ಬಿಜೆಪಿಯವರು ವಿರೋಧಿಸುವುದಿಲ್ಲ. ಇಂಥ ರಾಜಕೀಯಕ್ಕೆ ಸೊಪ್ಪು ಹಾಕುವ ಅಗತ್ಯ ಇಲ್ಲ ಎಂದು ಅವರು ಹೇಳಿದರು.

ಟಿಪ್ಪು ಜಯಂತಿ‌ ಆಚರಣೆಯಿಂದ ಯಾವ ಕಾನೂನು ಸುವ್ಯವಸ್ಥೆಯೂ ಹದಗೆಡುವುದಿಲ್ಲ. ಒಂದಿಬ್ಬರ ವಿರೋಧದಿಂದ ಏನೂ ಆಗುವುದಿಲ್ಲ ಎಂದರು.

ಸರಕಾರಿ ಶಿಷ್ಟಾಚಾರದಂತೆ ಆಹ್ವಾನ ಪತ್ರದಲ್ಲಿ ಎಲ್ಲರ ಹೆಸರನ್ನೂ ಅಧಿಕಾರಿಗಳು ಹಾಕಲಿದ್ದಾರೆ. ಯಾರು ಬರುತ್ತಾರೋ ಬರಲಿ. ಬಾರದವರನ್ನು ಕರೆದು ತರಲು ಸಾಧ್ಯವಿಲ್ಲ. ಬರುವುದು, ಬಿಡುವುದು ಅವರವರಿಗೆ ಬಿಟ್ಟ ವಿಚಾರ ಎಂದು ಕೇಂದ್ರ ಸಚಿವ ಅನಂತಕುಮಾರ್ ಹೆಗಡೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ